ಕಾಸರಗೋಡು: Tulu Times | ಕಾಸರಗೋಡಿನ ಪೊಯ್ನಾಚಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಮುಖ್ಯಮಂತ್ರಿ ಕೃಪಾಕಟಾಕ್ಷದಲ್ಲೇ ಅಬಕಾರಿ ಸಚಿವರ ಭ್ರಷ್ಟಾಚಾರ: ಸಿ.ಟಿ.ರವಿ ಆರೋಪ
ಅಪಘಾತ ಸಂಭವಿಸಿದ್ದು ಹೇಗೆ..?
ನಿನ್ನೆ ರಾತ್ರಿ ಅಪಘಾತ ಸಂಭವಿಸಿದ್ದು,ಮೃತರನ್ನು ಮಂಗಳೂರು ಮೂಲದ ಆಸಿಫ್ ಮತ್ತು ಶೆಫೀಕ್ ಎಂದು ಗುರುತಿಸಲಾಗಿದ್ದು, ಮಂಜೇಶ್ವರಂ ಮೂಲದ ಇಬ್ಬರು ಗಾಯಗೊಂಡಿದ್ದಾರೆ. ವಯನಾಡಿನಲ್ಲಿ ರಜೆ ಮುಗಿಸಿ ಮಂಗಳೂರಿಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಬಿಎಂಡಬ್ಲ್ಯೂ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದದಿಂದ ಕಾರಿನಿಂದ ಗಾಯಾಳುಗಳನ್ನು ಹೊರಗಡೆ ತೆಗೆಯಲು ಹರಸಾಹಸಪಡಬೇಕಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹಣ್ಣಿನ ವಾಸನೆಯ ಉಸಿರಾಟ ಮಧುಮೇಹದ ಆರಂಭಿಕ ಎಚ್ಚರಿಕೆ ಲಕ್ಷಣ
ಮಂಗಳೂರು: ನೆಲಕ್ಕುರುಳಿದ ಬೃಹತ್ ಗಾತ್ರದ ಮರ; ಭಾರೀ ಹಾನಿ!
ಮಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ, ಆಕಸ್ಮಿಕವಾಗಿ ನೆಲಕ್ಕುರುಳಿದ ಬೃಹತ್ ಗಾತ್ರದ ಮರದಿಂದಾಗಿ ದ್ವಿಚಕ್ರ ವಾಹನಕ್ಕೆ ಭಾರೀ ಹಾನಿ ಯಾಗಿದ್ದು, ಮರ ಬಿದ್ದ ರಭಸಕ್ಕೆ ಸಮೀಪದಲ್ಲಿದ್ದ ವಿದ್ಯುತ್ ಕಂಬವೂ ಮುರಿದು ಬಿದ್ದಿದೆ.
ಇದನ್ನೂ ಓದಿ: ಒಬಿಸಿ ಸಮುದಾಯಕ್ಕೆ ಅವಕಾಶ- ರಘು ಕೌಟಿಲ್ಯ ಮನವಿ
ಪದವಿನಂಗಡಿ ಪ್ರದೇಶದ ಕೊರಗಜ್ಜ ಕಟ್ಟೆ ಮುಂಭಾಗದಲ್ಲಿ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ. ಈ ವೇಳೆ ಸ್ಕೂಟರ್ ಮೇಲೆ ಮರ ಬಿದ್ದಿದ್ದು ಸ್ಕೂಟರ್‌ಗೆ ಭಾರೀ ಹಾನಿಯಾಗಿದೆ. ಯಾರಿಗೂ ಏನೂ ಪ್ರಾಣಹಾನಿಯಾಗಿಲ್ಲ. ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟೆಂಪೋ ಚಾಲಕ ಮರ ಬೀಳುವ ಕ್ಷಣದಲ್ಲಿ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಸಮೀಪದ ಕಟ್ಟಡವೊಂದರ ಗಾಜುಗಳು ನುಚ್ಚುನೂರಾಗಿದೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಸ್ಥಳೀಯರು ಮರ ತೆರವುಗೊಳಿಸುವ ಕಾರ್ಯಾಚರಣೆ ಮಾಡಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನೂ ಓದಿ: ಶುಭಕೃತ್ ನಾಮ ಸಂವತ್ಸರ’ ತಂಡ ಸೇರಿದ ತೆಲುಗು ನಟ..ನರೇಶ್ ಬರ್ತ್ ಡೇಗೆ ಗ್ಲಿಂಪ್ಸ್ ರಿಲೀಸ್
Kasaragod: Two killed in road accident in Mangalore- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











