ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಧಾರ್ಮಿಕಬೆಳ್ತಂಗಡಿ

Southadka Temple: ಸೌತಡ್ಕ ದೇವಸ್ಥಾನಕ್ಕೆ ಬಂದು ಭಕ್ತರು ಗಂಟೆ ಕಟ್ಟೋದು ಯಾಕೆ ಗೊತ್ತಾ..?

Southadka Temple: ದಕ್ಷಿಣ ಕನ್ನಡದ ಪುಣ್ಯಕ್ಷೇತ್ರ ಸೌತಡ್ಕ ದೇವಸ್ಥಾನ. ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಸೌತಡ್ಕ ದೇವಸ್ಥಾನವೂ ತನ್ನದೇ ಆದಂತಹ ಕಥೆ ಹೊಂದಿದೆ. ಸಹಸ್ರಾರು ಭಕ್ತರ ಹರಕೆಗಳನ್ನು ಈಡೇರಿಸುವ ಸೌತಡ್ಕದ ಮಹಾಗಣಪತಿ ದೇವರ ಶಕ್ತಿ, ಮಹಿಮೆ ಅಪಾರ. ಅಷ್ಟಕ್ಕೂ ಸೌತಡ್ಕ ದೇವಸ್ಥಾನಕ್ಕೆ ಗಂಟೆ ಕಟ್ಟೋದು ಯಾಕೆ ನೋಡೋಣ ಈ ಸ್ಟೋರಿಯಲ್ಲಿ…

ಭಕ್ತರು ಸೌತೆಕಾಯಿ ತರೋದು ಯಾಕೆ..?

ಇಲ್ಲಿಗೆ ಬರುವಂತಹ ಸಾವಿರಾರು ಭಕ್ತರಿಗೆ ಈಗಲೂ ಕೂಡ ಸೌತಡ್ಕ ಅನ್ನೋ ಹೆಸರು ಬಂದಿರೋದು ಹೇಗೆ ಎಂದು ಪ್ರಶ್ನೆ ಇರಬಹುದು. ಹೌದು, ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.. ಸೌತಡ್ಕ ದೇವಸ್ಥಾನಕ್ಕೆ ಗೋಪಾಲಕರು ತಮಗೆ ಕಾಡಿನಲ್ಲಿ ಸಿಕ್ಕಿರುವ ಗಣಪತಿ ವಿಗ್ರಹವನ್ನು ತಂದು ಮರದ ಹತ್ತಿರ ಕಟ್ಟೆಯ ಮೇಲೆ ಇಟ್ಟು ಅಲ್ಲಿಯೇ ಪ್ರತಿಷ್ಠಾಪಿಸುತ್ತಾರೆ, ಅನಂತರ ಇಲ್ಲಿಗೆ ಸೌತೇಕಾಯಿಯನ್ನು ಸಮರ್ಪಣೆ ಮಾಡುತ್ತಾರೆ. ಆದ್ದರಿಂದ ಈ ಸ್ಥಳಕ್ಕೆ ಸೌತಡ್ಕ ಎಂಬ ಹೆಸರು ಬರುತ್ತೆ ಎಂದು ಹೇಳಲಾಗಿದೆ.ಇಂದೂ ಕೂಡ ಕೆಲವರು ಈ ಸ್ಥಳಕ್ಕೆ ಬಂದು ಸೌತೆಕಾಯಿಯನ್ನು ಗಣೇಶನಿಗೆ ಸಮರ್ಪಣೆ ಮಾಡುತ್ತಾರೆ.

ಇದನ್ನೂ ಓದಿ: ಮದುವೆ ಬೇಡ ಅಂತ ನಿರ್ಧಾರ ತಗೊಂಡಿದ್ದೀರಾ..? ಹಾಗಾದ್ರೆ ಈ ಸ್ಟೋರಿ ನಿಮಗಾಗಿ..!

ಸೌತಡ್ಕ ಹೆಸರು ಬಂದದ್ದು ಹೇಗೆ ಗೊತ್ತಾ…?

