ಸಂಕಷ್ಟ ಚತುರ್ಥಿ : Tulu Times | ಗಣೇಶ ಭಕ್ತರಲ್ಲಿ ಅತ್ಯಂತ ಶ್ರದ್ಧೆಯಿಂದ ಆಚರಿಸಲಾಗುವ ವಿಶೇಷ ವ್ರತವನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ‘ಅಂಗಾರಕ’ ಎಂಬುದು ಮಂಗಳಗ್ರಹದ ಮತ್ತೊಂದು ಹೆಸರು. ಆದ್ದರಿಂದ ಈ ದಿನ ಮಂಗಳಗ್ರಹದ ದೋಷ ನಿವಾರಣೆಗೂ, ಜೀವನದ ಸಂಕಷ್ಟಗಳಿಂದ ಮುಕ್ತಿ ಪಡೆಯಲು ಈ ವ್ರತವನ್ನು ಅತ್ಯಂತ ಫಲಪ್ರದವೆಂದು ನಂಬಲಾಗುತ್ತದೆ.
ಭಕ್ತರ ಕಷ್ಟಗಳನ್ನು ವಿಶೇಷವಾಗಿ, ಶೀಘ್ರವಾಗಿ ಪರಿಹರಿಸುತ್ತಾನೆ ;
ಪುರಾಣಗಳ ಪ್ರಕಾರ, ಮಂಗಳವಾರದ ಸಂಕಷ್ಟಿ ಚತುರ್ಥಿಯಲ್ಲಿ ಗಣಪತಿಯನ್ನು ಆರಾಧಿಸಿದರೆ, ದೀರ್ಘಕಾಲದ ಸಮಸ್ಯೆಗಳು ನಿವಾರಣೆಯಾಗುತ್ತವೆ, ಮಂಗಳದೋಷ, ಕುಜದೋಷ ಶಮನವಾಗುತ್ತದೆ. ವಿವಾಹ ವಿಳಂಬ, ಸಂತಾನ ಸಂಬಂಧಿ ಅಡಚಣೆಗಳು ದೂರವಾಗುತ್ತವೆ. ಆರೋಗ್ಯ, ಉದ್ಯೋಗ ಮತ್ತು ಆರ್ಥಿಕ ಸ್ಥಿರತೆ ದೊರೆಯುತ್ತದೆ ಹಾಗೂ ಈ ದಿನ ಗಣಪತಿ ಭಕ್ತರ ಕಷ್ಟಗಳನ್ನು ವಿಶೇಷವಾಗಿ, ಶೀಘ್ರವಾಗಿ ಪರಿಹರಿಸುತ್ತಾನೆ ಎಂಬ ನಂಬಿಕೆ ಇದೆ.
ಈ ದಿನ ವ್ರತ ಆಚರಣೆ ಮಾಡುವವರು, ಬೆಳಿಗ್ಗೆ ಸ್ನಾನ ಮಾಡಿ ಶುಭ್ರ ವಸ್ತ್ರ ಧರಿಸಬೇಕು, ದಿನವಿಡೀ ಉಪವಾಸ ಅಥವಾ ಫಲಾಹಾರ ವ್ರತ ಪಾಲಿಸಲಾಗುತ್ತದೆ. ಸಂಜೆ ಚಂದ್ರೋದಯದ ನಂತರ ಮಾತ್ರ ಭೋಜನ, ಗಣಪತಿಗೆ ದೂರ್ವಾ, ಮೋದಕ, ಹೂವು, ನೈವೇದ್ಯ ಅರ್ಪಣೆ,ಗಣೇಶ ಅಥರ್ವಶೀರ್ಷ, ಸಂಕಷ್ಟಿ ವ್ರತ ಕಥೆ ಪಠಣ ಹಾಗೂ ಚಂದ್ರದರ್ಶನದ ನಂತರ ವ್ರತ ಮುಕ್ತಾಯಗೊಳಿಸುವುದು ಅತ್ಯಂತ ಮುಖ್ಯವಾಗಿರುತ್ತದೆ.
ಗಣಪತಿಯನ್ನು ಪೂಜಿಸಿದರೆ ಮಂಗಳಗ್ರಹದ ಕೃಪೆ ದೊರೆಯುತ್ತದೆ ;
ಪುರಾಣಗಳಲ್ಲಿ ಮಂಗಳಗ್ರಹವು ಗಣಪತಿಯನ್ನು ಆರಾಧಿಸಿ ತನ್ನ ದೋಷಗಳನ್ನು ನಿವಾರಿಸಿಕೊಂಡ ಕಥೆ ಪ್ರಸಿದ್ಧವಾಗಿದೆ. ಅದರಿಂದಲೇ ಮಂಗಳವಾರದ ಸಂಕಷ್ಟಿಗೆ ‘ಅಂಗಾರಕ’ ಎಂಬ ಹೆಸರು ಬಂದಿದೆ. ಈ ದಿನ ಗಣಪತಿಯನ್ನು ಪೂಜಿಸಿದರೆ ಮಂಗಳಗ್ರಹದ ಕೃಪೆ ದೊರೆಯುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಅಲ್ಲದೇ, ಅಂಗಾರಕ ಸಂಕಷ್ಟಿಯನ್ನು ನಿಷ್ಠೆಯಿಂದ ಆಚರಿಸಿದರೆ, ಜೀವನದಲ್ಲಿ ಎದುರಾಗುವ ಅಡೆತಡೆಗಳು ನಿಧಾನವಾಗಿ ದೂರವಾಗಿ, ಮನಸ್ಸಿಗೆ ಶಾಂತಿ ಮತ್ತು ಆತ್ಮವಿಶ್ವಾಸ ದೊರೆಯುತ್ತದೆ ಎಂಬುದು ಭಕ್ತರ ಅನುಭವ.
Tuesday’s Angarak Sankashta Chaturthi: Quick solution to the difficulties of devotees – ತುಳು ಟೈಮ್ಸ್
ಇದನ್ನೂ ಓದಿ : ಮಂಗಳೂರು: ಗೆಳತಿಯ ಎದುರೇ ನದಿಗೆ ಹಾರಿದ ಯುವತಿ ಆತ್ಮಹತ್ಯೆ !
========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=LsSvXVhrSIMoXFUz











