ಬ್ರೇಕಿಂಗ್ ನ್ಯೂಸ್
ಮಂಗಳೂರು

ಕಾಂಗ್ರೆಸ್‌ ಮುಖಂಡನ‌ ಮಹಾಮೋಸಕ್ಕೆ ಬೆಚ್ಚಿಬಿತ್ತು ಸುರತ್ಕಲ್

ಮಂಗಳೂರು : ಇಲ್ಲೊಬ್ಬ ವ್ಯಕ್ತಿ ತನಗೆ ಬೇಕಾದ ರೀತಿಯಲ್ಲಿ ಬಾಡಿಗೆ ಹೆಸರಲ್ಲಿ ಹಲವು ಕಡೆ ವಂಚನೆ ಮಾಡ್ತಾ ಎಲ್ಲರ ಕಣ್ತಪ್ಪಿಸಿ ಒಂದು ಕೋಟಿಯಷ್ಟು ಹಣ ವಂಚನೆ ಮಾಡಿದ ಆರೋಪದಡಿ ಕೇಸು ದಾಖಲಾಗಿರುವುದು ವರದಿಯಾಗಿದೆ.

ಹೌದು… ಮಂಗಳೂರಿನಲ್ಲಿ ಕೆ.ಸಿ ಎಂಟರ್ ಪ್ರೈಸಸ್ ಎಂಬ ಹೆಸರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಸುರೇಶ್ ಕಾಮತ್, ಮೊಹಮ್ಮದ್ ಕಲಂದರ್ ನವಾಜ್ ಎಂಬಾತನಿಂದ ವಂಚನೆಗೆ ಒಳಗಾಗಿರುತ್ತಾರೆ. ಸುರೇಶ್ ತಮ್ಮ ವ್ಯಾಪಾರದಲ್ಲಿ ಗುತ್ತಿಗೆದಾರರಿಗೆ ಕಟ್ಟಡ ನಿರ್ಮಾಣ ಕೆಲಸಕ್ಕೆ ಬೇಕಾದ ಸೆಂಟ್ರಿಂಗ್ ಶೀಟ್ ಗಳು, ಜಾಕ್, ಫೋಲ್ಡಿಂಗ್ ಹಾಗೂ ಜಾಲಿಗಳನ್ನು ಬಾಡಿಗೆಗೆ ನೀಡುತ್ತಾ ಜೀವನ ಸಾಗಿಸುತ್ತಿದ್ದರು. ಹೀಗಿರುವಾಗ, ಸುರೇಶ್ ಕಾಮತ್ ರ ಪರಿಚಯದ ಮೊಹಮ್ಮದ್ ಕಲಂದರ್ ನವಾಜ್ ಎಂಬವರು 2024 ರಲ್ಲಿ ಈ ಒಂದು ವ್ಯವಹಾರಕ್ಕೆ ಜೊತೆಯಾಗುತ್ತಾರೆ.

ಸುರೇಶ್ ಕಾಮತ್ ರಿಗೆ ಕಟ್ಟಡ ನಿರ್ಮಾಣ ಕೆಲಸಗಳು ಹಾಗೂ ಪಿ.ಡಬ್ಲ್ಯೂ.ಡಿ ಯ ಗುತ್ತಿಗೆಯು ಬಹಳಷ್ಟು ಸಿಕ್ಕಿರುವುದಾಗಿ ಹಾಗೂ ಸರಿಯಾದ ಸಮಯಕ್ಕೆ ಬಾಡಿಗೆಯನ್ನು ಕೊಡುತ್ತೇನೆ ಎಂದು ಮೊಹಮ್ಮದ್ ಕಲಂದರ್ ನವಾಜ್ ರವರು ಇವರನ್ನು ನಂಬಿಸಿ ಹಲವು ವರ್ಷ ಅಂದ್ರೆ 2026 ರವರೆಗೂ ಮೋಸ ಮಾಡ್ತಾನೆ ಬಂದಿರುತ್ತಾರೆ.

ಇದನ್ನೂ ಓದಿ : ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಹೊಸ ಸಿನಿಮಾದ ಟೈಟಲ್ ರಿವೀಲ್..!

