ಬೆಳ್ತಂಗಡಿ: Tulu Times | ಚಾರ್ಮಾಡಿ ಘಾಟಿಯ 2ನೇ ಮತ್ತು 3ನೇ ತಿರುವಿನಲ್ಲಿ ಕಾಡಾನೆ ಕಾಣಿಸಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಜ.9 ರಂದು ರಾತ್ರಿ ಸುಮಾರು 9.45ರ ವೇಳೆಗೆ ಮರವನ್ನು ಮುರಿದು ರಸ್ತೆ ಮಧ್ಯೆ ಚಾರ್ಮಾಡಿಯ 2 ಮತ್ತು 3 ನೇ ತಿರುವಿನಲ್ಲಿ ನಿಂತ ಕಾಡಾನೆ, ಒಂದು ಗಂಟೆಗೂ ಹೆಚ್ಚು ಕಾಲ ಅಲ್ಲೇ ತಿರುಗಾಡುತಿತ್ತು. ಹೀಗಾಗಿ, ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಟ್ರಾಫಿಕ್ ಜಾಮ್ ಉಂಟಾಗಿ, ವಾಹನಗಳು ಓಡಾಡಲು ಕಷ್ಟವಾಗಿತ್ತು.ವಾಹನ ಸವಾರರು ಭಯಭೀತರಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳದಲ್ಲಿ ಮೊಬೈಲ್ ನೆಟ್ವರ್ಕ್ ಕೂಡ ಇರಲಿಲ್ಲ. ಹೀಗಾಗಿ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಸಾರ್ವಜನಿಕರು ಪರದಾಡಿದ್ದಾರೆ. ದಕ್ಷಿಣ ಕನ್ನಡ – ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿರುವ ಕಾರಣ, ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಚಾರ್ಮಾಡಿ ಘಾಟಿಯಲ್ಲಿ ಧಗ ಧಗನೆ ಹೊತ್ತಿ ಉರಿದ ಲಾರಿ
ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ, ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿಯೊಂದು ಸುಟ್ಟು ಕರಕಲಾದ ಘಟನೆ ನಡೆದಿದೆ. ಲಾರಿ ಚಾಲಕ ಸಹಿತ ಲಾರಿಯಲ್ಲಿದ್ದ ಮೂರು ಮಂದಿ ಅದೃಷ್ಟಪಶಾತ್ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಇನ್ನು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಜಾವಗಲ್ ನಿಂದ ಕುಂದಾಪುರದ ಕಡೆಗೆ ಮೆಕ್ಕೆಜೋಳದ ಲೋಡ್ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಇನ್ನು ಲಾರಿ ಹೊತ್ತಿ ಉರಿದು ಮೂವರು ಪಾರಾಗಿದ್ದಾರೆ. ಬೆಂಕಿ ರಸ್ತೆ ಬದಿಯ ಅರಣ್ಯಕ್ಕೆ ವ್ಯಾಪಿಸಿದೆ. ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಕ್ರಮದಿಂದ ಹತೋಟಿಗೆ ತರಲಾಗಿದೆ.
ಚಾರ್ಮಾಡಿ ಘಾಟ್ ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಅತ್ಯಂತ ಸುಂದರವಾದ ಮತ್ತು ಪ್ರಮುಖವಾದ ಪರ್ವತ ಮಾರ್ಗಗಳಲ್ಲಿ ಒಂದಾಗಿದೆ. ಇಲ್ಲಿನ ರಸ್ತೆಯು ಒಟ್ಟು ೧೨ ಕಡಿದಾದ ತಿರುವುಗಳನ್ನು ಹೊಂದಿದೆ. ಮಳೆಗಾಲದಲ್ಲಿ ಈ ಪ್ರದೇಶವು ಮಂಜಿನಿಂದ ಆವೃತವಾಗಿದ್ದು, ಹಲವಾರು ಸಣ್ಣ ಜಲಪಾತಗಳು ನೋಡುಗರನ್ನು ಸೆಳೆಯುತ್ತವೆ. ಹೀಗಾಗಿ ಇಲ್ಲಿ ಪ್ರವಾಸ ತೆರಳುವ ಮಂದಿ ಮಾಹಿತಿ ಪಡೆದುಕೊಂಡು ತೆರಳುವುದು ಉತ್ತಮ.
Wild elephant sighted at Charmadi Ghat.. Traffic jam for some time!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











