ARUN KUMAR PUTTILA ಸಂಸಾರವೇ ಬೇಡ ಅಂದ್ಕೊಂಡಿದ್ರಾ? ಈ ಬಗ್ಗೆ ಪುತ್ತಿಲರ ಸಂದರ್ಶದಲ್ಲಿ ಇತ್ತೀಚೆಗೆ ವಿಶೇಷ ವಿಷಯವೊಂದು ಬಹಿರಂಗಗೊಂಡಿದೆ.ನಾಯಕರ ಜೀವನದಲ್ಲಿ ತ್ಯಾಗ ತುಂಬಾನೇ ಇಂಪಾರ್ಟೆಂಟ್.ಸಾಮಾಜಿಕವಾಗಿ ಹೆಚ್ಚು ಸಮಯ ಕಳೆಯಬೇಕಾಗಿರುವುದರಿಂದ ಮನೆ ಕಡೆಯಂತೂ ಗಮನ ಕೊಡುವುದು ತುಂಬಾನೆ ಕಷ್ಟ.ಎಲೆಕ್ಷನ್ ಅಖಾಡಕ್ಕೆ ಇಳಿದರಂತೂ ಮನೆ ಸಂಸಾರದ ನೆನಪಿರುವುದೇ ಇಲ್ಲ.ಹೀಗಿರುವಾಗ ಮನೆಯಲ್ಲಿರುವ ಪತ್ನಿ ಮಕ್ಕಳಿಗೆ ಮುನಿಸು ಶುರುವಾಗುವುದು ಸಹಜ.ಇಂತಹ ವೈಯುಕ್ತಿಕ ಜೀವನದ ವಿಚಾರಗಳನ್ನು ಅರುಣ್ ಕುಮಾರ್ ಪುತ್ತಿಲ ಹಂಚಿಕೊಂಡಿದ್ದಾರೆ.
ಹೋರಾಟದ ದಿನಗಳನ್ನು ಆರಂಭಿಸುವಾಗ ಅರುಣ್ ಕುಮಾರ್ ಪುತ್ತಿಲ ಅವರಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸುವ ಇಚ್ಚೆ ಇರಲಿಲ್ಲ.ಸಂಪೂರ್ಣವಾಗಿ ಸಮಾಜಕ್ಕೆ ಅರ್ಪಿಸಿಕೊಳ್ಳುವ ಇರಾದೆಯಲ್ಲಿದ್ದರು.ಧರ್ಮದ ಕೆಲಸವನ್ನು ಮಾಡಬೇಕು.ಆ ಮೂಲಕವಾಗಿ ಜನರಿಗೆ ಅನೂಕೂಲವಾಗುವ ವ್ಯವಸ್ಥೆ ಮಾಡಬೇಕು ಎಂಬ ಇಚ್ಚೆ ಅವರದ್ದಾಗಿತ್ತು.ಸಾಂಸಾರಿಕ ಬಂಧನಕ್ಕೆ ಒಳಪಟ್ಟಲ್ಲಿ ಸಮಾಜಸೇವೆ ಕಷ್ಟವಾಗುತ್ತದೆ.ಎಂಬುದು ಅರುಣ್ ಪುತ್ತಿಲರ ಆರಂಭದ ನಿಲುವಾಗಿತ್ತು.ಆದರೆ ಕುಟುಂಬದವ್ರ ಒತ್ತಾಯಕ್ಕೆ ಮದುವೆ ಬಂಧನಕ್ಕೆ ಒಳಪಟ್ಟೆ ಎಂಬ ವಿಚಾರವನ್ನು ಅರುಣ್ ಪುತ್ತಿಲ ವಿವರಿಸಿದ್ದಾರೆ.
