ರಾಜಕೀಯ : Tulu Times l ಮತ ಓಲೈಕೆ ಮತ್ತು ಸ್ವಾರ್ಥ ರಾಜಕಾರಣಕ್ಕಾಗಿ ಹಿಂದುಗಳನ್ನು ಹತ್ಯೆ ಮಾಡಿ ಎಂದು ಬಹಿರಂಗ ಸಭೆಯಲ್ಲಿ ಕರೆ ಕೊಟ್ಟ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರನ್ನ ಪಾಕಿಸ್ತಾನಕ್ಕೆ ಗಡಿಪಾರು ಮಾಡಿ ಎಂದು ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿರುತ್ತಾರೆ.
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮುಸ್ಲಿಮರನ್ನು ಓಲೈಕೆ ಮಾಡಲು ಮತ್ತು ಭವಿಷ್ಯದಲ್ಲಿ ಭಾರತದ ಪ್ರಧಾನಿ ಪಟ್ಟವನ್ನ ಅಲಂಕರಿಸುವೆ ಎನ್ನುವ ದುರಾಸೆಯೊಂದಿಗೆ ಹಗಲು ಕನಸು ಕಾಣುತ್ತಿದ್ದು, ಆರ್ ಎಸ್ ಎಸ್ ಮತ್ತು ಬಿಜೆಪಿಯವರನ್ನ ಕೊಂದುಬಿಡಿ ಎನ್ನುವ ಬಹಿರಂಗ ಹೇಳಿಕೆಯನ್ನು ನೀಡಿರುವುದು ಖಂಡನೀಯವಾಗಿದೆ.
ಈ ಹೇಳಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ದ್ವೇಷ ಭಾಷಣ ಮಾಡಿದರೆ ಕರ್ನಾಟಕದಲ್ಲಿ ಕಠಿಣ ಕ್ರಮದ ಕಾನೂನು ಇದ್ದರೂ ಕೂಡ ಪೊಲೀಸರಾಗಲಿ, ಅಧಿಕಾರಿಗಳು ಇದುವರೆಗೆ ಯಾವುದೇ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸದೆ ಒಬ್ಬ ಸಮಾಜದ ಜವಾಬ್ದಾರಿಯುತ ವ್ಯಕ್ತಿಗೆ ಅನ್ವಯವಾಗದ ಕಾನೂನು ಸಾಮಾನ್ಯ ಜನರಿಗೆ ಮಾತ್ರ ಸೀಮಿತವೇ ಎನ್ನುವ ಪ್ರಶ್ನೆಯನ್ನು ಸರಕಾರಕ್ಕೆ ಕೇಳಿರುತ್ತಾರೆ.
ಅದಲ್ಲದೆ ಈ ರೀತಿಯ ಹೇಳಿಕೆಗಳಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದ್ದು ರಾಜ್ಯದಲ್ಲಿ ಕೋಮು ಗಲಭೆ, ಅಶಾಂತಿ, ಕಾನೂನು ಸುವ್ಯವಸ್ಥೆಯ ಮೇಲೆ ಅತ್ಯಂತ ಕಠಿಣ ಪರಿಣಾಮ ಬೀರಬಹುದು ಮತ್ತು ಈ ರೀತಿಯ ಹೇಳಿಕೆಗಳಿಗೆ ಹಿಂದೂ ಸಮಾಜ ಮುಂದಿನ ದಿನಗಳಲ್ಲಿ ತಕ್ಕ ಪಾಠವನ್ನು ಕಲಿಸಲಿದೆ ಮತ್ತು ಕಾಂಗ್ರೆಸ್ ಮುಕ್ತ ಭಾರತ ಹಿಂದೂಗಳ ಹಿಂದುಸ್ಥಾನದ ಮುಂದಿನ ಧ್ಯೇಯವಾಗಲಿದೆ ಮತ್ತು ನಿಮ್ಮ ಈ ರೀತಿಯ ಭಂಡತನದ ಹೇಳಿಕೆಗಳಿಗೆ ಹಿಂದೂ ಸಮಾಜ ಜಗ್ಗುವುದಿಲ್ಲ ಎಂದು ಖರ್ಗೆಯವರ ಹೇಳಿಕೆಯನ್ನು ತೀಕ್ಷ್ಣವಾಗಿ ಖಂಡಿಸಲಾಗಿದೆ.
Deport Mallikarjun Kharge to Pakistan – Puttila – ತುಳುಟೈಮ್ಸ್
ಇದನ್ನೂ ಓದಿ :ಮುದ್ರಾ ಯೋಜನೆಗೆ 11ರ ಸಂಭ್ರಮ: ಸ್ವಾವಲಂಬಿ ಭಾರತದ ಕನಸಿಗೆ ಆರ್ಥಿಕ ಬಲ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/fyRbYgSgCAw?si=yTuT9X9aLiT0pKfj











