ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ : ಪುಣೆಯ ಶಿಕ್ಷಕಿ ಇದರ ಮಾರ್ಗದರ್ಶಕಿಯಾಗಿದ್ದಳೇ?

ನೀಟ್ : Tulu Times l ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸುತ್ತಿರುವ ನೀಟ್ – ಯುಜಿ 2026 ಜೀವಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪುಣೆಯ ಸಸ್ಯಶಾಸ್ತ್ರ ಶಿಕ್ಷಕಿಯನ್ನು ಬಂಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.

ಬಂಧಿತ ಶಿಕ್ಷಕಿಯನ್ನು ಮನಿಷಾ ಗುರುನಾಥ್ ಮಾಂಡ್ರೆ ಎಂದು ಗುರುತಿಸಲಾಗಿದ್ದು, ದೆಹಲಿಯಲ್ಲಿ ವಿಚಾರಣೆ ನಡೆಸಿದ ಬಳಿಕ ಸಿಬಿಐ ಅವರನ್ನು ಬಂಧಿಸಿರುವುದು ವರದಿಯಾಗಿದೆ. ಸಿಬಿಐ ಮಾಹಿತಿಯ ಪ್ರಕಾರ, ಎನ್ ಟಿಎ ನಡೆಸುವ ನೀಟ್ – ಯುಜಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಮನೀಷಾ ಮಾಂಡ್ರೆ ತಜ್ಞೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಏಪ್ರಿಲ್ ತಿಂಗಳಲ್ಲಿ ಅವರು ಮತ್ತೊಬ್ಬ ಆರೋಪಿ ಮೂಲಕ ಕೆಲವು ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದಿದ್ದರು. ಬಳಿಕ ತಮ್ಮ ಮನೆಯಲ್ಲಿ ವಿಶೇಷ ತರಗತಿಗಳನ್ನು ನಡೆಸಿ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳ ಪ್ರಮುಖ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟಿದ್ದರು ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿಗಳಿಗೆ ಪ್ರಶ್ನೆಗಳು ಹಾಗೂ ಉತ್ತರಗಳನ್ನು ನೋಟ್‌ಬುಕ್‌ಗಳಲ್ಲಿ ಬರೆಯಲು ಮತ್ತು ಪಠ್ಯಪುಸ್ತಕಗಳಲ್ಲಿ ಗುರುತು ಹಾಕಲು ಸೂಚಿಸಲಾಗಿತ್ತು ಎಂದು ಸಿಬಿಐ ತಿಳಿಸಿದೆ. ಮೇ 3ರಂದು ನಡೆದ ನೈಜ ನೀಟ್ – ಯುಜಿ ಪರೀಕ್ಷೆಯಲ್ಲಿದ್ದ ಬಹುತೇಕ ಪ್ರಶ್ನೆಗಳು ಈ ತರಗತಿಗಳಲ್ಲೇ ಹೇಳಿಕೊಡಲಾಗಿದ್ದವು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಕಳೆದ 24 ಗಂಟೆಗಳಲ್ಲಿ ಸಿಬಿಐ ದೇಶದ ಆರು ಕಡೆ ದಾಳಿ ನಡೆಸಿ ಹಲವು ದಾಖಲೆಗಳು, ಲ್ಯಾಪ್‌ಟಾಪ್‌ಗಳು, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ವಸ್ತುಗಳ ಪರಿಶೀಲನೆ ಮುಂದುವರಿದಿದೆ. ಈ ಪ್ರಕರಣದ ಪ್ರಮುಖ ಸೂತ್ರಧಾರನೆಂದು ಗುರುತಿಸಲ್ಪಟ್ಟಿರುವ ಪಿ.ವಿ ಕುಲಕರ್ಣಿ ಎಂಬ ರಸಾಯನಶಾಸ್ತ್ರ ಉಪನ್ಯಾಸಕರನ್ನೂ ಸಿಬಿಐ ಈಗಾಗಲೇ ಬಂಧಿಸಿದೆ. ಅವರು ಎನ್‌ಟಿಎ ಪರ ಪರೀಕ್ಷಾ ಪ್ರಕ್ರಿಯೆಗೆ ಸಂಬಂಧಪಟ್ಟವರಾಗಿದ್ದು, ನೀಟ್ – ಯುಜಿ 2026 ಪ್ರಶ್ನೆಪತ್ರಿಕೆಗಳಿಗೆ ಪ್ರವೇಶ ಹೊಂದಿದ್ದರು ಎಂದು ಆರೋಪಿಸಲಾಗಿದೆ.

ಸಿಬಿಐ ತನಿಖೆಯ ಪ್ರಕಾರ, ಏಪ್ರಿಲ್ ಕೊನೆಯ ವಾರದಲ್ಲಿ ಕುಲಕರ್ಣಿ ಮತ್ತು ಮನೀಷಾ ವಾಘಮಾರೆ ಸೇರಿ ಪುಣೆಯಲ್ಲಿರುವ ಮನೆಯಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ತರಗತಿಗಳನ್ನು ಆಯೋಜಿಸಿದ್ದರು. ಆ ತರಗತಿಗಳಲ್ಲಿ ಪ್ರಶ್ನೆಗಳು, ಆಯ್ಕೆಗಳು ಮತ್ತು ಸರಿಯಾದ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗಿತ್ತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಜಾಲದಲ್ಲಿ ಮಧ್ಯವರ್ತಿಗಳು ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ವಿಶೇಷ ತರಗತಿಗಳಿಗೆ ಸೇರಿಸುತ್ತಿದ್ದರು ಎಂದು ಸಿಬಿಐ ಹೇಳಿದೆ. ಈ ಪ್ರಕರಣವನ್ನು ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ದೂರಿನ ಮೇರೆಗೆ ಮೇ 12ರಂದು ಸಿಬಿಐ ದಾಖಲಿಸಿಕೊಂಡಿತ್ತು.

NEET question paper leak: Was a Pune teacher the mastermind behind it? – ತುಳುಟೈಮ್ಸ್

ಇದನ್ನೂ ಓದಿ :ಬಸ್ ಮುಷ್ಕರ ಭೀತಿ: ಕರ್ನಾಟಕ ಸರ್ಕಾರದ ‘ಸಾಧನಾ ಸಮಾವೇಶ’ದಲ್ಲಿ ಬದಲಾವಣೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=xElRpo8V8YIUf-ll

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 172

You cannot copy content of this page