ಕರ್ನಾಟಕ: Tulu Times | ಬೀದಿನಾಯಿಗಳ ಹಾವಳಿ ಪ್ರಕರಣದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ನೀಡಿದ ಅಭಿಪ್ರಾಯಕ್ಕೆ ನಟಿ ರಮ್ಯಾ ವ್ಯಂಗ್ಯವಾಗಿ ಟೀಕಿಸಿದ್ದಾರೆ. ಗಂಡ್ಮಕ್ಕಳ ಮನಸ್ಥಿತಿಯನ್ನು ಬೀದಿ ನಾಯಿಗೆ ಹೋಲಿಸಿದ್ದಾರೆ.
ಸುಪ್ರೀಂಕೋರ್ಟ್ ನೀಡಿದ ಅಭಿಪ್ರಾಯ ಏನು..?
ಬೀದಿನಾಯಿಗಳ ಹಾವಳಿ ಬಗ್ಗೆ ಸುಪ್ರೀಂಕೋರ್ಟ್, ‘ಬೀದಿನಾಯಿಗಳ ಮನಸ್ಥಿತಿ ಯಾವಾಗ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾವಾಗ ಕಚ್ಚುತ್ತವೆ, ಯಾವಾಗ ಕಚ್ಚುವುದಿಲ್ಲ ಎಂದು ಯಾರಿಗೂ ಅರ್ಥವಾಗದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ನಟಿ ರಮ್ಯಾ, ನಾಯಿಗಳ ಮನಸ್ಥಿತಿ ಅರ್ಥ ಮಾಡಿಕೊಳ್ಳಲಾಗದಿದ್ದರೆ, ಪುರುಷರ ಮನಸ್ಥಿತಿಯೂ ಅರ್ಥವಾಗದು. ಹಾಗಾದರೆ ಎಲ್ಲ ಪುರುಷರನ್ನೂ ಜೈಲಿಗೆ ಹಾಕಿ’ ಎಂದು ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಟೀಕಿಸಿದ್ದಾರೆ. ಈಗಾಗಲೇ, ಸುಪ್ರೀಂಕೋರ್ಟ್‌ನಲ್ಲಿ ಬೀದಿನಾಯಿಗಳ ಹಾವಳಿ ಮತ್ತು ಕಚ್ಚುವಿಕೆ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ಮಹಿಳಾ ಸುರಕ್ಷತೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಸುಪ್ರೀಂಕೋರ್ಟ್‌ನ ದೃಷ್ಟಿಕೋನವನ್ನು ಪ್ರಶ್ನಿಸಿದ್ದಾರೆ. ಬೀದಿನಾಯಿಗಳ ಕಚ್ಚುವಿಕೆಯನ್ನು ಮನಸ್ಥಿತಿಯೊಂದಿಗೆ ಹೋಲಿಕೆ ಮಾಡುವುದು ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಕಡಿಮೆಗಣಿಸುವಂತಿದೆ ಎನ್ನುವುದು ನಟಿಯ ವಾದ. ರಮ್ಯಾ ಅವರ ಈ ತೀಕ್ಷ್ಣ ಪ್ರತಿಕ್ರಿಯೆಗೆ ಬೆಂಬಲಿಗರು ಮತ್ತು ವಿರೋಧಿಗಳು ಎರಡೂ ಭಾಗಗಳಿಂದ ಪ್ರತಿಕ್ರಿಯೆಗಳು ಬರುತ್ತಿವೆ.
ಸಾರ್ವಜನಿಕ ಜಾಗೃತಿ ಏನು..?
ಬೀದಿನಾಯಿಗಳ ಹಾವಳಿ ಇಂದು ಅನೇಕ ನಗರ ಮತ್ತು ಹಳ್ಳಿಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ನಾಯಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಶಿಕ್ಷಣ ನೀಡಬೇಕು. ನಾಯಿಗಳಿಗೆ ಕಿಚಾಯಿಸುವುದು ಅಥವಾ ಕಲ್ಲು ಹೊಡೆಯುವುದು ಅವುಗಳನ್ನು ಆಕ್ರಮಣಕಾರಿಯಾಗಿಸಬಹುದು. ನಿಮ್ಮ ಏರಿಯಾದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೆ, ತಕ್ಷಣ ಸ್ಥಳೀಯ ನಗರಪಾಲಿಕೆ ಅಥವಾ ಪಂಚಾಯತ್ ಕಚೇರಿಗೆ ದೂರು ನೀಡಿ. ಬೆಂಗಳೂರಿನ ನಿವಾಸಿಗಳು BBMP ಸಹಾಯವಾಣಿ ಮೂಲಕ ದೂರು ದಾಖಲಿಸಬಹುದು. ನಾಯಿಗಳಿಂದ ಹರಡುವ ರೇಬಿಸ್ ಕಾಯಿಲೆಯನ್ನು ತಡೆಗಟ್ಟಲು ಬೀದಿನಾಯಿಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸಬೇಕು. ರಸ್ತೆ ಬದಿಯಲ್ಲಿ ಚೆಲ್ಲುವ ಮಾಂಸದ ತ್ಯಾಜ್ಯ ಮತ್ತು ಹೋಟೆಲ್ ಕಸ ನಾಯಿಗಳನ್ನು ಒಂದು ಕಡೆ ಸೇರುವಂತೆ ಮಾಡುತ್ತದೆ. ಕಸವನ್ನು ಸರಿಯಾಗಿ ವಿಲೇವಾರಿ ಮಾಡುವುದರಿಂದ ನಾಯಿಗಳ ಗುಂಪು ಸೇರುವುದನ್ನು ತಪ್ಪಿಸಬಹುದು.
Actress Ramya sarcastically responds to court’s opinion on stray dog infestation case!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











