ಉಡುಪಿ: Tulu Times | ಉಳ್ಳೂರು ಕೆ.ಜಿ ರೋಡ್ ಬಳಿ 14 ಚಕ್ರಗಳ ಟ್ರಕ್ಕಿನ ಚಕ್ರದಡಿ ಸಿಲುಕಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಕ್ರದಡಿ ಸಿಲುಕಿದ ಬೈಕ್ ಸವಾರನ ದೇಹ ಛಿದ್ರಗೊಂಡಿದ್ದು, ದೇಹದಿಂದ ರುಂಡ ಬೆರ್ಪಟ್ಟು ಚಕ್ರದಡಿ ಸಿಲುಕಿಕೊಂಡಿರುವ ಭೀಕರ ದೃಶ್ಯ ಎಂತವರಿಗೂ ಅಚ್ಚರಿ ತಂದಿದೆ. ಮೃತ ಸವಾರ ಬ್ರಹ್ಮರ ಮಟಪಾಡಿಯ ನಿವಾಸಿ ಎನ್ನಲಾಗಿದೆ.
ಶವ ತೆರವು ಹಾಗೂ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು, ಮತ್ತು ಬ್ರಹ್ಮಾವರದ ಅಂಬುಲೆನ್ಸ್ ಚಾಲಕ ನೆರವಾದರು. ಘಟನಾ ಸ್ಥಳಕ್ಕೆ ಬಂದು ಬ್ರಹ್ಮಾವರ ಆರಕ್ಷಕ ಠಾಣೆಯ ಮುಖ್ಯ ಆರಕ್ಷಕ ಮಹಾಲಿಂಗ ಮಹಜರು ಪ್ರಕ್ರಿಯೆ ನಡೆಸಿದರು.
ಮಂಗಳೂರು : ಕರಾವಳಿ ಪ್ರದೇಶದಲ್ಲಿ ವೈರಲ್ ಜ್ವರ, ತಲೆನೋವು ಪ್ರಕರಣಗಳು ಹೆಚ್ಚಳ
ಮಂಗಳೂರು : ಪ್ರತ್ಯೇಕ ಪ್ರಕರಣದಲ್ಲಿ, ಈ ಬಾರಿ ಹವಾಮಾನದಲ್ಲಾಗಿರುವ ತೀವ್ರ ಬದಲಾವಣೆಗಳು ಕರಾವಳಿ ಪ್ರದೇಶದ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಿವೆ. ಅನೇಕ ಮನೆಗಳಲ್ಲಿ ಜನರು ವೈರಲ್ ಜ್ವರ, ಶೀತ ಮತ್ತು ತಲೆನೋವಿನಿಂದ ಬಳಲುತ್ತಿದ್ದು ಒಂದು ವಾರ ಔಷಧಿ ಸೇವಿಸಿದರೂ ಸಂಪೂರ್ಣ ಗುಣಮುಖರಾಗದಿರುವ ಪರಿಸ್ಥಿತಿ ಕಂಡುಬರುತ್ತಿದೆ.
ಡಿಸೆಂಬರ್ ಆರಂಭದಿಂದ ಜನವರಿಯ ಕೊನೆಯ ವಾರದವರೆಗೆ ಜಿಲ್ಲೆಯಲ್ಲಿ ಚಳಿಗಾಲದ ವಾತಾವರಣವಿದ್ದು, ಕೆಲವೊಮ್ಮೆ ಅದರ ತೀವ್ರತೆ ಹೆಚ್ಚಾಗಿತ್ತು. ಒಂದು ವಾರದ ಹಿಂದೆ ಮಳೆಯಾಗಿದ್ದು, ನಂತರ ಏಕಾಏಕಿ ಬಿಸಿಲಿನ ವಾತಾವರಣ ಕಾಣಿಸಿಕೊಂಡಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳ ನಡುವೆ ದೊಡ್ಡ ಮಟ್ಟದ ವ್ಯತ್ಯಾಸ ಉಂಟಾಗಿದ್ದು, ಇದರ ಪರಿಣಾಮವಾಗಿ ಅನೇಕ ಮನೆಗಳಲ್ಲಿ ಶೀತ, ಜ್ವರ ಹಾಗೂ ಗಂಟಲು ನೋವು ಪ್ರಕರಣಗಳು ವರದಿಯಾಗಿವೆ. ವೈರಲ್ ಜ್ವರ ಹಾಗೂ ಚರ್ಮ ಸಂಬಂಧಿತ ಕಾಯಿಲೆಗಳೂ ಹೆಚ್ಚಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಸದನದಿಂದ ಹೊರನಡೆದ ರಾಜ್ಯಪಾಲ ಗೆಹ್ಲೋಟ್ : ‘ಸಂವಿಧಾನ ಉಲ್ಲಂಘನೆ’ ಸಿಎಂ ಸಿದ್ದರಾಮಯ್ಯ ಆರೋಪ
ರೋಗಗಳನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳು ಅತ್ಯವಶ್ಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವಿಸುವುದು, ಸುತ್ತಮುತ್ತಲ ಸ್ವಚ್ಛತೆ ಕಾಪಾಡುವುದು, ಕೈಕಾಲುಗಳನ್ನು ನಿಯಮಿತವಾಗಿ ತೊಳೆಯುವುದು, ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಹಾಗೂ ಬಿಸಿ ಆಹಾರ ಮತ್ತು ಬೆಚ್ಚಗಿನ ನೀರು ಸೇವಿಸುವಂತೆ ಜನರಿಗೆ ಸಲಹೆ ನೀಡಲಾಗಿದೆ. ಜ್ವರ ಅಥವಾ ದೀರ್ಘಕಾಗ್ನಿ ಮುಂದುವರಿಯುವ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು ಹಾಗೂ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿ ಸೇವಿಸಬಾರದು ಎಂದು ಎಚ್ಚರಿಸಲಾಗಿದೆ. ಸೋಂಕು ಲಕ್ಷಣಗಳು ಕಂಡುಬಂದ ಮಕ್ಕಳನ್ನು ಶಾಲೆಗೆ ಕಳುಹಿಸಬಾರದೆಂದು ವೈದ್ಯರು ಪೋಷಕರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಇಚ್ಛಿಸುತ್ತೀರಾ ? ಹಾಗಾದ್ರೆ ಈಗಲೇ ಇ- ಪಾಸ್ ಗೆ ಅಪ್ಲೈ ಮಾಡಿ
ಜಿಲ್ಲೆಯ ಕೆಲವು ಭಾಗಗಳಲ್ಲಿ ಮದ್ರಾಸ್ ಐ ಸೋಂಕಿನ ಪ್ರಕರಣಗಳೂ ವರದಿಯಾಗಿವೆ. ಈ ಸೋಂಕು ಚಳಿಗಾಲ ಅಥವಾ ಮಳೆಯ ಸಮಯದಲ್ಲಿ, ತಣ್ಣನೆಯ ಗಾಳಿ, ಧೂಳು ಅಥವಾ ರಾಸಾಯನಿಕಗಳಿಂದ ಉಂಟಾಗಬಹುದು. ಕಣ್ಣಿನ ತೀವ್ರ ಕೆಂಪು, ನಿರಂತರ ನೀರು ಹರಿಯುವುದು, ಕಣ್ಣಿನಲ್ಲಿ ಮರಳು ಬಿದ್ದಂತೆ ಸುಡುವ ಅಥವಾ ಚುಚ್ಚುವ ಭಾವನೆ, ಕಣ್ಣುಮುಚ್ಚು ಅಂಟಿಕೊಳ್ಳುವುದು, ಕಣ್ಣಿನ ಊತ ಹಾಗೂ ಬೆಳಕನ್ನು ನೋಡಲು ಕಷ್ಟವಾಗುವುದು ಇದರ ಪ್ರಮುಖ ಲಕ್ಷಣಗಳಾಗಿವೆ. ಈ ಸಮಯದಲ್ಲಿ ಕಣ್ಣುಗಳಿಗೆ ವಿಶ್ರಾಂತಿ ಅತ್ಯಗತ್ಯ ಲಕ್ಷಣಗಳು ಕಂಡುಬಂದರೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಬಜೆಟ್‌ಗೂ ಮುನ್ನ ಕೃಷಿ ಕ್ಷೇತ್ರದಿಂದ ತೆರಿಗೆ ಕಡಿತ, ರೈತರಿಗೆ ಹೆಚ್ಚಿನ ಬೆಂಬಲಕ್ಕೆ ಒತ್ತಾಯ
Udupi: Biker dies after being hit by truck- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











