ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಬಂಟ್ವಾಳ

ಬಂಟ್ವಾಳದಲ್ಲಿ ‘ಸತ್ಯ-ಧರ್ಮ’ ಜೋಡುಕರೆ ಬಯಲು ಕಂಬಳ ಧ್ವಜಾರೋಹಣ!

ಬಂಟ್ವಾಳ: Tulu Times | ಬಂಟ್ವಾಳದ ಉಳಿ ಗ್ರಾಮದ ಕಕ್ಯಪದವು ಮೈರ ಶ್ರೀರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಶನಿವಾರ ಪ್ರಾರಂಭಗೊಂಡ 13ನೇ ವರ್ಷದ  ‘ಸತ್ಯ-ಧರ್ಮ’ ಜೋಡುಕರೆ ಬಯಲು ಕಂಬಳದಲ್ಲಿ ಧ್ವಜಾರೋಹಣ ನೆರವೇರಿಸಿಸಲಾಯಿತು.

ಇದನ್ನೂ ಓದಿ: ಗಿಲ್ಲಿ ತಪ್ಪು ಮಾಡಿದ್ದ : ಮನೆಗೆ ಬಂದ ಅತಿಥಿಗಳಿಗೆ ಅವಮಾನ

ಈ ವೇಳೆ ಮಾಜಿ ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ಜಗನ್ನಾಥ ನಿರ್ಮಾಲ್ ಮಾತನಾಡಿ,  ತುಳುನಾಡಿನಲ್ಲಿ ಧಾರ್ಮಿಕ ನಂಬಿಕೆಯೊಂದಿಗೆ ಕೃಷಿಕರ ಮೂಲಕ ಆರಂಭಗೊಂಡ ಕಂಬಳ ಇಲ್ಲಿನ ಸಂಸ್ಕೃತಿಯನ್ನು ಜಗತ್ತಿಗೆ ಪ್ರತಿಬಿಂಬಿಸುತ್ತಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದನ್ನೂ ಓದಿ: ಟ್ರೆಂಡಿಂಗ್ 19 ನಿಮಿಷಗಳ ವೈರಲ್ ವೀಡಿಯೋ.. ತಪ್ಪು ಮಾಹಿತಿ ಲಿಂಕ್ ಮಾಡಲಾಯ್ತಾ..?

ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ ಅಧ್ಯಕ್ಷತೆ ವಹಿಸಿದ್ದರು. ಕಂಬಳ ಓಟಗಾರ ಸತೀಶ್ ದೇವಾಡಿಗ ಅಳದಂಗಡಿ ಅವರನ್ನು ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಸನ್ಮಾನಿಸಿದರು.  ಹೈದರಾಬಾದ್ ಎಂಇಪಿ ಎಂಜಿನಿಯರಿಂಗ್ ಸಂಸ್ಥೆಯ ಎಂಜಿನಿಯರ್ ಚಂದ್ರಶೇಖರ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ, ಕೃಷಿಕ ತನಿಯಪ್ಪ ಗೌಡ ಪೆಂರ್ಗಾಲು ಕಂಬಳ ಕರೆ ಉದ್ಘಾಟಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಈ ವರ್ಷದ ಅತೀ ಹೆಚ್ಚು ಚಳಿ : ದಿತ್ವಾ ಚಂಡಮಾರುತ ಎಫೆಕ್ಟ್

ಶ್ರೀರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ದಿನೇಶ ಪೂಜಾರಿ ಕುಕ್ಕಾಜೆ, ಉದ್ಯಮಿ ವಿಶ್ವನಾಥ ಪೂಜಾರಿ ಕಕ್ಯಪದವು, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಚಿದಾನಂದ ರೈ ಕಕ್ಯ, ಮಣಿನಾಲ್ಕೂರು ಬಿಲ್ಲವ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕಟದಡೆ, ಸಮಿತಿ ಕಾರ್ಯಾಧ್ಯಕ್ಷ ಲತೇಶ್ ಕುಕ್ಕಾಜೆ, ಪ್ರಮುಖರಾದ ರಂಜಿತ್ ಮೈರ, ಸುರೇಶ್ ಮೈರ, ಧನಂಜಯ ಶೆಟ್ಟಿ, ಸಾಂತಪ್ಪ ಪೂಜಾರಿ, ಕುಶಲ ಮೈರ, ಪುರುಷೋತ್ತಮ ಪೂಜಾರಿ, ಉಮೇಶ ಪೂಜಾರಿ, ವಸಂತ ರಾಮನಗರ, ಪುರಂದರ ಕುಕ್ಕಾಜೆ, ವಸಂತ ದೆಚ್ಚಾರು, ರಮೇಶ ಪೂಜಾರಿ ಮೈರ ಭಾಗವಹಿಸಿದ್ದರು. ಸಂಘಟಕ ಶಿವಾನಂದ ಮೈರ ಸ್ವಾಗತಿಸಿ, ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ..! ಇನ್ನು ಆಟ ಹೇಗಿರುತ್ತೆ..?

‘Truth-Religion’ flag hoisting in the open in Bantwal!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 170

You cannot copy content of this page