ಬೆಂಗಳೂರು: Tulu Times |ಇತ್ತೀಚೆಗೆ ವಿಪರೀತ ಚಳಿಯ ವಾತಾವರಣವಿದ್ದು, ಬೆಳಗೆದ್ದರೆ ತಣ್ಣನೆಯ ಶೀತ ಮೈಯನ್ನು ಕೊರೆಯುತ್ತದೆ. ಇದರಿಂದ ಬೆಳಗ್ಗೆ ಏಳೋಕೆ ಉದಾಸೀನ ಭಾವನೆ ಶುರುವಾಗುತ್ತದೆ.
ಇದೀಗ ದಟ್ಟವಾದ ಮಂಜು ಇರುವುದರಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ವಿಳಂಬವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ 5.30 ರಿಂದ 41 ವಿಮಾನಗಳು ವಿಳಂಬವಾಗಿವೆ ಎಂದು ವಕ್ತಾರರು ತಿಳಿಸಿದ್ದಾರೆ.ವಾತಾವಣದಲ್ಲಿ ದಟ್ಟವಾದ ಮಂಜು ಇದಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: ನಾನು ನಂದಿನಿ-ಸಂಜಿತ್ ಹೆಗ್ಡೆ ಸಖತ್ ಫನ್ ಸಾಂಗ್..ವೈರಲ್ !
ಬೆಂಗಳೂರಿನಲ್ಲಿ ಇಂದು ಮುಂಜಾನೆ ದಟ್ಟವಾದ ಮಂಜು ಕವಿದ ವಾತಾವರಣ ಇತ್ತು, ವಿಶೇಷವಾಗಿ ವಿಮಾನ ನಿಲ್ದಾಣದಂತಹ ಕೆಲವು ಪ್ರದೇಶಗಳಲ್ಲಿ. ಪ್ರಸ್ತುತ, ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಪ್ರಸ್ತುತ ತಾಪಮಾನವು ಸರಿಸುಮಾರು 24°C ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25°C ಮತ್ತು 16°C ಇರಬಹುದು ಎಂದು IMD ಮುನ್ಸೂಚನೆ ನೀಡಿದೆ. ಸಾಮಾನ್ಯವಾಗಿ ಮೋಡ ಕವಿದ ಆಕಾಶವಿರುತ್ತದೆ ಮತ್ತು ಮುಂಜಾನೆ ವೇಳೆಗೆ ಕೆಲವು ಪ್ರದೇಶಗಳಲ್ಲಿ ಮಂಜು/ಮಂಜಿನ ಹನಿಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಸಿಎಂ-ಡಿಸಿಎಂ ಮುಖಾಮುಖಿಗೆ ಮುನ್ನ ಇಂದು ನಿರ್ಣಾಯಕ ಸಭೆ!
ನವೆಂಬರ್‌ನಿಂದ ಫೆಬ್ರವರಿವರೆಗೆ ಚಳಿಗಾಲದ ಅವಧಿಯಲ್ಲಿ ಮುಂಜಾನೆ 3 ರಿಂದ 8:30 ರ ನಡುವೆ ದಟ್ಟವಾದ ಮಂಜು ಸಾಮಾನ್ಯವಾಗಿದೆ. ಈ ಕಾರಣದಿಂದಾಗಿ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗಿನ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೆಚ್ಚಿನ ನಿಖರ ಹವಾಮಾನ ಮಾಹಿತಿಗಾಗಿ, ಭಾರತೀಯ ಹವಾಮಾನ ಇಲಾಖೆ (IMD) ವೆಬ್‌ಸೈಟ್ ಭೇಟಿ ನೀಡಿದರೆ ನಿಮಗೆ ನಿಖರವಾದ ಮಾಹಿತಿ ಸಿಗುತ್ತದೆ.
ಪ್ರಯಾಣಿಕರಿಗೆ ಕೆಲವೊಂದು ಸಲಹೆಗಳನ್ನು ನೋಡೋದಾದ್ರೆ ಹವಾಮಾನ ಮುನ್ಸೂಚನೆ ಪರಿಶೀಲಿಸಿಕೊಂಡು ಪ್ರಯಾಣಕ್ಕೆ ಮೊದಲು ಹವಾಮಾನ ಮುನ್ಸೂಚನೆಯನ್ನು ಪರಿಶೀಲಿಸಬೇಕು. ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿಕೊಳ್ಳಿ, ವಿಮಾನ ವಿಳಂಬದ ಬಗ್ಗೆ ಇತ್ತೀಚಿನ ಮಾಹಿತಿಗಾಗಿ ನಿಮ್ಮ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿ. ವಿಮಾನ ನಿಲ್ದಾಣದ ಸೂಚನೆಗಳನ್ನು ಗಮನಿಸಿಕೊಂಡು, ವಿಮಾನ ನಿರ್ವಹಣೆಯ ಬಗ್ಗೆ ಜಾಗರೂಕರಾಗಿರಿ.
Dense fog.. Flight delays at Kempegowda Airport..! – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











