ಬ್ರೇಕಿಂಗ್ ನ್ಯೂಸ್
ಕರ್ನಾಟಕ

Sabarimala Temple: ಶಬರಿಮಲೆಗೆ ಹೋಗುವ ಭಕ್ತರಿಗೆ ಶಾಕ್‌ ನೀಡಿದ ಕೇರಳ ಸರ್ಕಾರ..!

Sabarimala Temple: ಧಾರ್ಮಿಕ ಪುಣ್ಯಕ್ಷೇತ್ರ ಶಬರಿಮಲೆಗೆ ಅಯ್ಯಪ್ಪನ ಭಕ್ತರು ದೇಶದ ಮೂಲೆ ಮೂಲೆಯಿಂದ ಶಬರಿಮಲೆಯತ್ತ ಯಾತ್ರೆ ಹೊರಡುತ್ತಾರೆ, ಈ ವರ್ಷ ಕೇರಳ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.

ಕೇರಳ ಸರ್ಕಾರದಿಂದ ಹೊಸ ರೂಲ್ಸ್‌ ಏನು..?

ಈಗಾಗಲೇ ಭಕ್ತರು  ಹೆಚ್ಚಿನ ಸಂಖ್ಯೆಯಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.   ಈ ಬಾರಿ ಕೇರಳ ಸರ್ಕಾರ ಯಾತ್ರೆ ಕೈಗೊಂಡಿರುವವರಿಗೆ ಮಹತ್ವದ ಆದೇಶವನ್ನು ಹೊರಡಿಸಿದೆ. ಭಕ್ತರು ಈ ನಿಯಮವನ್ನು ಪಾಲಿಸಬೇಕು ಎಂದು  ಸೂಚನೆ ನೀಡಿದೆ. ಕೇರಳದಲ್ಲಿ ಮೆದುಳು ಜ್ವರ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ಹಿನ್ನೆಲೆ ಭಕ್ತರಿಗೆ ನದಿ ಸ್ನಾನ ಸೇರಿದಂತೆ ಆರೋಗ್ಯ ಇಲಾಖೆಯಿಂದ ಸಲಹೆ ನೀಡಲಾಗಿದೆ.  ನವೆಂಬರ್ 17ರಿಂದ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಲಿರುವ ಕಾರಣ  ಭಕ್ತರಿಗೆ ಸೂಚನೆ ನೀಡಿದೆ.

ಶಬರಿಮಲೆ ಯಾತ್ರೆ ವೇಳೆ ಆರೋಗ್ಯ ಸಮಸ್ಯೆ ಕಂಡುಬಂದರೆ ಏನು ಮಾಡಬೇಕು..?

ಶಬರಿಮಲೆ ನದಿಗಳಲ್ಲಿ ಸ್ನಾನ ಮಾಡುವ ಭಕ್ತರು ತಮ್ಮ ಮೂಗಿಗೆ ನೀರು ಬರದಂತೆ ನೋಡಿಕೊಳ್ಳಬೇಕು, ನದಿಗಳಲ್ಲಿ ಸ್ನಾನ ಮಾಡುವ ಬಗ್ಗೆ ಎಚ್ಚರಿಕೆ ವಹಿಸಬೇಕು.ಶಬರಿಮಲೆ ಯಾತ್ರೆಗೆ ತಯಾರಿ ನಡೆಸುವಾಗ ನಿಯಮಿತ ಔಷಧಿಗಳನ್ನು ನಿಲ್ಲಿಸಬಾರದು. ಶಬರಿಮಲೆ ಭಕ್ತರ ಮೂಗಿನೊಳಗೆ ನೀರು ಬರದಂತೆ ಜಾಗ್ರತೆ ವಹಿಸಬೇಕು. ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಯಾತ್ರಿಕರು ತಮ್ಮ ಆರೋಗ್ಯ ದಾಖಲೆಗಳು ಮತ್ತು ಔಷಧಿಗಳನ್ನು ಜೊತೆಯಲ್ಲೇ ಕೊಂಡೊಯ್ಯಬೇಕು.  ಯಾತ್ರಿಕರು ನಿಧಾನವಾಗಿ ಹತ್ತಲು, ವಿರಾಮಗಳನ್ನು ತೆಗೆದುಕೊಳ್ಳಲು ಮತ್ತು ಆಯಾಸ, ಎದೆ ನೋವು, ಉಸಿರಾಟದ ತೊಂದರೆ ಅಥವಾ ದೌರ್ಬಲ್ಯವನ್ನು ಅನುಭವಿಸಿದರೆ ವೈದ್ಯಕೀಯ ಸಹಾಯವನ್ನು ಪಡೆಯಲು ಸೂಚಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಭಕ್ತರು 04735 203232 ಸಹಾಯವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಯಾತ್ರಿಕರು ಏನೆಲ್ಲ ಗಮನವಿಟ್ಟುಕೊಳ್ಳಬೇಕು..?

ಶಬರಿಮಲೆಯಲ್ಲಿ ಬಯಲು ಮಲವಿಸರ್ಜನೆಯನ್ನು ನಿಷೇಧಿಸಲಾಗಿದ್ದು,  ಶೌಚಾಲಯಗಳನ್ನು ಬಳಸಿದ ನಂತರ ಸರಿಯಾಗಿ ಕೈ ತೊಳೆದು ತ್ಯಾಜ್ಯವನ್ನು ಗೊತ್ತುಪಡಿಸಿದ ತೊಟ್ಟಿಗಳಲ್ಲಿ ಮಾತ್ರವೇ ವಿಲೇವಾರಿ ಮಾಡಬೇಕು. ಹಾವು ಕಡಿತದ ಸಂದರ್ಭದಲ್ಲಿ, ಯಾತ್ರಿಕರು ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಲ್ಲಿ ವಿಷ ವಿರೋಧಿ ಔಷಧ ಲಭ್ಯವಿದೆ. ಭಕ್ತರು ಕಾಯಿಸಿದ ನೀರನ್ನು ಮಾತ್ರ ಕುಡಿಯಬೇಕು, ತಿನ್ನುವ ಮೊದಲು ಕೈ ತೊಳೆದು, ತೊಳೆದ ಹಣ್ಣುಗಳನ್ನು ಸೇವಿಸಿ, ಉತ್ತಮ ಆಹಾರವನ್ನು ಸೇವಿಸಬೇಕು ಎಂದು ಸಲಹಾ ಮಂಡಳಿ ತಿಳಿಸಿದೆ. ಪಂಪಾದಲ್ಲಿ 24 ಗಂಟೆಗಳ ಕಂಟ್ರೋಲ್‌ ರೂಂ ಕಾರ್ಯನಿರ್ವಹಿಸಲಿದೆ. ತೀರ್ಥಯಾತ್ರೆಯ ಮಾರ್ಗಗಳಲ್ಲಿ ವೈದ್ಯಕೀಯ ಕಾಲೇಜುಗಳ ವೈದ್ಯರು ಮತ್ತು ತರಬೇತಿ ಪಡೆದ ಸ್ವಯಂಸೇವಕ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.  ಮೆದುಳು ಜ್ವರದ ಕೇಸ್‌ಗಳು ಹೆಚ್ಚಾಗಿರುವ ಕಾರಣ ಮುಂಜಾಗ್ರತೆ ವಹಿಸಲು ಭಕ್ತರಿಗೆ ಸೂಚನೆ ನೀಡಲಾಗಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page