ಮದುವೆಯಾದ್ಮೇಲೆ ತುಂಬಾ ಸಮಯವನ್ನು ಪತ್ನಿ ಮತ್ತು ಮಕ್ಕಳ ಜೊತೆ ಕಳೆಯುವುದಕ್ಕೆ ಸಾಧ್ಯವಾಗಿಲ್ಲ ಈ ಬಗ್ಗೆ ಬೇಸರ ಇದೆ.ನನಗಿಂತ ಹೆಚ್ಚಿನ ಬೇಸರ ಮನೆಯವರಿಗೆ ಇರಬಹುದು ಎಂಬುದಾಗಿ ಪುತ್ತಿಲ ಹೇಳಿದ್ದಾರೆ.ಸಾಮಾಜಿಕ ಜೀವನಕ್ಕೆ ಬಂಧಮೇಲೆ ಸಂಸಾರಕ್ಕೆ ಸಮಯ ಕೊಡುವುದು ಕಷ್ಟವಾಗುತ್ತದೆ ಎಂಬುದಾಗಿ ಪುತ್ತಿಲ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಪುತ್ತಿಲ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ,ಅಧಿಕೃತವಾಗಿ ಬಿಜೆಪಿ ಜೊತೆ ಗುರುತಿಸ್ಕೊಂಡು,ಸಾರ್ವಜನಿಕ ಹೋರಾಟಗಳಲ್ಲಿ ಬ್ಯುಸಿಯಾಗಿದ್ದಾರೆ.
ಕಳೆದ ವಿಧಾಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತು ಉತ್ತಮ ಸಂಖ್ಯೆಯ ಮತಗಳನ್ನು ಸಂಪಾದಿಸಿದ್ದರು.
ಅರುಣ್ ಕುಮಾರ್ ಪುತ್ತಿಲ ಅವರು ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅದರಲ್ಲೂ ವಿಶೇಷವಾಗಿ(http://Puttur Assembly constituency ) ವಿಧಾನಸಭಾ ಕ್ಷೇತ್ರದ ರಾಜಕಾರಣ ಮತ್ತು ಹಿಂದೂಪರ ಚಟುವಟಿಕೆಗಳಿಗೆ ಸಂಬಂಧಿಸಿದ ಒಬ್ಬ ಪ್ರಮುಖ ವ್ಯಕ್ತಿ.
ಹಿಂದುತ್ವದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಪುತ್ತಿಲರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದಾಗ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.ಪುತ್ತೂರಿಗೆ ಪುತ್ತಿಲ ಅನ್ನೋ ಸ್ಲೋಗನ್ ನಲ್ಲಿ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದ್ರು.
ಬಿಜೆಪಿಯ ಭದ್ರಕೋಟೆಯಾಗಿದ್ದ ಪುತ್ತೂರು ಪುತ್ತಿಲ ಅಬ್ಬರಕ್ಕೆ ನುಚ್ಚುನೂರಾಗಿತ್ತು.ನಂತರದಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಪುತ್ತಿಲ ಮತ್ತೇ ಬಿಜೆಪಿ ಸೇರ್ಪಡೆಗೊಂಡ್ರು.ಪುತ್ತಿಲ ಪರಿವಾರ ಜೊತೆಗೆ 2024 ರಲ್ಲಿ ಪುನ ಬಿಜೆಪಿಗೆ ಸೇರ್ಪಡೆಯಾದರು.ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪುತ್ತಿಲರಿಗೆ ಬಿಜೆಪಿಯಿಂದ ಟಿಕೆಟ್ ಸಿಗುತ್ತೆ ಅನ್ನೋ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ.ಹೇಗಾದರೂ ಮಾಡಿ ಪುತ್ತಿಲರನ್ನು ಪುತ್ತೂರಿನ ಎಂ.ಎಲ್.ಎ ಮಾಡಬೇಕು ಅನ್ನೋ ಹುಮ್ಮಸ್ಸಿನಲ್ಲಿ ಪುತ್ತಿಲ ಪರಿವಾರದ ಕಾರ್ಯಕರ್ತರಿದ್ದಾರೆ.ಮುಂದಿನ ವಿಧಾಸಭೆ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಗ್ಗೆ ಈಗಲೇ ಬೇರೆ ಬೇರೆ ರೀತಿಯ ಕುತೂಹಲ ಇರುವುದಂತೂ ಸತ್ಯ.
ಇದನ್ನೂ ಓದಿ:I T I ಪಾಸಾದವರಿಗೆ NORTH WESTERN RAILWAY ಇಲಾಖೆಯಲ್ಲಿ ಅವಕಾಶ











