ಚಿತ್ರದುರ್ಗ : Tulu Times | ಹಿರಿಯೂರಿನಲ್ಲಿ ನಡೆದ ಭೀಕರ ಅಪಘಾತ ಹೃದಯ ವಿದ್ರಾವಕವಾಗಿದೆ. ಹಲವು ಸಾವು, ನೋವುಗಳ ಚೀರಾಟ ಮುಗಿಲು ಮುಟ್ಟಿತ್ತು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ ಬದುಕಿ ಬಂದ ಚಾಲಕ ಮಹಮ್ಮದ್, ‘ನಾನು ಚಾಲನೆ ಮಾಡುವಾಗ ವೇಗವಾಗಿ ಲಾರಿ ಬಂತು, ಅದನ್ನ ತಪ್ಪಿಸಲು ನಾನು ಹೋದಾಗ ಪಕ್ಕದಲ್ಲಿ ಇನ್ನೊಂದು ಬಸ್ ಬಂತು, ಲಾರಿಯವನು ಡಿಸೇಲ್ ಟ್ಯಾಂಕ್ ಗೆ ಬಂದು ಗುದ್ದಿದ್ದಾನೆ, ನನಗೆ ಆ ಕ್ಷಣದಲ್ಲಿ ಏನು ಆಯ್ತು ಅಂತ ಗೊತ್ತಾಗಲಿಲ್ಲಾ’ ಅಂತ ಹೇಳಿಕೆ ನೀಡಿರುವುದು ವರದಿಯಾಗಿದೆ.
ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟ್ಟಿದ್ದ ಸೀಬರ್ಡ್ ಬಸ್ ಗೆ ಲಾರಿ ಬಂದು ಗುದ್ದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಸುಟ್ಟು ಕರಕಲಾಗಿದೆ. ದುರಂತದಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಆದ್ರೆ, ಒಟ್ಟು ಎಷ್ಟು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನುವ ನಿಖರ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸ್ ತಂಡ ಪರಿಶೀಲನೆ ನಡೆಸಿದೆ. ಇನ್ನು ಈ ದುರಂತದಿಂದ ಹಲವರು ಬಚಾವ್ ಆಗಿದ್ದು, ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆಯೂ ರೋಚಕವಾಗಿದೆ.
ನೋಡು ನೋಡುತ್ತಿದ್ದಂತೆ ಸಜೀವ ದಹನವಾದವರು ಹಲವರಾದರೆ, ಲಾರಿ ಚಾಲಕ ಸೇರಿ ಬಸ್ನಲ್ಲಿದ್ದ 5 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಬಸ್ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ ಒಟ್ಟು 33 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಚಿತ್ರದುರ್ಗ, ಶಿರಾ, ಹಿರಿಯೂರು ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
Bus driver survives horrific bus accident: Many burned alive – ತುಳು ಟೈಮ್ಸ್
ಇದನ್ನೂ ಓದಿ :ಶ್ರೀ ಜಟಾಧಾರಿ ಮತ್ತು ಪರಿವಾರ ದೈವಗಳ ಧರ್ಮಚಾವಡಿಯ ಸಮಾಲೋಚನಾ ಸಭೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Qg7ctTd7pfY?si=IDkF0fD38uBlvajW











