ಬೆಳ್ತಂಗಡಿ – ತುಳು ಟೈಮ್ಸ್ : ರಸ್ತೆ ದಾಟಲು ಅಜ್ಜನ ಜೊತೆ ನಿಂತುಕೊಂಡಿದ್ದ ಮಗುವಿಗೆ ಕಾರು ಢಿಕ್ಕಿಯಾಗಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಬೀಟಿಗೆ ಬಳಿ ರಾಷ್ಟೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಚಾರ್ಮಾಡಿ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ ಅವರ ಮೂರು ವರ್ಷದ ಮಗು ಮಹಮ್ಮದ್ ಹಝಿರಿನ್ ಮೃತಪಟ್ಟ ಕಂದಮ್ಮ.
ಈ ಬಗ್ಗೆ ಕಾರು ಚಾಲಕ ಮಹಮ್ಮದ್ ರಫೀಕ್ ಎಂಬವರ ಮೇಲೆ ದೂರು ದಾಖಲಾಗಿದೆ. ಡಿ. 3ರಂದು ಮಧ್ಯಾಹ್ನದ ವೇಳೆ ಅಜ್ಜನ ಜೊತೆಗೆ ತಿಂಡಿ ತರಲೆಂದು ಮಗು ಅಂಗಡಿಗೆ ತೆರಳಿದ್ದಾರೆ. ಹಿಂದಿರುಗಿ ರಸ್ತೆ ದಾಟುತ್ತಿದ್ದಾಗ ಚಾರ್ಮಾಡಿ ಕಡೆಯಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಕಾರು ಮಗುವಿಗೆ ಢಿಕ್ಕಿ ಹೊಡೆದಿದೆ.
ದೂರಕ್ಕೆ ಎಸೆಯಲ್ಪಟ್ಟ ಮಗುವನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ, ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Belthangady: Three year old boy lost his life after car being hit in Charmadi, Beetige. The victim is identified as Azlin Siddik.
ಇದನ್ನೂ ಓದಿ: ಪ್ರಮೋದ್ ಗಿಲ್ಲ ಚಾನ್ಸ್, ಹುದ್ದೆಯಲ್ಲಿಲ್ಲದ ಬೊಟ್ಯಾಡಿ ಪತ್ನಿಗೆ ಭೇಟಿ ಭಾಗ್ಯ !?
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











