ಬ್ರೇಕಿಂಗ್ ನ್ಯೂಸ್
ಕರ್ನಾಟಕ

ರೈತ ಉಳಿದರೆ ದೇಶ ಉಳಿಯುತ್ತದೆ : ಡಿಸೆಂಬರ್ 23 ‘ರಾಷ್ಟ್ರೀಯ ರೈತ ದಿನ’

ರೈತರ ದಿನಾಚರಣೆ : Tulu Times | ರೈತರ ಶ್ರಮ, ತ್ಯಾಗ ಮತ್ತು ಕೊಡುಗೆಗಳನ್ನು ಗೌರವಿಸುವುದಕ್ಕಾಗಿ ಪ್ರತಿವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನಾಚರಣೆ ಆಚರಿಸಲಾಗುತ್ತದೆ. ಆದರೆ ಇದು ದಿನಕ್ಕೆ ಸೀಮಿತವಾಗಿರುವ ಆಚರಣೆಯಲ್ಲ. ಪ್ರತೀ ದಿನ, ಪ್ರತೀ ಸಮಯದಲ್ಲೂ ನಾವು ರೈತರಿಗೆ ಧನ್ಯತೆಯಿಂದಿರುವುದು ಮುಖ್ಯವಾಗಿರುತ್ತದೆ.

ಬೆಳಗಿನ ಜಾವದಿಂದ ಸಂಜೆಯವರೆಗೆ ಹೊಲಗಳಲ್ಲಿ ದುಡಿಯುವ ಅವರ ಪರಿಶ್ರಮದಿಂದಲೇ ದೇಶದ ಕೋಟ್ಯಾಂತರ ಜನರಿಗೆ ಆಹಾರ ದೊರಕುತ್ತದೆ. ಹವಾಮಾನ ವೈಪರಿತ್ಯ, ಬೆಳೆ ನಷ್ಟ, ಮಾರುಕಟ್ಟೆ ಬೆಲೆ ಅಸ್ಥಿರತೆ, ಸಾಲದ ಒತ್ತಡಗಳ ನಡುವೆಯೂ ರೈತರು ಕೃಷಿಯನ್ನು ಮುಂದುವರೆಸುತ್ತಿರುವುದು ಅಪಾರ ಧೈರ್ಯ ಮತ್ತು ಸಮರ್ಪಣೆಯ ಉದಾಹರಣೆ. ಇಂತಹ ರೈತರ ಜೀವನ, ಸಮಸ್ಯೆಗಳು ಮತ್ತು ಹಕ್ಕುಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದೇ ರಾಷ್ಟ್ರೀಯ ರೈತರ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಬಹುದು.

ಈ ದಿನದಂದು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕೃಷಿ ಸಂಬಂಧಿತ ವಿಚಾರ ಸಂಕಿರಣಗಳು, ರೈತರ ಸಾಧನೆಗಳಿಗೆ ಪ್ರಶಸ್ತಿ ಪ್ರದಾನ, ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ ಕಾರ್ಯಕ್ರಮಗಳು, ಶಾಲಾ–ಕಾಲೇಜುಗಳಲ್ಲಿ ರೈತರ ಮಹತ್ವದ ಬಗ್ಗೆ ಭಾಷಣ ಹಾಗೂ ಲೇಖನ ಸ್ಪರ್ಧೆಗಳು ನಡೆಯುತ್ತವೆ. ಸರ್ಕಾರವು ಈ ದಿನದಂದು ಕೃಷಿ ಯೋಜನೆಗಳು, ರೈತರ ಕಲ್ಯಾಣ ಕಾರ್ಯಕ್ರಮಗಳು ಮತ್ತು ಹೊಸ ನೀತಿಗಳನ್ನು ಪರಿಚಯಿಸುವುದಿದೆ. ಆದರೆ ಎಷ್ಟು ಮಂದಿ ಈ ದಿನವನ್ನು ನೆನಪಿಟ್ಟುಕೊಂಡಿದ್ದಾರೆ ಅನ್ನೋದೇ ಪ್ರಶ್ನೆ. ಹಾಗಾಗಿ, ರೈತರ ಬದುಕು ಸುಧಾರಣೆ, ಅವರಿಗೆ ನ್ಯಾಯಸಮ್ಮತ ಬೆಲೆ, ಆಧುನಿಕ ತಂತ್ರಜ್ಞಾನ, ನೀರಾವರಿ ಸೌಲಭ್ಯಗಳು ಮತ್ತು ಸಾಮಾಜಿಕ ಭದ್ರತೆ ಒದಗಿಸುವುದು ನಮ್ಮೆಲ್ಲರ ಹೊಣೆಗಾರಿಕೆ. “ರೈತ ಉಳಿದರೆ ದೇಶ ಉಳಿಯುತ್ತದೆ” ಎಂಬ ಸತ್ಯವನ್ನು ಮನಗಂಡು, ರೈತರ ಶ್ರಮಕ್ಕೆ ಗೌರವ ಸಲ್ಲಿಸುವುದೇ ರಾಷ್ಟ್ರೀಯ ರೈತರ ದಿನಾಚರಣೆಯ ನಿಜವಾದ ಅರ್ಥವನ್ನು ಉಳಿಸಬೇಕಾಗಿದೆ.

If the farmer survives, the country survives: December 23 National Farmers’ Day – ತುಳು ಟೈಮ್ಸ್

ಇದನ್ನೂ ಓದಿ :ಕಳ್ಳತನ ಮಾಡೋದಿಕ್ಕೆ ಗೂಗಲ್ ಮ್ಯಾಪ್ ಬಳಸಿದ್ರಾ ಕದೀಮರು ?

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/FGONMu5gqxQ?si=QFAo0VHBqtafBDpX

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page