ಬೆಂಗಳೂರು: Tulu Times | ಬೀದಿ ನಾಯಿಗಳ ಹಾವಳಿ ಹೆಚ್ಚಾದಂತೆ, ಸರಕಾರವು ಕೆಲವು ಸುರಕ್ಷತಾ ಕ್ರಮಗಳನ್ನು ಹೇಳಿತ್ತು. ಬೀದಿಯಲ್ಲಿ ಓಡಾಡುವಾಗ ಹಿಂದೆಯಿಂದ ಬಂದು ಕಚ್ಚುವ ಅಥವಾ ಒಮ್ಮೆಲೇ ದಾಳಿ ಮಾಡುವ ಬೀದಿ ನಾಯಿಗಳ ವೀಡೀಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಂಡಿರುತ್ತೇವೆ. ಹೀಗಿರುವಾಗ, ಬೀದಿ ನಾಯಿಗಳ ಹಾವಳಿ ತಡೆ ಬಗ್ಗೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ. ಶಾಲೆಗಳ ಸುತ್ತಮುತ್ತ ಬೀದಿ ನಾಯಿಗಳ ಉಪಟಳ ತಡೆಯಲು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಬೀದಿ ನಾಯಿಗಳ ತಡೆಗಟ್ಟಲು ಶಿಕ್ಷಣ ಇಲಾಖೆಯಿಂದ ಈ ಆದೇಶ ಹೊರಡಿಸಲಾಗಿದ್ದು,ಎಲ್ಲಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ನಾಯಿಗಳ ಬಗ್ಗೆ ನಗರ, ಗ್ರಾಮಾಂತರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗೆ ಮಾಹಿತಿ ನೀಡಬೇಕು.ಶಿಕ್ಷಣ ಸಂಸ್ಥೆಗಳು ಗುರುತಿಸಿದ ಬೀದಿ ನಾಯಿಗಳ ಸ್ಥಳಾಂತರಕ್ಕೆ ಸಹಕಾರ ನೀಡುವುದು, ಆಶ್ರಯ ತಾಣ ನೀಡಲು ಸ್ಥಳೀಯ ಸಂಸ್ಥೆಗಳು ಸಹಕಾರ ನೀಡಬೇಕು. ಶಿಕ್ಷಣ ಸಂಸ್ಥೆಗಳಿಂದ ಒಮ್ಮೆ ಸ್ಥಳಾಂತರಿಸಿದರೆ ಮತ್ತೆ ಪ್ರವೇಶಿಸಬಾರದು. ಬೀದಿ ನಾಯಿಗಳ ಹಾವಳಿ ತಡೆಯಲು ಕಾಂಪೌಂಡ್ ನಿರ್ಮಿಸಬೇಕು. ಬೀದಿ ನಾಯಿ ಸ್ಥಳಾಂತರ ಬಗ್ಗೆ ಸ್ಥಳೀಯ ಸಂಸ್ಥೆಗಳ ಜೊತೆ ಸಮನ್ವಯ ಕಡ್ಡಾಯ ಮಾಡಿದರೆ ವಿದ್ಯಾರ್ಥಿಗಳಿಗೂ ಒಳ್ಳೆಯದು.
ಸಮನ್ವಯ ಸಾಧಿಸಲು ಶಿಕ್ಷಣ ಸಂಸ್ಥೆಗಳು ನೋಡಲು ಅಧಿಕಾರಿ ನೇಮಿಸಬೇಕು ಎಂದು ಮಾರ್ಗಸೂಚಿ ಪ್ರಕಟಿಸಲಾಗಿದೆ. The Education Department has also taken action to curb stray dogs – ತುಳು ಟೈಮ್ಸ್
ಇದನ್ನೂ ಓದಿ :ಉಡುಪಿ-ಹೈದರಾಬಾದ್ ಕೆಎಸ್‌ಆರ್‌ಟಿಸಿ ಎಸಿ ಸ್ಲೀಪರ್ ಬಸ್ ಸಂಚಾರ ಸ್ಥಗಿತ- ಸಚಿವರಿಗೆ ಪತ್ರ!
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=YidEwN1tcxy0SzfO











