ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

ಮಂಗಳೂರಿನಲ್ಲಿ ತಾಯಿಗೆ ಹಿಗ್ಗಾಮುಗ್ಗ ಥಳಿಸಿದ ಪಾಪಿ ಮಗಳು..ಮತ್ತೆ ಏನಾಯ್ತು..?

ಮಂಗಳೂರು: Tulu Times | ಮಂಗಳೂರಿನಲ್ಲಿ ತಾಯಿಗೆ, ಮಗಳು ಹಿಗ್ಗಾಮುಗ್ಗ ಥಳಿಸುತ್ತಿರೋ ವಿಡಿಯೋ ವೈರಲ್ ಆಗಿದ್ದು,ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಒಂದು ಸಾವಿರ ಉದ್ಯೋಗಿಗಳಿಗೆ ಲಂಡನ್ ಟ್ರಿಪ್ : ಟ್ರಿಪ್ ನಡೆಸಲು ಒಂದು ತಿಂಗಳ ಪ್ಲಾನ್

ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,  ಮೂಡುಶೆಡ್ಡೆ ಗ್ರಾ.ಪಂ ನಲ್ಲಿ ತಾಯಿಗೆ ಮಗಳು ಥಳಿಸಿದ್ದಾಳೆ. ತನ್ನ ಹೆತ್ತ ತಾಯಿಗೆ  ಚಪ್ಪಲಿಯಲ್ಲಿ ಮಗಳು ಥಳಿಸೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇನ್ನು ಸ್ಥಳೀಯ ಗ್ರಾಮ ಪಂಚಾಯತ್ ಗೆ ಮಗಳ ಮೇಲೆ ದೂರನ್ನು ಹೊತ್ತು ಪ್ರತೀ ದಿನ ತಾಯಿ ಬರುತ್ತಿದ್ದಳಂತೆ.

ಇದನ್ನೂ ಓದಿ: ಬೆಂಗಳೂರಿನಿಂದ ತಿರುಪತಿಗೆ ಕೆಎಸ್ ಆರ್ ಟಿಸಿ ಬಸ್ ಗಳ ಹೆಚ್ಚಳಕ್ಕೆ ಪ್ರಯಾಣಿಕರ ಮನವಿ…!

ಪದೇ ಪದೇ ಮಗಳ ಮೇಲೆ ದೂರು ಹೊತ್ತು ಠಾಣೆಗೆ ಹಾಗೂ ಪಂಚಾಯತ್ ಗೆ  ತಾಯಿ ಹೋಗುತ್ತಿದ್ದಳು ಎನ್ನಲಾಗಿದೆ.  ಮೂಲತಃ  ಉತ್ತರ ಕರ್ನಾಟಕ ಮೂಲದ ಕುಟುಂಬ ಇದಾಗಿದ್ದು,  ಕಳೆದೆ ಮೂರು ದಿನಗಳ ಹಿಂದೆ ಈ  ಘಟನೆ ನಡೆದಿದೆ. ಇನ್ನು ಈ ಪ್ರಕರಣದ ಕುರಿತು ಈವರೆಗೂ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಅಂಧ ಮಹಿಳಾ ಕ್ರಿಕೆಟ್ ತಂಡವನ್ನು ಶ್ಲಾಘಿಸಿದ ನರೇಂದ್ರ ಮೋದಿ…!

ಇನ್ನು ಉತ್ತರಕರ್ನಾಟಕದ ಕುಟುಂಬದಲ್ಲಿ ಏನು ಕಲಹ ಇದೆ ಅನ್ನೋದು ಇನ್ನೂ ತಿಳಿದುಬಂದಿಲ್ಲ,  ಈ ರೀತಿಯಾದಂತಹ ಸಮಸ್ಯೆಗಳು ಕಂಡುಬಂದರೆ ನಿಮ್ಮ ಸ್ಥಳೀಯ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದು.ದೈಹಿಕ ಥಳಿತವು ಕಾನೂನುಬಾಹಿರವಾಗಿದ್ದು, ಇದು ದೌರ್ಜನ್ಯದ ಅಡಿಯಲ್ಲಿ ಬರುತ್ತದೆ. ನೀವು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬಹುದು. ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ದೈಹಿಕ ದೌರ್ಜನ್ಯವು ಶಿಕ್ಷಾರ್ಹ ಅಪರಾಧವಾಗಿದೆ. ತುರ್ತು ಸಂದರ್ಭಗಳಲ್ಲಿ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದು.  ಈ ರೀತಿಯಾದಂತಹ ಘಟನೆಗಳು ನಿಮ್ಮ ಸಮೀಪ ಕಂಡುಬಂದರೆ ತಕ್ಷಣವೇ ಸಂಬಂಧಪಟ್ಟವರಿಗೆ ದೂರು ನೀಡಬಹುದು.

The wicked daughter who brutally beat her mother in Mangalore..what happened next..?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 170

You cannot copy content of this page