Survey : ಗಣತಿದಾರರು ಪ್ರತೀ ಮನೆಮನೆಗೂ ತೆರಳಿ ದತ್ತಾಂಶವನ್ನು ಸಂಗ್ರಹಿಸುವ ಸಮೀಕ್ಷೆಯು ಅ.31 ಕ್ಕೆ ಕೊನೆಗೊಂಡಿತ್ತು. ಇದರಲ್ಲಿ ಕೇವಲ 89.48 ರಷ್ಟು ಮಾತ್ರವೇ ಎಣಿಕೆಗೆ ಸಿಕ್ಕಿರುವಂತದ್ದು. ಹೀಗಿರುವಾಗ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮಂಗಳವಾರ ನವೆಂಬರ್ 30 ರ ತನಕ ಗಡುವನ್ನು ವಿಸ್ತರಿಸಿರುತ್ತದೆ. ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ ಇದು ಅನ್ವಯಿಸಲಿದ್ದು, ಈವರೆಗೂ ಸಮೀಕ್ಷೆಯಲ್ಲಿ ಮಾಹಿತಿ ನೀಡದೇ ಇರುವವರು ಆನ್‌ಲೈನ್‌ನ ಗಣತಿಯಲ್ಲಿ ಭಾಗಿಯಾಗಬಹುದಾಗಿದೆ.
ಸುಮಾರು ಕುಟುಂಬಗಳು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದವು. ಆದರೂ, ವಿವಿಧ ಕಾರಣಗಳಿಂದ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ ಅವಕಾಶವನ್ನು ಒದಗಿಸುವ ಸಲುವಾಗಿ, ಆನ್‌ಲೈನ್‌ನಲ್ಲಿ ಭಾಗವಹಿಸುವ ಅವಧಿಯನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ವರದಿಯಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶವನ್ನು ಒದಗಿಸುವ ಸಲುವಾಗಿ, https://kscbcselfdeclaration.karnataka.gov.in ಆನ್‌ಲೈನ್ ಲಿಂಕ್ ಮೂಲಕ ಸ್ವಯಂ ಭಾಗವಹಿಸುವಿಕೆಯ ಅವಧಿಯನ್ನು ಅಂತಿಮವಾಗಿ ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ” ಎಂದು ಆಯೋಗವು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ. ಹಲವು ಬಾರಿ ಮುಂದೂಡಿಕೆ ಆಗುತ್ತಲೇ ಇರುವ ಗಣತಿಯು ಬಹಳಷ್ಟು ಜನರು ಇದನ್ನು ನಿರಾಕರಿಸಿದ್ದೇ ಮುಖ್ಯ ಕಾರಣವಾಗಿರುತ್ತದೆ. ಸೆಪ್ಟೆಂಬರ್ 22 ರಂದು ಪ್ರಾರಂಭವಾದ ಸಮೀಕ್ಷೆಯು ವಾಸ್ತವವಾಗಿ ಅಕ್ಟೋಬರ್ 7 ರಂದು ಕೊನೆಗೊಳ್ಳಬೇಕಿತ್ತು, ಆದರೆ ಅದೂ ಕೂಡ ಹಲವು ಬಾರಿ ವಿಸ್ತರಿಸಲಾಯಿತು. ಗಣತಿಯ ಸಮಯದಲ್ಲಿ ಪ್ರಶ್ನಾವಳಿಗಳಿಗೆ ಉತ್ತರಿಸಬೇಕಾಗುತ್ತದೆ ಮತ್ತು ಪ್ರತಿಯೊಬ್ಬರಿಂದಲೂ ಇದನ್ನು ಸಂಗ್ರಹಿಸುವುದು ಮುಖ್ಯವಾಗಿರುತ್ತದೆ.
ಇದನ್ನೂ ಓದಿ : Sivasri Skandaprasad: ಪತ್ನಿ ಶಿವಶ್ರೀಯನ್ನು ಎತ್ತಿಕೊಂಡು ಮುದ್ದಾಡಿದ ಸಂಸದ ತೇಜಸ್ವಿ ಸೂರ್ಯ!
………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/CtGAO-3-DzU?si=ovV1ndkpZP-76lQQ











