ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಯುಗಾದಿ ಮುನ್ನ ಕರ್ನಾಟಕದಲ್ಲಿ ಗಾಳಿ-ಮಳೆಯ ಅಬ್ಬರ

ಕರ್ನಾಟಕ : Tulu Times l ಉಷ್ಣತೆಯಿಂದ ಬಳಲುತ್ತಿದ್ದ ಕರ್ನಾಟಕದ ಜನತೆಗೆ ಕೊನೆಗೂ ಮಳೆ ತಂಪು ನೀಡಿದರೂ, ಯುಗಾದಿ ಹಬ್ಬದ ಮುನ್ನವೇ ಹವಾಮಾನದಲ್ಲಿ ಏಕಾಏಕಿ ಬದಲಾವಣೆಯು ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಹಲವೆಡೆ ಗಾಳಿ ಸಹಿತ ಮಳೆ ಹಾಗೂ ಗಾಳಿಮಳೆ ಸಂಭವಿಸಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?

ಕರ್ನಾಟಕ ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ಮಳೆಯಾಗಿದ್ದು, ಮುಂದಿನ ಎರಡು ದಿನಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕ: ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಧಾರವಾಡ.

ಕರಾವಳಿ & ಮಲೆನಾಡು: ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು.

ದಕ್ಷಿಣ ಒಳನಾಡು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ದಾವಣಗೆರೆ. ಈ ಎಲ್ಲಾ ಜಿಲ್ಲೆಗಳಿಗೆ ‘ಎಲ್ಲೋ ಅಲರ್ಟ್’ ಘೋಷಿಸಲಾಗಿದೆ.

ಹವಾಮಾನ ತಜ್ಞರ ಪ್ರಕಾರ, ಅರೇಬಿಯನ್ ಸಮುದ್ರ ದಕ್ಷಿಣ ಪೂರ್ವ ಭಾಗ ಮತ್ತು ಲಕ್ಷದ್ವೀಪ ಸುತ್ತಮುತ್ತ ಸೈಕ್ಲೋನಿಕ್ ಸರ್ಕ್ಯುಲೇಶನ್ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಪಶ್ಚಿಮ ಘಟ್ಟ ಪ್ರದೇಶ ಮತ್ತು ಒಳನಾಡು ಭಾಗಗಳಲ್ಲಿ ತೇವಾಂಶ ಹೆಚ್ಚಾಗಿ ಮಳೆಯ ಪರಿಸ್ಥಿತಿ ಉಂಟಾಗಿದೆ. ಒಂದು ಲೆಕ್ಕದಲ್ಲಿ ಇದೀಗ ತಾಪಮಾನ ಕಡಿಮೆಯಾಗಿದ್ದು ಜನರಿಗೆ ತಂಪು ನೀಡುವ ವಾತಾವರಣ ಹಾಗೂ ಕೃಷಿಕರು ನೀರಾವರಿ ಸಮಸ್ಯೆ ಎದುರಿಸುತ್ತಿರುವವರಿಗೆ ಇದೀಗ ಲಾಭದಾಯಕವಾಗಿದೆ. ಇನ್ನು ಕೆಲವೆಡೆ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಯಿದ್ದು, ಗಾಳಿಮಳೆ ಮತ್ತು ಮಿಂಚಿನಿಂದ ಅಪಾಯಗಳೇ ಹೆಚ್ಚುವ ಸಮಸ್ಯೆಯು ಇನ್ನೊಂದೆಡೆಯಾಗಿದೆ.

ಮುನ್ನೆಚ್ಚರಿಕೆ ಸೂಚನೆಗಳು ;

ಮಿಂಚು-ಗುಡುಗು ಸಮಯದಲ್ಲಿ ಮನೆಯೊಳಗೇ ಇರಬೇಕು,

ಮರಗಳ ಕೆಳಗೆ ನಿಲ್ಲಬಾರದು, ರೈತರು ಬೆಳೆ ರಕ್ಷಣೆ ಕ್ರಮ ಕೈಗೊಳ್ಳಬೇಕು, ವಿದ್ಯುತ್ ಉಪಕರಣಗಳಿಂದ ದೂರವಿರಬೇಕು

ಒಟ್ಟಾರೆ, ಮಳೆ ತಂಪು ನೀಡಿದರೂ, ಮುಂದಿನ 48 ಗಂಟೆಗಳು ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Heavy rain and wind in Karnataka ahead of Ugadi – ತುಳುಟೈಮ್ಸ್

ಇದನ್ನೂ ಓದಿ :ಐಪಿಎಲ್ ಹೆಸರಲ್ಲಿ ಲಕ್ಷಾಂತರ ನಕಲಿ ಖಾತೆಗಳು : ಟಿಕೆಟ್ ಪಡೆಯುವ ಮುನ್ನ ಎಚ್ಚರ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/p4-vd_M93Z8?si=2_Dsg70prL_8V_na

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page