ಬೆಳ್ತಂಗಡಿ: Tulu Times l ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ, ಅಂಗನವಾಡಿ ಕೇಂದ್ರ ಕಾರಿಂಜ ಉರುವಾಲು ಬೆಳ್ತಂಗಡಿ, ಪಾರಾದೀಪ್ ಫಾಸ್ಪೇಟ್ ಲಿಮಿಟೆಡ್ ಮಂಗಳೂರು ಘಟಕ ಪಣಂಬೂರು ಇದರ ಸಿ.ಎಸ್.ಆರ್ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಮಾಜಿ ಸದಸ್ಯ ಈಶ್ವರ ಭಟ್ ಮಾಯಿಲ್ಲೋಡಿ ನೆರವೇರಿಸಿದರು.
ಉದ್ಘಾಟನೆಯ ನಂತರ ಮುಖ್ಯ ಉತ್ಪಾದನಾಧಿಕಾರಿ ಗಿರೀಶ್ ಎಸ್. ಮಾತನಾಡಿ, ಸಿ.ಎಸ್.ಆರ್ ಅನುದಾನದಲ್ಲಿ ನಮ್ಮ ಕಂಪನಿಯಿಂದ ಹಲವಾರು ಕಡೆಗಳಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಬಂದಿದ್ದು, ಅಕ್ಷರ ಮಿತ್ರ ಯೋಜನೆಯಡಿಯಲ್ಲಿ ಕಾರಿಂಜಕ್ಕೆ ನಮ್ಮ ಕಂಪನಿಯಿಂದ ಹೊಸದಾದ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬಾಲ ವಿಕಾಸ ಸಮಿತಿ ಹಾಗೂ ಊರವರ ಸಹಕಾರದೊಂದಿಗೆ ಪಾರಾದೀಪ್ ಕಂಪೆನಿಯ ಉತ್ಪಾದನಾಕಾರಿ ಗಿರೀಶ್ ಎಸ್, ಸ್ಥಾಪಕ ಅಧ್ಯಕ್ಷ ಈಶ್ವರ ಭಟ್ ಮಾಯಿಲ್ಲೋಡಿ, ಅಸಿಸ್ಟೆಂಟ್ ಮ್ಯಾನೇಜರ್ ಅಭಿನಂದನ್ ಎ -ಪ್ರೊಡಕ್ಷನ್ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ ಯೋಗೀಶ್ ಜೆ.ಜಿ.ಯಂ- ವೈದ್ಯಕೀಯ ವಿಭಾಗ, ವಿವೇಕ್ ಕೋಟ್ಯಾನ್ ಸೀನಿಯರ್ ಆಫೀಸರ್-ಸಿ.ಎಸ್.ಆರ್ ವಿಭಾಗ, ರೋಷನ್ ಆಫೀಸರ್ ಹೆಚ್,ಆರ್ ವಿಭಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುಮನ್ ಎಸ್, ಪ್ರಗತಿಪರ ಕೃಷಿಕ ದಾಸಪ್ಪ ಗೌಡ ಕೋಡಿಯಡ್ಕ, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಸ್ಮಿತ ಜಿ.ಕೆ., ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ಎನ್, ಮಾಜಿ ಸದಸ್ಯೆ ಉಮಾವತಿ, ಅಂಗನವಾಡಿ ಕಾರ್ಯಕರ್ತೆ ಶಶಿಪ್ರಭಾ, ಶಾಲಾ ಮುಖ್ಯೋಪಾಧ್ಯಾಯಿನಿ ಗಿರಿಜಾ, ಬಾಲ ವಿಕಾಸ ಸಮಿತಿ ಪೋಷಕ ಮುಸ್ತಫಾ ಕೆ.ಯಂ. ಅಂಡೆತ್ತಡ್ಕ ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಪ್ಪ ಪೂಜಾರಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಮಾಲತಿ, ಶಾಲಾ ಮಾಜಿ ಅಧ್ಯಕ್ಷರಾದ ಡೀಕಯ್ಯ, ತೇಜಸ್ವಿ ಆನಡ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರದೀಪ್ ನಾಯ್ಕ ಆನಡ್ಕ ಸ್ವಾಗತಿಸಿ, ಅಭಿನಂದನ್ ಎ ವಂದಿಸಿದರು. ಶಿಕ್ಷಕ ಪರಮೇಶ್ವರ ನಿರೂಪಿಸಿದರು.
Belthangadi : Inauguration of Karinja Uruvalu Anganwadi Centre – ತುಳುಟೈಮ್ಸ್
ಇದನ್ನೂ ಓದಿ :ಮಾಲಾಡಿ–ಪುರಿಯ ರಸ್ತೆ ಡಾಮರೀಕರಣ ಕಾಮಗಾರಿಗೆ ಚಾಲನೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/EYKaZkoL8Qk?si=r-OOByvN1LNaeuTK








