ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕಾಡಾನೆ ಹಾವಳಿ ತಡೆಯೋದಕ್ಕಾಗಿ ಹೊಸ ತಂತ್ರದ ಪರಿಚಯ !

ಮೈಸೂರು : Tulu Times | ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಮಾನವ ಜೀವನದ ಹಲವು ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಈ ತಂತ್ರಜ್ಞಾನದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧನಗಳಲ್ಲಿ ಎಐ ಕ್ಯಾಮರಾ ಕೂಡಾ ಒಂದು. ಸಾಮಾನ್ಯ ಕ್ಯಾಮರಾಗಳಿಗಿಂತ ವಿಭಿನ್ನವಾಗಿ, ಎಐ ಕ್ಯಾಮರಾ ಚಿತ್ರಗಳನ್ನು ಕೇವಲ ಸೆರೆಹಿಡಿಯುವುದಲ್ಲದೆ ಅವುಗಳನ್ನು ವಿಶ್ಲೇಷಿಸುವ ಸಾಮರ್ಥ್ಯವನ್ನೂ ಹೊಂದಿರುತ್ತದೆ.

ಎಐ ಕ್ಯಾಮರಾ ವಸ್ತುಗಳು, ಮುಖಗಳು, ಚಲನೆಗಳು ಹಾಗೂ ಪರಿಸ್ಥಿತಿಗಳನ್ನು ಗುರುತಿಸುವ ಸಾಮರ್ಥ್ಯವಿರುವ ಕ್ಯಾಮರಾ ವ್ಯವಸ್ಥೆ. ಇದು ಚಿತ್ರ ಅಥವಾ ವೀಡಿಯೊವನ್ನು ರಿಯಲ್ ಟೈಮ್‌ನಲ್ಲಿ ವಿಶ್ಲೇಷಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಮುಖ ಗುರುತಿಸುವಿಕೆ, ವಾಹನ ಸಂಖ್ಯೆ ಪ್ಲೇಟ್ ಓದುವಿಕೆ ಇತ್ಯಾದಿ ಕಾರ್ಯಗಳನ್ನು ಇದು ಸುಲಭವಾಗಿ ನಿರ್ವಹಿಸುತ್ತದೆ.

ಆನೆಗಳ ಉಪಟಳ ನಿಂತಿಲ್ಲ ;

ಇತ್ತೀಚೆಗೆ ಮೈಸೂರು ಜಿಲ್ಲೆಯಲ್ಲಿ ಮಾವನ-ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗಿದ್ದು, ನಾಗರಹೊಳೆ ಅರಣ್ಯ ಪ್ರದೇಶದ ಗಡಿ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿ, ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಆನೆಗಳ ಉಪಟಳ ನಿಂತಿಲ್ಲ. ಇದರಿಂದ ಜನಸಾಮಾನ್ಯರು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಅರಣ್ಯ ಇಲಾಖೆಯು, ಕಾಡಾನೆ ಹಾವಳಿ ತಡೆಯಲು ಒಂದು ವಿನೂತನ ವಿಧಾನವೊಂದನ್ನು ಕಂಡುಕೊಂಡಿದ್ದು, ಬಹುತೇಕ ಯಶಸ್ವಿಯಾಗಿದೆ. ಹೌದು.. ನಾಗರಹೊಳೆ ಅರಣ್ಯ ಗಡಿಗಳಲ್ಲಿ ಕಾಡಾನೆಗಳನ್ನು ಓಡಿಸಲು ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಕ್ಯಾಮರಾಗಳನ್ನು ಧ್ವನಿವರ್ಧಕಗಳ ಜತೆ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ.

ಈ ಕ್ಯಾಮರಾಗಳು ಕಾಡಾನೆಗಳು ಸುಮಾರು 150 ಮೀಟರ್ ದೂರದಲ್ಲಿದ್ದಾಗಲೇ ಅವುಗಳನ್ನು ಗುರುತಿಸಿ, ಜೋರಾಗಿ ಶಬ್ದಗಳನ್ನು ಮಾಡುವ ಮೂಲಕ ಅವುಗಳನ್ನು ಓಡಿಸುತ್ತಿವೆ ಎಂಬುದು ತಿಳಿದುಬಂದಿದೆ.

New strategy introduced to prevent wild elephant infestation! – ತುಳು ಟೈಮ್ಸ್

ಇದನ್ನೂ ಓದಿ :ಗುಂಡ್ಯದಲ್ಲಿ ಆಂಬ್ಯುಲೆನ್ಸ್ ಕಳ್ಳತನ ಮಾಡಿದ್ದ ಕಳ್ಳ ಅರೆಸ್ಟ್‌‌ !

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/FGONMu5gqxQ?si=QFAo0VHBqtafBDpX

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page