Railway Station Name : ನಮ್ಮ ಸಂಸ್ಕೃತಿಯಲ್ಲಿ ರಾಷ್ಟ್ರ ನಾಯಕರಾಗಲಿ, ಸ್ವಾತಂತ್ರ್ಯ ಹೋರಾಟಗಾರರಾಗಲಿ, ಸಾಮಾಜಿಕ ಸುಧಾರಕರಾಗಲಿ ಎಲ್ಲರಿಗೂ ಗೌರವ ಸಲ್ಲುತ್ತದೆ. ಹಾಗೆಯೇ, ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿರುವ ಇವರುಗಳ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದರಿಂದ ಅವರ ಸ್ಮರಣೆ ಜೀವಂತವಾಗುತ್ತದೆ ಮತ್ತು ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ. ಉದಾಹರಣೆಗೆ, ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ದೆಹಲಿ) ಇದು ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿಗೆ ಗೌರವ ನೀಡುವ ಉದ್ದೇಶದಿಂದ ಮಾಡಲಾಗಿರುತ್ತದೆ.
ಪ್ರತಿ ರಾಜ್ಯ ಅಥವಾ ನಗರವು ತಮ್ಮ ಪ್ರದೇಶದ ಗಣ್ಯರ ಹೆಸರನ್ನು ಇಟ್ಟು ಸ್ಥಳೀಯ ಸಾಂಸ್ಕೃತಿಕ ಗುರುತನ್ನು ಸಾರಲು ಬಯಸುತ್ತದೆ. ಇದು ಸ್ಥಳೀಯ ಜನರಿಗೆ ಹೆಮ್ಮೆ ನೀಡುತ್ತದೆ. ಉದಾಹರಣೆ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬೆಂಗಳೂರು) ಇದು ನಗರ ಸ್ಥಾಪಕನ ಹೆಸರಿನಲ್ಲಿಯಾದರೆ, ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಭುವನೇಶ್ವರ) ಇದು ಒಡಿಶಾದ ಹೆಮ್ಮೆಯಾಗಿರುತ್ತದೆ. ಹೀಗೇ ಪ್ರಮುಖ ನಾಯಕರ ಹೆಸರಿನಿಂದ ವಿಮಾನ ನಿಲ್ದಾಣಗಳು ಹೊರನಾಡಿನ ಪ್ರಯಾಣಿಕರಿಗೂ ಪರಿಚಿತವಾಗುತ್ತವೆ. ಇದರಿಂದ ದೇಶದ ಇತಿಹಾಸ ಮತ್ತು ನಾಯಕರ ಪ್ರಭಾವ ಅಂತಾರಾಷ್ಟ್ರೀಯ ಮಟ್ಟದಲ್ಲೂ ತೋರುತ್ತದೆ. ಹೀಗಾಗಿ, ವಿಮಾನ ನಿಲ್ದಾಣಕ್ಕೆ ಗಣ್ಯರ ಹೆಸರಿಡುವುದು ಕೇವಲ ಹೆಸರಿಡುವಿಕೆ ಅಲ್ಲ ಅದು ಗೌರವ , ಸಂಸ್ಕೃತಿ, ಇತಿಹಾಸಗಳ ಸಂಯೋಜನೆಯಾಗಿದೆ.
ಆದರೆ ಇದೀಗ ನಮ್ಮ ರಾಜ್ಯದ ರೈಲು ನಿಲ್ದಾಣಗಳಿಗೆ ಗಣ್ಯ ವ್ಯಕ್ತಿಗಳ ಹೆಸರು ಇಡಲು ಸರ್ಕಾರ ಶಿಫಾರಸ್ಸು ಮಾಡಿರುತ್ತದೆ. ಇದರಲ್ಲಿ ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ರೈಲ್ವೆ ವಿಭಾಗದ ರೈಲು ನಿಲ್ದಾಣ ಗಳಿಗೆ ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಅನುಮೋದಿಸಲಾಗಿರುತ್ತದೆ. ಇದರಂತೆ ಬೀದರ್ ರೈಲು ನಿಲ್ದಾಣಕ್ಕೆ ಚನ್ನಬಸವ ಪಟ್ಟದೇವರು ರೈಲ್ವೆ ಸ್ಟೇಷನ್, ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಶಿವಬಸವ ಮಹಾಸ್ವಾಮಿಜಿ ರೈಲು ನಿಲ್ದಾಣ, ವಿಜಯಪುರ ರೈಲು ನಿಲ್ದಾಣಕ್ಕೆ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ರೈಲು ನಿಲ್ದಾಣ, ಶಿವಮೊಗ್ಗ ಸೂರಗೊಂಡನಕೊಪ್ಪ ರೈಲು ನಿಲ್ದಾಣಕ್ಕೆ ಭಾಯಾಗಢ ರೈಲು ನಿಲ್ದಾಣ ಎಂದು ನಾಮಕರಣ ಮಾಡುವಂತೆ ಶಿಫಾರಸು ಮಾಡಲಾಗಿದೆ.
ಇದನ್ನೂ ಓದಿ :Election : ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಿಂದ ಒಂದು ಲಕ್ಷಕ್ಕೂ ಅಧಿಕ ಜಾಮೂನ್ ತಯಾರಿ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/qKJ1lviMpOM?si=IFze6HwN6tuGC2to











