ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

ಗುಂಡ್ಯದಲ್ಲಿ ಆಂಬ್ಯುಲೆನ್ಸ್ ಕಳ್ಳತನ ಮಾಡಿದ್ದ ಕಳ್ಳ ಅರೆಸ್ಟ್‌‌ !

ಕಡಬ: Tulu Times | ಇತ್ತೀಚೆಗೆ ಗುಂಡ್ಯದಲ್ಲಿ ನಿಲ್ಲಿಸಿದ್ದ ಆಂಬ್ಯುಲೆನ್ಸ್‌ ಕಳ್ಳತನವಾದ ಪ್ರಕರಣ ವರದಿಯಾಗಿತ್ತು. ಇದೀಗ ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ, ಅರೆಸ್ಟ್‌ ಮಾಡಿದ್ದಾರೆ.

ಉಡುಪಿ ಕಾರ್ಕಳ ನಿವಾಸಿ ಶೋಧನ್ (22) ಬಂಧಿತ ಆರೋಪಿಯಾಗಿದ್ದು,  ಆರೋಪಿಯನ್ನು ಹಾಸನದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶಿರಾಡಿ ನಿವಾಸಿ ಸುರೇಶ್ (46) ಎಂಬವರು ಅಂಬ್ಯುಲೆನ್ಸ್ ಚಾಲಕರಾಗಿದ್ದು, ಪ್ರತಿ ದಿನ ರಾತ್ರಿ ಗುಂಡ್ಯ ಚೆಕ್ ಪೋಸ್ಟ್ ಬಳಿ ನಿಲ್ಲಿಸಿ ಲಾಕ್ ಮಾಡಿ ಮನೆಗೆ ಹೋಗುತ್ತಿದ್ದರು. ಅದೇ ರೀತಿ   ಕಳೆದ 19 ನೇ ತಾರೀಕಿನಂದು ಅಂಬ್ಯಲೆನ್ಸ್ ಅನ್ನು ರಾತ್ರಿ ಗುಂಡ್ಯ ಚೆಕ್ ಪೋಸ್ಟ್ ಬಳಿ ನಿಲ್ಲಿಸಿ ಹೋಗಿದ್ದರು. ಸಾಮಾನ್ಯವಾಗಿ ಅಪಘಾತದ ಬಗ್ಗೆ, ತುರ್ತು ಕರೆ ಬಂದಾಗ ಬದಲಿ ಚಾಲಕರ ಅನುಕೂಲತೆಗಾಗಿ ಅಂಬ್ಯಲೆನ್ಸ್ ಕೀಯನ್ನು ಅಂಬ್ಯುಲೆನ್ಸ್ ನಲ್ಲಿಯೇ ಬಿಟ್ಟು ಹೋಗುತ್ತಾರೆ. ಸುರೇಶ್  ಮರುದಿನ  20 ರಂದು ಬೆಳಗ್ಗೆ, ಮನೆಯಿಂದ ಬಂದು ಅಂಬ್ಯುಲೆನ್ಸ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ, ಅಂಬ್ಯುಲೆನ್ಸ್ ಕಳ್ಳತನವಾಗಿದ್ದು ಬೆಳಕಿಗೆ ಬಂದಿದೆ. ತಕ್ಷಣ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು 20 ರಂದು ಹಾಸನ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಆರೋಪಿ ಶೋಧನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಂತರ ಆರೋಪಿಯನ್ನು ನ್ಯಾಯಲಯಕ್ಕೆ ಹಾಜರು ಪಡಿಸಿದ್ದಾರೆ. ಕಳ್ಳತನವಾಗಿದ್ದ ಅಂಬ್ಯುಲೆನ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.

ಪ್ರತ್ಯೇಕ ಪ್ರಕರಣದಲ್ಲಿ, ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ (55) ಎಂಬ ಮಹಿಳೆಗೆ ನಾಗರ ಹಾವು ಕಡಿದು ಮೃತಪಟ್ಟಿರುವ ಘಟನೆ ನಡೆದಿದೆ. ಗುಡ್ಡ ತೋಟ ನಿವಾಸಿ ಪ್ರೇಮ ಪ್ರತಿ ದಿನದಂತೆ ಮಧ್ಯಾಹ್ನ ಊಟದ ಬಳಿಕ ತೋಟಕ್ಕೆ ಬಂದು ಕೆಲಸ ಮಾಡುತ್ತಿದ್ದರು. ಈ ವೇಳೆ ವಿಷಕಾರಿ ಹಾವು ಕಚ್ಚಿದೆ. ಮಹಿಳೆಗೆ ಹಾವು ಕಡಿದ ಕೂಡಲೇ ಶೌರ್ಯ ವಿಪತ್ತು ತಂಡದ ಸದಸ್ಯರ ಸಹಾಯದೊಂದಿಗೆ ಪ್ರೇಮ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ವಿಷದ ತೀವ್ರ ಪರಿಣಾಮದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪುತ್ರಿ ಹಾಗೂ ಪುತ್ರರನ್ನು ಅಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗಮನಿಸಿ: ಪ್ರಥಮ ಚಿಕಿತ್ಸಾಕ್ರಮಗಳು ಏನು..?

ಶಾಂತವಾಗಿರಿ ಮತ್ತು ವ್ಯಕ್ತಿಯನ್ನು ಸಮಾಧಾನಪಡಿಸಿ: ಭಯಭೀತರಾದರೆ ಹೃದಯ ಬಡಿತ ಹೆಚ್ಚಾಗಿ ವಿಷವು ದೇಹದಾದ್ಯಂತ ವೇಗವಾಗಿ ಹರಡಬಹುದು. ಕಡಿತಕ್ಕೊಳಗಾದ ಭಾಗವನ್ನು (ಕೈ ಅಥವಾ ಕಾಲು) ಅಲುಗಾಡಿಸಬೇಡಿ. ಚಲನೆಯನ್ನು ಕಡಿಮೆ ಮಾಡಲು ಪಟ್ಟಿ ಅಥವಾ ಕಡ್ಡಿಯ ಸಹಾಯದಿಂದ ಆ ಭಾಗವನ್ನು ಬಂಧಿಸಿ. ಕಡಿತಕ್ಕೊಳಗಾದ ಜಾಗದ ಸುತ್ತಲೂ ಊತ ಉಂಟಾಗುವ ಸಾಧ್ಯತೆ ಇರುವುದರಿಂದ ಉಂಗುರ, ವಾಚ್ ಅಥವಾ ಬಿಗಿಯಾದ ಬಟ್ಟೆಗಳನ್ನು ತಕ್ಷಣವೇ ತೆಗೆದುಹಾಕಿ. ಸಾಧ್ಯವಾದರೆ ಗಾಯವನ್ನು ಸಾಬೂನು ಮತ್ತು ನೀರಿನಿಂದ ನಿಧಾನವಾಗಿ ತೊಳೆಯಿರಿ. ವ್ಯಕ್ತಿಯನ್ನು ಆದಷ್ಟು ಬೇಗ ಆಂಟಿ-ವೆನಂ ಲಭ್ಯವಿರುವ ಸಮೀಪದ ಆಸ್ಪತ್ರೆಗೆ ಕರೆದೊಯ್ದಿರಿ.

Thief arrested for stealing ambulance in Gundya- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 138

You cannot copy content of this page