ಸುರೇಶ್ ಕಾಮತ್ ಗೆ, 32 ಲಕ್ಷ ರೂಪಾಯಿ ಮೌಲ್ಯದ 3261 ಸೆಂಟ್ರಿಂಗ್ ಶೀಟ್ ಗಳನ್ನು, 35 ಲಕ್ಷ ರೂಪಾಯಿ ಮೌಲ್ಯದ 2770 ಜಾಕ್ ಗಳನ್ನು, 30 ಲಕ್ಷ ರೂಪಾಯಿ ಮೌಲ್ಯದ 750 ಸೆಟ್ ಸ್ಯಾಂಫೋಲ್ಡಿಂಗ್ಸ್ ಹಾಗೂ 5 ಲಕ್ಷ ರೂಪಾಯಿ ಮೌಲ್ಯದ 295 ಜಾಲಿಗಳನ್ನು ಹೀಗೆ ಒಟ್ಟು 1 ಕೋಟಿ 2 ಲಕ್ಷ ಮೌಲ್ಯದ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಈ ಎಲ್ಲಾ ಸಾಮಾಗ್ರಿಗಳಿಗೆ ಸುಮಾರು ಕೊನೆಯ 4 ತಿಂಗಳಿನಿಂದ ಈ ವರೆಗೂ 20 ಲಕ್ಷ 68 ಸಾವಿರ ರೂಪಾಯಿ ಬಾಡಿಗೆ ಬಾಕಿ ಮತ್ತು ಕೈ ಸಾಲವಾಗಿ 4.32,000/- ರೂ ಗಳನ್ನು ಪಡೆದುಕೊಂಡಿದ್ದಲ್ಲದೇ ಕರ್ನಾಟಕ ಬ್ಯಾಂಕ್ ಗೆ ಸಂಬಂಧಿಸಿದ 2 ಲಕ್ಷ 10 ಸಾವಿರ ರೂಪಾಯಿಯ ಚೆಕ್ ನೀಡಿದ್ದು ಅದನ್ನು ಕೂಡಾ ಬ್ಯಾಂಕ್ ಗೆ ಸಲ್ಲಿಸಬಾರದಾಗಿ ಆತ ಹೇಳಿರುವುದು ವರದಿಯಾಗಿದೆ.

ಮೂರು ಜನ ಸದ್ರಿ ವ್ಯವಹಾರಕ್ಕಾಗಿ ಹಲವು ಕಡೆಗಳಲ್ಲಿ ಸಾಲ ;

ಸುರೇಶ್ ಕಾಮತ್ ಪ್ರತೀ ಸಲ ಕೇಳಿದಾಗಲೂ ಆತ ವಾಪಾಸು ಕೊಡುವುದಾಗಿ ನಂಬಿಸುತ್ತಾ ಬಂದಿದ್ದು, ಪ್ರಸ್ತುತ ಆತ ತನ್ನ ಫೋನ್ ನ್ನು ಸ್ವಿಚ್ ಆಫ್ ಮಾಡಿಕೊಂಡು ಕೈಗೂ ಸಿಗದೇ ಓಡಾಡಿಕೊಂಡಿದ್ದಾನೆ. ಇದೇ ರೀತಿಯಾಗಿ ಸುರೇಶ್ ರ ಸ್ನೇಹಿತರಾದ ಭವಾನಿ ಶಂಕರ ಹೆಗ್ಡೆ ಎಂಬಾತರಿಂದಲೂ ಸಹ ಸೆಂಟ್ರಿಂಗ್ ಶೀಟ್ ಗಳು, ಜಾಕ್ ಗಳು ಇತ್ಯಾದಿಗಳನ್ನು‌ ಪಡೆದು ಸುಮಾರು 45 ಲಕ್ಷ ರೂ.ದಷ್ಟು ಮೊಸ ಮಾಡಿರುವುದಲ್ಲದೇ, ಲೋಕೇಶ್ ಎಂಬವರಿಂದ ಸೆಂಟ್ರಿಂಗ್ ಶೀಟ್ ಗಳು ಜಾಕ್ ಗಳು, ಬಾಡಿಗೆಗೆ ಪಡೆದು ಸುಮಾರು 70 ಲಕ್ಷ ದಷ್ಟು ಮೊಸ ಮಾಡಿರುವುದು ವರದಿಯಾಗಿದೆ. ಈ ಮೂರು ಜನ ಸದ್ರಿ ವ್ಯವಹಾರಕ್ಕಾಗಿ ಹಲವು ಕಡೆಗಳಲ್ಲಿ ಸಾಲ ಮಾಡಿಕೊಂಡಿದ್ದು, ಈಗ ವ್ಯಾಪಾರ ಮಾಡಲು ಕಟ್ಟಡ ಸಾಮಾಗ್ರಿಗಳೂ ಇಲ್ಲದೇ ಆದಾಯ ಇಲ್ಲದಂತಾಗಿರುತ್ತದೆ. ಕಲಂದರ್ ನು ಇವತ್ತು ನೀಡುತ್ತೇನೆ ನಾಳೆ ನೀಡುತ್ತೇನೆ ಎಂದು ಹೇಳಿದ್ದರಿಂದ ಈ ದಿನದ ವರೆಗೆ ಎಲ್ಲರೂ ಕಾದು, ಈ ದಿನ‌ ಅಧಿಕೃತವಾಗಿ ಠಾಣೆಯ ಮೆಟ್ಟಿಲೇರುವ ಸಂದರ್ಭ ಬಂದಿದೆನ್ನಲಾಗಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಡಿಗೆ ಹಣ ಹಾಗೂ ಸಾಮಗ್ರಿಗಳನ್ನು ವಾಪಾಸ್ಸು ನೀಡದೇ ನಂಬಿಸಿ ಮೋಸ ಮಾಡಿದ ಮೊಹಮ್ಮದ್ ಕಲಂದರ್ ನವಾಜ್ ಎಂಬಾತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಮೂವರಿಗೆ ನ್ಯಾಯ ಒದಗುತ್ತಾ ಎಂಬುವುದನ್ನು ಕಾದು ನೋಡಬೇಕಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/yx1fqcpWfnc?si=CKym_5_zMgabSl3Y

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 15

You cannot copy content of this page