ರಾಜಕೀಯ : Tulu Times l ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹತ್ವದ ತಿರುವು ಕಂಡುಬಂದಿದ್ದು, ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ಸಾಧಿಸಿ, ಮಮತಾ ಬ್ಯಾನರ್ಜಿ ಅವರ 15 ವರ್ಷದ ಆಡಳಿತಕ್ಕೆ ತೆರೆ ಎಳೆದಿದೆ. ಈ ಫಲಿತಾಂಶವನ್ನು ಬಿಜೆಪಿ ಹೊಸ ಕೇಸರಿ ಯುಗದ ಆರಂಭಎಂದು ವರ್ಣಿಸಿದೆ.
ಪ್ರಚಲಿತ ಅಂಕಿಅಂಶಗಳ ಪ್ರಕಾರ, 294 ಸದಸ್ಯರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಅಗತ್ಯವಿರುವ 147 ಸ್ಥಾನಗಳನ್ನು ಬಿಜೆಪಿ ಸುಲಭವಾಗಿ ಮೀರಿ, ಸುಮಾರು 171 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಅಖಿಲ ಭಾರತ ಕಾಂಗ್ರೆಸ್, ಸುಮಾರು 83 ಸ್ಥಾನಗಳಲ್ಲಿ ಮಾತ್ರ ಮುನ್ನಡೆಯಲ್ಲಿದೆ. ಇದರಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆ ಬಹುತೇಕ ಖಚಿತವಾಗಿದೆ. ಈ ಫಲಿತಾಂಶವು 2021ರ ಚುನಾವಣೆಯ ಫಲಿತಾಂಶಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಅಂದು ಎಕ್ಸಿಟ್ ಪೋಲ್‌ಗಳನ್ನು ಮೀರಿ ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೆ ಬಂದಿದ್ದರು. ಆದರೆ ಈ ಬಾರಿ ಮತದಾರರ ಮನೋಭಾವದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸೋನಾರ್ ಬಾಂಗ್ಲಾ ಎಂಬ ಘೋಷಣೆಯನ್ನು ಹಲವು ವರ್ಷಗಳಿಂದ ಮುಂದಿಟ್ಟುಕೊಂಡು ಬಂದ ಬಿಜೆಪಿ, ಈ ಗೆಲುವಿನ ಮೂಲಕ ರಾಜ್ಯದಲ್ಲಿ ತನ್ನ ನೆಲೆ ಬಲಪಡಿಸಿಕೊಂಡಿದೆ. ದೀರ್ಘಕಾಲದಿಂದ ಬಂಗಾಳದಲ್ಲಿ ಹೋರಾಟ ನಡೆಸುತ್ತಿದ್ದ ಪಕ್ಷಕ್ಕೆ ಇದು ಐತಿಹಾಸಿಕ ಜಯವಾಗಿ ಪರಿಣಮಿಸಿದೆ. ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ತಂತ್ರ ಹಾಗೂ ಸಂಘಟನೆ ಶಕ್ತಿಗೆ ಪ್ರಮುಖ ಪಾತ್ರವಿದೆ ಎಂದು ಪಕ್ಷದ ವಲಯಗಳು ಹೇಳಿವೆ.
ಪಶ್ಚಿಮ ಬಂಗಾಳದ ಈ ಚುನಾವಣಾ ಫಲಿತಾಂಶವು ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಸೂಚಕವಾಗಿದೆ. ದೀದಿ ಯುಗ ಅಂತ್ಯಗೊಂಡು, ಕೇಸರಿ ಯುಗ ಆರಂಭವಾಗಿದೆ ಎಂಬ ರಾಜಕೀಯ ವಿಶ್ಲೇಷಣೆ ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಬದಲಾವಣೆ ರಾಜ್ಯದ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಹೇಗೆ ಪ್ರತಿಫಲಿಸುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
BJP’s victory in West Bengal: A new political chapter begins – ತುಳುಟೈಮ್ಸ್
ಇದನ್ನೂ ಓದಿ :ಅಂಡಮಾನ್‌ನಲ್ಲಿ ಗಿನ್ನಿಸ್ ರೆಕಾರ್ಡ್:ಸಮುದ್ರದಾಳದಲ್ಲಿ ಅತಿ ದೊಡ್ಡ ತ್ರಿವರ್ಣ ಧ್ವಜ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=nGwy4fT9Mr98WtJC











