ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

ಕೊರಿಂಜದಲ್ಲಿ 45ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ

ಬೆಳ್ತಂಗಡಿ : Tulu Times l ಬೆಳ್ತಂಗಡಿ ತಾಲೂಕು ಉರುವಾಲು ವಿಭಾಗದ‌ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಸಹಕಾರದೊಂದಿಗೆ 45 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ 6 ನೇ ವರ್ಷದ ಏಕಾಹ ಭಜನಾ ಮಹೋತ್ಸವವು ಆದಿತ್ಯವಾರ, ಏಪ್ರಿಲ್ 05, 2026 ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜದಲ್ಲಿ ನಡೆಯಲಿದೆ‌.

ಈ ಕಾರ್ಯಕ್ರಮವು ಉರುವಾಲು ಶ್ರೀ ಸತ್ಯನಾರಾಯಣ ಸೇವಾ ಸಮಿತಿ, ಕೊರಿಂಜ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ, ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಉರುವಾಲು ಜನಜಾಗೃತಿ ಗ್ರಾಮ ಸಮಿತಿ,‌ ಕೊರಿಂಜ ಶ್ರೀ ಪಂಚಲಿಂಗೇಶ್ವರ ನವಜೀವನ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ.

ಇದೇ ದಿನ (ಏಪ್ರಿಲ್ 05) ಬೆಳಗ್ಗೆ 6.00 ಗಂಟೆಗೆ ಏಕಾಹ ಭಜನೆ ಉದ್ಘಾಟನೆ ಹಾಗೂ ಸಂಜೆ 7.30ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವರದಿಯಾಗಿದೆ.

45th annual mass Satyanarayana puja in Korinja – ತುಳುಟೈಮ್ಸ್

ಇದನ್ನೂ ಓದಿ :ಲಾಕ್‌ಡೌನ್ ಬಗ್ಗೆ ಗಾಳಿಸುದ್ದಿ : ಕೇಂದ್ರದಿಂದ ಸ್ಪಷ್ಟನೆ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/aDo_44I0S8Y?si=8d4obcZ3eB75HrSY

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 11

You cannot copy content of this page