Kasaragod: ಕಾಲು ಜಾರಿ ಬಾವಿಗೆ ಬಿದ್ದು ಯುವಕನೋರ್ವ ದಾರುಣವಾಗಿ ಮೃತಪಟ್ಟರೆ, ರಕ್ಷಿಸಲು ಬಾವಿಗೆ ಹಾರಿದ ಸಹೋದರರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ನಡೆದಿದೆ. ಕುಂಬಳೆ ಸಮೀಪದ ನಾರಾಯಣ ಮಂಗಳದಲ್ಲಿ ಈ ದುರಂತ ನಡೆದಿದೆ.
ನಾರಾಯಣ ಮಂಗಳದ ನಿವಾಸಿ ವಿವೇಕ್ ಶೆಟ್ಟಿ (28) ಮೃತರು. ಅ. 19ರ ರಾತ್ರಿ 9 ಗಂಟೆ ಸುಮಾರಿಗೆ ವಿವೇಕ್ ಕಾಲು ಜಾರಿ ಬಾವಿಗೆ ಬಿದ್ದಿದ್ದು ರಕ್ಷಿಸಲು ಸಹೋದರ ತೇಜಸ್ ಬಾವಿಗೆ ಹಾರಿದ್ದಾರೆ. ರಕ್ಷಣೆಗಾಗಿ ಬಾವಿಗೆ ಹಾರಿ, ಮೇಲೆ ಬರಲಾರದೆ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
ಬಳಿಕ ಸ್ಥಳೀಯರು ಹಾಗೂ ಮನೆಯವರು ಸಹೋದರರನ್ನು ಮೇಲೆತ್ತಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮಾಹಿತಿ ತಿಳಿದು ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಇಬ್ಬರನ್ನೂ ಮೇಲಕ್ಕೆತ್ತಿದ್ದಾರೆ.
ವಿವೇಕ್ ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಿ ಬಳಿಕ ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಮೃತ ವಿವೇಕ್ ಶೆಟ್ಟಿ ಹಲವು ಸಮಯದಿಂದ ಕಾಸರಗೋಡಿನ ಲೀಗಲ್ ಮೆಟ್ರಾಲಜಿ ಇಲಾಖೆಯ ಸೀನಿಯರ್ ಕ್ಲರ್ಕ್ ಹುದ್ದೆಯಲ್ಲಿದ್ದರು. ಮೃತರು 4 ವರ್ಷಗಳ ಹಿಂದೆ ಆಶ್ರಿತ ನಿಯಮಾನುಸಾರ ಸರ್ಕಾರಿ ಉದ್ಯೋಗವನ್ನೂ ಪಡೆದಿದ್ದರು.
ಇದನ್ನೂ ಓದಿ: Ullala: ಮಲತಂದೆಯಿಂದ ಅಪ್ರಾಪ್ತೆಯ ಅತ್ಯಾಚಾರ; ಆರೋಪಿ ಅಂದರ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