ಸೌತಡ್ಕ ದೇವಸ್ಥಾನದ ವಿಶೇಷತೆ ಅಂದ್ರೆ ಇತರ ದೇವಸ್ಥಾನಗಳಂತೆ ಈ ದೇವಸ್ಥಾನಕ್ಕೆ ಯಾವುದೇ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ, ಗೋಪುರವಿಲ್ಲ. ಇದೊಂದು ಬಯಲು ಗಣಪತಿ. ತೆರೆದ ಸ್ಥಳದಲ್ಲಿರುವ ಗಣಪತಿ ಆಗಿದೆ. ನೀವು ಗಣಪನಲ್ಲಿ ಏನಾದರು ಹರಕೆ ಹೇಳಿಕೊಂಡರೆ ಕೇವಲ ಒಂದೇ ದಿನದಲ್ಲಿ ನಿಮ್ಮ ಹರಕೆ ಫಲಿಸುತ್ತದೆ. ಹೀಗಾಗಿ ಇಲ್ಲಿಗೆ ಬರುವಂತಹ ಭಕ್ತರ ಸಂಖ್ಯೆ ಅನೇಕ. ಇಲ್ಲಿಗೆ ಗಂಟೆ ಕಟ್ಟುತ್ತೇನೆ ಎಂದು ಹರಕೆ ಹೇಳಿಕೊಳ್ಳುತ್ತಾರೆ. ಹೀಗಾಗಿ ಇಲ್ಲಿಗೆ ದೂರದೂರುಗಳಿಂದ ಬಂದು ಪೂಜೆ ಮಾಡಿಸಿಕೊಂಡು ತೆರಳುತ್ತಾರೆ.ಈ ದೇವಸ್ಥಾನದ ಹತ್ತಿರ ಕೊಂಚ ದೂರದಲ್ಲಿ ಇನ್ನೂರಕ್ಕೂ ಹೆಚ್ಚು ಹಸುಗಳನ್ನು ಸಾಕಲಾಗುತ್ತದೆ. ಗೋ ಶಾಲೆಯಲ್ಲಿ ವಿವಿಧ ತಳಿಯ ಹಸುಗಳನ್ನು ಈ ಸ್ಥಳದಲ್ಲಿ ನೋಡಬಹುದು.

ಸೌತಡ್ಕ ದೇವಸ್ಥಾನಕ್ಕೆ ಹೇಳುವ ಹರಕೆಗಳೇನು..?

ಇನ್ನು ಆಯುಧ ಪೂಜೆಯ ಸಮಯದಲ್ಲಿ ಇಲ್ಲಿ ಗಾಡಿ ಪೂಜೆಯನ್ನೂ ಮಾಡಲಾಗುತ್ತದೆ. ದೃಷ್ಟಿಯಾಗಿದ್ದರೆ ಈ ಸ್ಥಳಕ್ಕೆ ಬಂದು ಪೂಜೆ ಮಾಡಿಸಿಕೊಂಡರೆ ದೃಷ್ಟಿದೋಷ ನಿವಾರಣೆಯಾಗುತ್ತದೆ. ವಿದ್ಯೆಯ ಬಗ್ಗೆ ಬೇಡಿಕೊಂಡರೆ ವಿದ್ಯೆ ಪ್ರಾಪ್ತಿಯಾಗುತ್ತದೆ. ಹಣದ ಸಮಸ್ಯೆ ಇದ್ದರೆ ಹೇಳಿಕೋಡರೆ ಅದೂ ದೂರವಾಗುತ್ತದೆ. ಬೇಗ ಮಗುವಾಗಲಿ ಎಂದು ಅಂದುಕೊಂಡ ದಂಪತಿಗಳಿಗೆ ಸಂತಾನ ಭಾಗ್ಯ ದೊರೆಯುತ್ತದೆ. ಇನ್ನು ಮಕ್ಕಳನ್ನು ಅನ್ನಪ್ರಾಶನಕ್ಕೂ ಇಲ್ಲಿಗೆ ಕರೆತರುತ್ತಾರೆ. ಸೌತಡ್ಕದಲ್ಲಿ ಅಪ್ಪ ಕಜ್ಜಾಯ, ಪಂಚಕಜ್ಜಾಯ, ರಂಗಪೂಜೆ, ಮೂಡಪ್ಪ ಸೇವೆ ಈ ಕ್ಷೇತ್ರದಲ್ಲಿ ನಡೆಯುವ ಸೇವೆಗಳಾಗಿವೆ. ಬೆಲ್ಲ ಅವಲಕ್ಕಿ ಇಲ್ಲಿನ ದೇವರಿಗೆ ನೈವೇದ್ಯ. ಪ್ರತೀ ದಿನವೂ ಸೌತಡ್ಕ ಓಪನ್‌ ಆಗಿಯೇ ಇರುತ್ತದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 176

You cannot copy content of this page