ಗುರುವಾಯನಕೆರೆ: Tulu Times | ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವ ಆರಂಭವಾಗಿದ್ದು, ಇಂದು ಅದ್ಧೂರಿಯಾಗಿ ದೈವದ ಭಂಡಾರವನ್ನು ಮೆರವಣಿಗೆ ಮೂಲಕ ತರಲಾಯಿತು.
ನಂತರ, ತಂತ್ರಿ ವರ್ಗದವರ ಉಪಸ್ಥಿತಿಯಲ್ಲಿ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸ್ವಸ್ತಿ ಪುಣ್ಯಾಹವಾಚನ, ಶುದ್ಧಿಗಳು ಗಣಪತಿ ಹೋಮ, ಪಂಚವಿಂಶತಿ ಕಲಶಪೂರಣೆ, ಕಲಶಪೂಜೆ, ಪ್ರಧಾನ ಹೋಮ ಕಲಶಾಭಿಷೇಕ, ಪಂಚಪರ್ವ ಧ್ವಜಾರೋಹಣ ಕಾರ್ಯಕ್ರಮ ಜರುಗಿತ್ತು. ಮಧ್ಯಾಹ್ನದ ವೇಳೆ ದೈವದ ಉತ್ಸವ ನಡೆದು, ಅನ್ನಸಂತರ್ಪಣೆ ನಡೆಯಿತು.
ಈ ವೇಳೆ, ಆಡಳಿತ ಮೊಕ್ತಸರ ಸುಖೇಶ್ ಕುಮಾರ್ ಕಡಂಬು, ಸುನೀಶ್ ಕುಮಾರ್, ಸುಮಂತ್ ಕುಮಾರ್ ಜೈನ್, ಆನಂದ ಶೆಟ್ಟಿ ವಾತ್ಸಲ್ಯ, ಪ್ರದೀಪ್ ಶೆಟ್ಟಿ, ವಾತ್ಸಲ್ಯ, ಶಶಿರಾಜ್ ಶೆಟ್ಟಿ, ಪುರಂದರ ಶೆಟ್ಟಿ ಪಾಡ್ಯಾರು, ರಾಜಪ್ಪ ಶೆಟ್ಟಿ ಸುದೇಕಾರ್, ಗೋಪಿನಾಥ್ ನಾಯಕ್, ಪ್ರಭಾಕರ್ ಶೆಟ್ಟಿ ಉಪ್ಪಡ್ಕ ಉಪಸ್ಥಿತರಿದ್ದರು.
Guruvayanakere: Sri Kodamanittaya Temple’s annual jatrotsav launched- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











