ಬ್ರೇಕಿಂಗ್ ನ್ಯೂಸ್
ದೇಶ

Terrorist : ಪಹಲ್ಗಾಮ್ ದಾಳಿಯ ಬಳಿಕ ಜಮ್ಮುಕಾಶ್ಮೀರದಲ್ಲಿ ಮತ್ತೊಂದು ಉಗ್ರ ದಾಳಿಯ ಬಗ್ಗೆ ಸುಳಿವು

Terrorist : ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಭದ್ರತೆ ಹೆಚ್ಚಿಸಿರುವುದಾಗಿ ವರದಿಯಾಗಿದೆ. ಉಗ್ರ ದಾಳಿಯ ಸಂಭವನೀಯತೆ ಇರುವುದರಿಂದ ಎಚ್ಚರಿಕೆ ಮಾಹಿತಿಯನ್ನು ಗುಪ್ತಚರ ಇಲಾಖೆಯು ತಿಳಿಸಿದೆ. ಈಗಾಗಲೇ ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಹಲವು ಪ್ರವಾಸಿ ಸ್ಥಳಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆಯೂ ಕ್ರಮ ತೆಗೆದುಕೊಳ್ಳಲಾಗಿದೆ ಹಾಗೂ 48 ಪ್ರವಾಸಿ ಸ್ಥಳಗಳನ್ನು ಈವರೆಗೆ ಮುಚ್ಚಲಾಗಿದೆ. ಇನ್ನು ಭದ್ರತಾ ಪಡೆಗಳು, ಪೋಲಿಸ್ ಸೇನೆ ಹಾಗೂ ಅಂತರಾಷ್ಟ್ರೀಯ ಗಡಿ ಪಡೆಗಳು ಇವರ ಸಹಾಯದ ಮೇರೆಗೆ ಕಾರ್ಯಾಚರಣೆಯನ್ನು ಹೆಚ್ಚಿಸಲು ಆದೇಶಿಸಲಾಗಿದೆ.

ಪ್ರವಾಸಿಗರು ಎಚ್ಚರದಿಂದ ಇರಬೇಕಾದೀತು ;
ಪ್ರವಾಸಿಗಳು ಅಂದರೆ ಪ್ರವಾಸಕ್ಕೆ ಹೊರಟಿರುವವರು ಅಥವಾ ಈಗಾಗಲೇ ಹೋಗುತ್ತಿರುವ ಯಾತ್ರಿಕರು ತಮ್ಮ ಪ್ರಯಾಣದ ಯೋಜನೆಯನ್ನು ಬದಲಾಯಿಸುವುದು ಉತ್ತಮ ಅಥವಾ ಸ್ವಲ್ಪ ಅದರ ಬಗ್ಗೆ ಯೋಚಿಸಿದರೆ ಒಳಿತು ಎಂದು ಹೇಳಲಾಗಿದೆ. ವಾಹನ ಸಂಚಾರ ಅಥವಾ ರೈಲು ರಸ್ತೆಗಳನ್ನು ಉಪಯೋಗಿಸಿಕೊಂಡು ಬರುವ ಪ್ರಯಾಸಿಗರು ಹೆಚ್ಚಾಗಿ ಗಮನಿಸಬೇಕು ಹಾಗೂ ಎಚ್ಚರಿಕೆಯಿಂದ ಇರತಕ್ಕದ್ದು. ಸಾರ್ವಜನಿಕ ಚಟುವಟಿಕೆ ಸಮಯದಲ್ಲಿ ಅಧಿಕೃತ ಸೂಚನೆಗಳಿಗೆ ಅನುಗುಣವಾಗಿಯೇ ನಡೆಯಬೇಕಾಗುತ್ತದೆ ಅಂದರೆ ಪೊಲೀಸ್ ಅಧಿಕಾರಿಗಳು ಅಥವಾ ಸೇನೆಯು ಸೂಚಿಸಿದಂತೆಯೇ ಪಾಲಿಸಬೇಕಾಗುವುದು ಎಂದು ವರದಿಯಾಗಿರುತ್ತದೆ.

ಗುಪ್ತಚರ ಇಲಾಖೆಯಿಂದ ಭದ್ರತೆ ಹೆಚ್ಚಿಸುವಂತೆ ಎಚ್ಚರಿಕೆ ;
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭೀಕರ ಉಗ್ರ ದಾಳಿ ನಡೆದು ಈಗಾಗಲೇ ಆರು ತಿಂಗಳಾಗಿವೆ. ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ. ಹೀಗಿರುವಾಗ, ಭಾರತದಲ್ಲಿ ಮತ್ತೊಂದು ಪ್ರಮುಖ ಭಯೋತ್ಪಾದಕ ಸಂಚಿನ ಬಗ್ಗೆ ಗುಪ್ತಚರ ಇಲಾಖೆಯು ಎಚ್ಚರಿಕೆ ನೀಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಘಟಿತ ದಾಳಿಗಳಿಗೆ ತಂಡ ಪ್ಲಾನ್ ಮಾಡುತ್ತಿವೆ ಎಂಬ ಮಾಹಿತಿಯು ಇಲಾಖೆಗೆ ಲಭ್ಯವಾಗಿದ್ದು. ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು‌ ಎಚ್ಚರಿಕೆ ನೀಡಿದೆ. ಭಯೋತ್ಪಾದಕ ಗುಂಪುಗಳು ಅದರಲ್ಲೂ ವಿಶೇಷವಾಗಿ ಲಷ್ಕರ್ ಎ ತೈಬಾ ಅಂದರೆ ಎಲ್ಇಟಿ ಮತ್ತು ಜೈಶ್ ಎ ಮೊಹಮ್ಮದ್ ಅಂದ್ರೆ ಜೆಈಎಂ ಹೊಸ ಸಂಘಟಿತ ದಾಳಿಗಳಿಗೆ ಸಿದ್ಧತೆಯನ್ನು ನಡೆಸುತ್ತಿವೆ ಎಂಬ ಮಾಹಿತಿಯು ಈಗಾಗಲೇ ಹೊರಬಿದ್ದಿದೆ. ಈ ಕಾರಣ ಕಾಶ್ಮೀರ ಕಣಿವೆಯೊಳಗೆ ತಮ್ಮ ಮಾನವ ಗುಪ್ತಚರ ಜಾಲವನ್ನು ಪುನರ್ ನಿರ್ಮಿಸುತ್ತಿದ್ದಾರೆ ಎಂದಾಗಿಯೂ, ಸ್ಥಳೀಯ ಸಹಾಯಕರು, ಸುರಕ್ಷಿತ ತಾಣಗಳು ಮತ್ತು ಸಂಪನ್ಮೂಲ ಮಾರ್ಗಗಳನ್ನು ಗುರುತಿಸುತ್ತಿದ್ದಾರೆ ಎಂದು ಮಾಹಿತಿಯು ತಿಳಿದು ಬಂದಿದೆ.

ಇದನ್ನೂ ಓದಿ :IPPB : ಕೇವಲ 299 ರೂ. ಪಾವತಿಗೆ 10 ಲಕ್ಷ ರೂ. ವಿಮೆ

……….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/2NUxdpIvL2A?si=6xLWN6mRMe2GnCgT

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 20

You cannot copy content of this page