ಬೆಳ್ತಂಗಡಿ : Tulu Times | ಉಪ್ಪಿನಂಗಡಿಯಿಂದ ಬೆಳ್ತಂಗಡಿಗೆ ಹೋಗುವಾಗ ಕರಾಯ ಎಂಬ ಪ್ರದೇಶ ಸಿಗುತ್ತದೆ. ಈ ಕರಾಯದ ಎಡಬದಿಯಲ್ಲಿ ಕಾಣಸಿಗುವುದೇ ಶ್ರೀ ಮಹಾಲಿಂಗೇಶ್ವರ ದೇವರ ದೇವ ಸನ್ನಿಧಿ. ಈ ದೇವಸ್ಥಾನ ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದೆ. ಅಲ್ಲದೇ ಹಲವು ವಿಶೇಷತೆಯನ್ನು ಹೊಂದಿರುವ ಪ್ರದೇಶವೂ ಹೌದು. ಇದೀಗ ಈ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿದ್ದು, ಡಿಸೆಂಬರ್ 16 ರಿಂದ ಧನುಪೂಜೆ ನಡೆಯಲಿದೆ.
ಹಿಂದಿನ ಕಾಲದಲ್ಲಿ ಈ ಪ್ರದೇಶದಲ್ಲಿ ಜಾತ್ರೋತ್ಸವಗಳು ಸುಮಾರು 5 ದಿನಗಳ ಕಾಲ ನಡೆದುಕೊಂಡು ಬಂದಿರುವ ಇತಿಹಾಸವಿದೆ. ಅಲ್ಲದೇ ಇಳಂತಿಲದ ಕುಂಬಾರರಿಗೂ ಇಲ್ಲಿರುವ ಶಿವನ ಸನ್ನಿಧಾನಕ್ಕೂ ಸಂಬಂಧವಿರುವುದು ಇಲ್ಲಿನ ಪುರಾಣಗಳಲ್ಲಿ ಕೇಳಿ ತಿಳಿಯಬಹುದು. ಅಲ್ಲದೇ ಪುರಾತತ್ವ ಇಲಾಖೆಯಲ್ಲಿಯೂ ಈ ದೇವಸ್ಥಾನದ ದಾಖಲೆಯನ್ನು ಕಾಣಬಹುದಾಗಿದೆ.
ಇಲ್ಲಿಗೆ ಅನೇಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶಿವನ ಮೊರೆ ಹೋಗುತ್ತಾರೆ. ಹಾಗಾಗಿ ಭಕ್ತರ ಆಶೋತ್ತರಗಳನ್ನು ಈಡೇರಿಸಿರುವ ಈಶ್ವರನಿಗೆ ಊರಿನವರೆಲ್ಲರೂ ಸೇರಿಕೊಂಡು ಜೀರ್ಣೋದ್ಧಾರ ಮಾಡಲು ಹೊರಟಿದ್ದು, ಕೆಲಸಗಳು ವೇಗವಾಗಿ ನಡೀತಾ ಇದೆ. ಪ್ರಶ್ನಾ ಚಿಂತನೆಯಲ್ಲಿ ಈ ದೇವಸ್ಥಾನಕ್ಕೆ ರಥ, ಕೊಡಿಮರ ಸೇರಿದಂತೆ ನೂತನ ಜೀರ್ಣೋದ್ಧಾರ ಕೆಲಸ ಎರಡು ವರ್ಷದ ಹಿಂದೆಯೇ ಆರಂಭವಾಗಿತ್ತು. ಇಲ್ಲಿ ರಥೋತ್ಸವ ನಿಂತೇ ಸುಮಾರು 60 ವರ್ಷ ಕಳೆದಿದೆ ಎನ್ನುವುದನ್ನು ಇಲ್ಲಿನ ಜನರು ಅಭಿಪ್ರಯಿಸುತ್ತಾರೆ. ಒಟ್ಟಾರೆಯಾಗಿ ಕಳೆದು ಹೋದ ಶಿವನ ದೇವಸ್ಥಾನದ ಸಂಭ್ರಮವನ್ನು ಮರು ತರುವ ಸಲುವಾಗಿ ಕೆಲಸ ಕಾರ್ಯಗಳು ನಡೆಯುತ್ತಿವೆ.
Special puja to be held at Karaya Sri Mahalingeshwara Temple from December 16 – ತುಳು ಟೈಮ್ಸ್
ಇದನ್ನೂ ಓದಿ :ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸ ಕಾನೂನು : ಚಾಲಕರ ಜೇಬಿಗೆ ಕತ್ತರಿ
========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/dcWSAiKNAZc?si=8-9vel7gP4Jl9XX5











