ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಶಿರ್ಲಾಲು: ಫೆ.16 ಜಾತ್ರೋತ್ಸವ, 19 ಭೈರವಕಲ್ಲಿನ ಪುರುಷರಾಯ ಜಾತ್ರೆ

ಶಿರ್ಲಾಲು: Tulu Times | ಫೆ.16 ರಂದು  ಶಿರ್ಲಾಲು  ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಜಾತ್ರೋತ್ಸವ ನಡೆಯಲಿದ್ದು,  ಫೆ.19 ಭೈರವಕಲ್ಲಿನ ಪುರುಷರಾಯ ಜಾತ್ರೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೊಸಲಾಯಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಾತ್ರಿ ರಂಗಪೂಜೆ ನಡೆಯಲಿದೆ. ಶ್ರೀ ಮಹಾಲಿಂಗೇಶ್ವರ ದೇವರ ಬಲಿ ಉತ್ಸವ, ಬಟ್ಟಲು ಕಾಣಿಕೆ ನಡೆಯಲಿದೆ. ರಾತ್ರಿ ದೈವಗಳ ಭಂಢಾರ ಬಂದು ಉಳ್ಳಾಲ್ತಿ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.  ತೋರಣ ಮುಹೂರ್ತ, ಏಕದಶಿ ರುದ್ರಾಭಿಷೇಕ, ಕಾಯಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಫೆ 19ರಂದು ಕಾರ್ಯಕ್ರಮದ ವಿಶೇಷವಾಗಿ ದಾರ್ಮಿಕ ಬಂಧುತ್ವ ಸಭೆಯು ನಡೆಯಲಿದೆ.  ಈ ವೇಳೆ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಬೆಸ್ಟ್ ಪೌಂಡೇಶನ್‌ ಅಧ್ಯಕ್ಷ ರಕ್ಷಿತ್ ಶಿವರಾಮ್, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾ‌ರ್ ಜೈನ್,ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ, ಪ್ರಮುಖರಾದ ಶೇಖ‌ರ್ ಕುಕ್ಕೇಡಿ ಡಾ.ಶಶಿಧರ ಡೋಂಗ್ರೆ, ಕೃಷ್ಣಪ್ಪ ಗೌಡ ದೇವಸ ಸವಣಾಲು, ಸಂಜೀವ ಪೂಜಾರಿ ಕೊಡಂಗೆ, ಜಯಶೀಲ ಕುಶಾಲಪ್ಪ ಗೌಡ, ಕೆ.ಸುನೀಲ್ ಕುಮಾರ್ ಜೈನ್, ಚಿದಾನಂದ ಪೂಜಾರಿ ಎಲ್ಲಕ್ಕ ಭಾಗವಹಿಸಲಿದ್ದಾರೆ.  ಫೆ. 20 ರಂದು ಕೂಟೆಕ್ಕಿನಡೆ ದೊಂಪದ ಬಲಿ, ಫೆ 24 ರಾತ್ರಿ ರಂಗಪೂಜೆ ನಡೆಯಲಿದೆ.

Shirlalu: Feb. 16th fair, 19th Bhairavakallina Parshuraya fair- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page