ಬ್ರೇಕಿಂಗ್ ನ್ಯೂಸ್
ದೇಶರಾಜಕೀಯ

ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು

ಶಬರಿಮಲೆ : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅ.22ರ ಬುಧವಾರದಂದು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಇಂದು ಮುಂಜಾನೆ ಪಂಪಾ ಮೂಲಕ ವಿಶೇಷ ವಾಹನದಲ್ಲಿ ಶಬರಿಮಲೆಗೆ ತೆರಳಿದ ರಾಷ್ಟ್ರಪತಿಗಳು ಹದಿನೆಂಟು ಮೆಟ್ಟಿಲೇರಿ ಮಣಿಕಂಠನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಾಲ್ಕು ದಿನಗಳ ಕಾಲ ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ಅವರು ಇಂದು ಶಬರಿಮಲೆಗೆ ಆಗಮಿಸಿದ್ದಾರೆ. ಮುಂಜಾನೆ ಹೆಲಿಕಾಪ್ಟರ್ ಮೂಲಕ ಕೇರಳದ ಪಟ್ಟಣಂತಿಟ್ಟ ಬಳಿಯ ಪ್ರಮದಂ ಗೆ ಬಂದ ಅವರು ಬಳಿಕ ವಾಹನದಲ್ಲಿ ಪಂಪೆಗೆ ಆಗಮಿಸಿದ್ದಾರೆ. ಬಳಿಕ ಗಣಪತಿ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಇರುಮುಡಿಯನ್ನು ಕಟ್ಟಿಕೊಂಡು ವಿಶೇಷ ವಾಹನದಲ್ಲಿ ಶಬರಿಮಲೆಗೆ ತೆರಳಿದ್ದಾರೆ.

ಶಬರಿಮಲೆಯಲ್ಲಿ 18 ಮೆಟ್ಟಿಲುಗಳನ್ನು ಏರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಈ ವೇಳೆ ರಾಷ್ಟ್ರಪತಿಯವರ ಅಂಗರಕ್ಷಕರು ಕೂಡ ಇರುಮುಡಿಕಟ್ಟಿದ್ದರು. ದೇವರ ದರ್ಶನ ಬಳಿಕ ಶಬರಿಮಲೆಯ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆದು ಮಧ್ಯಾಹ್ನದ ನಂತರ ಪಂಪೆಗೆ ಹಿಂದಿರುಗಿದ್ದಾರೆ.

ಇದನ್ನೂ ಓದಿ: Uppinangady: ಬಜತ್ತೂರಿನಲ್ಲಿ ಹೊಸ ಟೋಲ್‌ ಪ್ಲಾಜಾ, ಇನ್ನೊಂದು ಟೋಲ್ ಬರೆ!

__________________

 

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 33

You cannot copy content of this page