ಬ್ರೇಕಿಂಗ್ ನ್ಯೂಸ್
ಸುಳ್ಯ

Sullia : ತಡವಾಗಿ ಆಗಮಿಸಿದ ಶಾಸಕರು : ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ವಿಳಂಬ

Sullia : 70 ನೇ ಕನ್ನಡ ರಾಜ್ಯೋತ್ಸವದ ಕಂಪು ಇಂದು ಎಲ್ಲರ ಮನೆ ಮನಗಳಲ್ಲಿ ತುಂಬಿದೆ. ಕನ್ನಡ ಮಾತನಾಡುವ ಪ್ರದೇಶಗಳನ್ನು ಒಟ್ಟುಸೇರಿಸಿ, ಸ್ವತಂತ್ರವಾಗಿ ಅಸ್ತಿತ್ವವನ್ನು ಪಡೆದುಕೊಂಡ ದಿನ‌‌ ಇದಾಗಿದೆ. ಅಲ್ಲದೇ ಈ ದಿನ ಕನ್ನಡಿಗರ ಸ್ವಾಭಿಮಾನ, ಭಾಷಾ ಪರಂಪರೆ, ಸಂಸ್ಕೃತಿಯ ಸಂಕೇತವಾಗಿದೆ. ಹಾಗೂ ಕನ್ನಡದ ಗೌರವ ಮತ್ತು ಶ್ರೀಮಂತ ಪರಂಪರೆಗೆ ಗೌರವ ಸಲ್ಲಿಸುವ ದಿನವಾಗಿದೆ.

ಬೆಂಗಳೂರಿನಿಂದ ಹಿಡಿದು ಅನೇಕ ಸಣ್ಣ ಪುಟ್ಟ ಗ್ರಾಮೀಣ ಪ್ರದೇಶಗಳಲ್ಲಿಯೂ ಎಲ್ಲರೂ ಒಟ್ಟಾಗಿ ಸೇರಿ ಕನ್ನಡ‌ ಹಬ್ಬವನ್ನು ಸಂಭ್ರಮಿಸುತ್ತಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ, ಹಾಡು, ನಾಟಕ‌ ಹೀಗೇ ಕಾರ್ಯಗಳನ್ನು ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಸೇರಿದಂತೆ ಕರ್ನಾಟಕ ನಾಡಗೀತೆ ಹಾಡುವ ಮೂಲಕ ಗಣ್ಯವ್ಯಕ್ತಿಗಳು ಭಾಗವಹಿಸುತ್ತಾರೆ.

ಹೀಗಿರುವಾಗ, ದಕ್ಷಿಣ ಕನ್ನಡದ ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಹಾಗೂ ಪಥ ಸಂಚಲನ ವಿಳಂಬವಾಗಿದೆ.
ಕಾರ್ಯಕ್ರಮ ನಿಗದಿತ ಸಮಯಕ್ಕೆ ನಡೆಯುವುದೆಂದು ತಿಳಿಸಿ, ವಿದ್ಯಾರ್ಥಿಗಳು ಬೆಳ್ಳಂಬೆಳಗ್ಗೆ ತಯಾರಾಗಿ ಬಿಸಿಲಿನಲ್ಲಿ ಕಾದು ಕಾದು ಸುಸ್ತಾಗಿರುತ್ತಾರೆ. ಪಥಸಂಚಲನ ಮಾಡಲು ವಿದ್ಯಾರ್ಥಿಗಳು ಎಲ್ಲಾ ತಯಾರಿಯೊಂದಿಗೆ ಕಾರ್ಯಕ್ರಮದ ಪ್ರಾರಂಭಕ್ಕೆ ಕಾಯುತ್ತಿದ್ದರು. ಕಾರ್ಯಕ್ರಮ ಮುಂಜಾನೆಯೇ ವಿಳಂಬವಾದ ಕಾರಣ ವಿದ್ಯಾರ್ಥಿಗಳ ಜೊತೆ,‌ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ‌ ಪ್ರಮುಖರು ಕಾರ್ಯಕ್ರಮಕ್ಕೆ ಆಗಮಿಸಿ ಹಲವು ಹೊತ್ತು ಕಾಯಬೇಕಾಗುವ ಸಂದರ್ಭ ಎದುರಾಯಿತು.

ಇದನ್ನೂ ಓದಿ : Bengaluru: ಕನ್ನಡ ಅತ್ಯಂತ ಪ್ರಾಚೀನ ಭಾಷೆ: ಶೋಭಾ ಕರಂದ್ಲಾಜೆ..!

……..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್ ಕ್ಲಿಕ್ ಮಾಡಿ : https://youtu.be/fJYoyzVUVk0?si=FdkpMlvbhQJzD4sU

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 6

You cannot copy content of this page