ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮಂಗಳೂರಿನಲ್ಲಿ ಪೊಲೀಸ್‌ ಮನೆಗೆ ನುಗ್ಗಿದ ಕಳ್ಳ

ಮಂಗಳೂರು: Tulu Times | ಮಂಗಳೂರಿನಲ್ಲಿ  ಪೊಲೀಸ್ ಸಿಬ್ಬಂದಿಯ ಮನೆಗೇ ಕಳ್ಳರು ಕನ್ನ ಹಾಕಿ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಪ್ರೈವೇಟ್ ಬಸ್ ಗಳಿಗೆ ಕಡ್ಡಾಯ ಬಾಗಿಲು ಅಳವಡಿಕೆ : ಜೂ.01 ರವರೆಗೆ ಗಡುವು

ಮನೆ ಬಾಗಿಲು ಒಡೆದು ಒಳಗೆ ನುಗ್ಗಿದ ಕಳ್ಳ!

ಸಮರ್ಥ್ ಎಂಬ ಪೊಲೀಸ್‌  ರಜೆ ಮೇಲೆ ಊರಿಗೆ ತೆರಳಿದ್ದು ನೆರೆಹೊರೆಯವರು ಹೋದ ಸಮಯವನ್ನು ನೋಡಿಕೊಂಡು ಕಳ್ಳರು ಮನೆಯ ಬಾಗಿಲು ಹೊಡೆದು ಒಳ ನುಗ್ನಿ ಅವರ ಮನೆಯ ಕಪಾಟನ್ನು ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದಾರೆ. ಮನೆಯಲ್ಲಿ ಇಟ್ಟಿದ್ದ ಬೆಲೆಬಾಳುವ ವಸ್ತುಗಳನ್ನು ಕದ್ದು ಕೊಂಡೊಯ್ದಿದ್ದಾರೆ. ಸಮರ್ಥ್ ಪೊಲೀಸ್ ಲೈನ್ ಎಒನ್ ಬ್ಲಾಕ್‌ನಲ್ಲಿರುವ ದ.ಕ ಜಿಲ್ಲೆಯ ಕಂಟ್ರೋಲ್ ರೂಮಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ದೂರುದಾರರಿಗೆ ಕರೆ ಮಾಡಿ ಪೋಲಿಸರು ಸ್ಥಳಕ್ಕೆ ಹೋಗಿ ನೋಡಿದಾಗ, ಯಾವುದೇ ತರಹದ ಹಾನಿ ಉಂಟಾಗಿದು ಕಂಡುಬಂದಿಲ್ಲ.
ಸ್ಥಳದಲ್ಲಿ ದಕ್ಷಿಣ ಪೊಲೀಸ್ ಠಾಣೆಯ ಪಿಎಸ್‌ಐ 1 ಮತ್ತು ಕ್ರೈಂ ಸಿಬ್ಬಂದಿ ಹಾಜರಿದ್ದು ಮುಂದಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇನ್ನು ಪೋಲಿಸ್‌ ಲೈನ್‌ನ ಮೂರು ಗೇಟ್‌ಗಳು ತೆರೆದಿದ್ದು, ಇಲ್ಲಿಗೆ ಕೇರಳ ರಾಜ್ಯದ ವ್ಯಕ್ತಿಗಳು ನಿರಂತರ ಬಂದು ಹೋಗುತ್ತಿರುವುದು ಕಂಡುಬಂದಿದೆ. ಈ ಕುರಿತಾಗಿ ತನಿಖೆ ಶುರುವಾಗಿದೆ.

ಇದನ್ನೂ ಓದಿ: ವೈಜಯಂತಿ ಮೂವೀಸ್ ಜೊತೆ ಕೈ ಜೋಡಿಸಿದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್

ಉಡುಪಿ: ಲವ್ವರ್ ಜೊತೆ ಮಾತನಾಡುತ್ತಿದ್ದಾಗಲೇ ಆತ್ಮಹತ್ಯೆಗೆ ಶರಣಾದ ಯುವಕ!

ಉಡುಪಿ: ಪ್ರತ್ಯೇಕ ಪ್ರಕರಣದಲ್ಲಿ, ಪ್ರೀತಿಸುತ್ತಿದ್ದ ಹುಡುಗಿ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗಲೇ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಕುಂಜಿಬೆಟ್ಟು ನಿವಾಸಿಯಾದ ರಾಜು ಅವರ ಪುತ್ರ ರಂಜಿತ್ (28) ಮೃತಪಟ್ಟ ಯುವಕ.

ಪೈಂಟಿಂಗ್ ಕೆಲಸ ಮುಗಿಸಿ ಮನೆಗೆ ಬಂದ ರಂಜಿತ್ ಮನೆಯವರೊಟ್ಟಿಗೆ ಮಾತನಾಡಿದ್ದರು. ಅನಂತರ ತಾನು ಪ್ರೀತಿಸುತ್ತಿದ್ದ ಹುಡುಗಿ ಪ್ರೀತಿ ಎಂಬವರ ಜತೆ ಫೋನಿನಲ್ಲಿ ಮಾತನಾಡುತ್ತಾ ತನ್ನ ರೂಮಿನೊಳಗೆ ಹೋಗಿದ್ದನು. ರಾತ್ರಿ ವೇಳೆ ಮನೆಯ ವಾಟರ್ ಟ್ಯಾಂಕಿನ ನೀರು ತುಂಬಿ ಕೆಳಗೆ ಬೀಳುತ್ತಿದ್ದುದರಿಂದ ಅವರ ತಂದೆ ವಾಟರ್ ಟ್ಯಾಂಕಿನ ವಾಲ್ ನ್ನು ಆಫ್ ಮಾಡಲು ಹೋಗುವಾಗ ರಂಜಿತ್ ರೂಮ್ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಎಲ್ಲರಿಗೂ ವಿಚಾರ ತಿಳಿಸಿದ್ದಾರೆ.

ರಂಜಿತ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಕೂಡಲೇ ಆತನನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಆತ್ಮಹತ್ಯೆಯ ಹಿಂದೆ ಅನುಮಾನ ಇರೋದಾಗಿ ಅಣ್ಣರಕ್ಷಿತ್ ಅವರು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಜಾಗ ಗಲಾಟೆ ತಾವೇ ನಿಂತು ಕಂಪೌಂಡ್ ಹಾಕಿಸ್ತಿರುವ ಯಶ್ ತಾಯಿ.

Thief breaks into police house in Mangalore- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page