ಉಡುಪಿ: Tulu Times | ಒಂದೂವರೆ ವರ್ಷದ ಮಗುವನ್ನು ಹಿಡಿದುಕೊಂಡು ಬಾವಿಯಿಂದ ನೀರು ಸೇದುತ್ತಿರುವಾಗ ಕೈಜಾರಿ ಮಗುವೊಂದು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಇದನ್ನೂ ಓದಿ: ಮೊಟ್ಟೆಯಿಂದ ಕ್ಯಾನ್ಸರ್ ಬರೋದಿಲ್ಲ : ಇದಕ್ಕೆ ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ
ಮೃತಪಟ್ಟ ಮಗುವನ್ನು ಕೀರ್ತನಾ ಎಂದು ಗುರುತಿಸಲಾಗಿದ್ದು, ತಾಯಿ ನಯನಾ ಅವರು ತಮ್ಮ ಮಗುವನ್ನು ಎತ್ತಿಕೊಂಡು ಬಾವಿಯಲ್ಲಿ ನೀರು ಸೇದುವಾಗ ಅವಘಡ ಸಂಭವಿಸಿದೆ. ಮಗು ಬಾವಿಗೆ ಬಿದ್ದ ತಕ್ಷಣ ತಾಯಿ ಹಗ್ಗದ ನೆರವಿನಲ್ಲಿ ಬಾವಿಗೆ ಇಳಿದು ಮಗುವನ್ನ ಮೇಲಕ್ಕೆ ಎತ್ತಲಾಯಿತು. ನಂತರ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಷ್ಟರಲ್ಲೇ ಮಗು ಮೃತಪಟ್ಟಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಖಿಲ ಭಾರತ ನಾಗರಿಕ ಸೇವಾ ಕ್ರೀಡಾಕೂಟದಲ್ಲಿ ಬೆಳ್ತಂಗಡಿಗೆ ಮೊದಲ ಪದಕ
ಸಹೋದರಿಯನ್ನೇ ಅತ್ಯಾಚಾರ ಮಾಡಿದ ಸಹೋದರ !
ಪ್ರತ್ಯೇಕ ಪ್ರಕರಣದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿಯಲ್ಲಿ ಸಹೋದರಿಯನ್ನೇ ಸಹೋದರ ಅತ್ಯಾಚಾರ ಮಾಡಿರುವ ಘಟನೆ
ಇದನ್ನೂ ಓದಿ: ಮಸ್ತ್ ಮಲೈಕಾಗೆ ಸಾನ್ವಿ ಸುದೀಪ್ ಧ್ವನಿ…ಮಗಳ ಧ್ವನಿಗೆ ಕಿಚ್ಚನ ಜರ್ಬದಸ್ತ್ ಕುಣಿತ
ಪೈಶಾಚಿಕ ಕೃತ್ಯಕ್ಕೆ ಕರಾವಳಿ ಬೆಚ್ಚಿ ಬಿದ್ದಿದೆ. ದೊಡ್ಡಪ್ಪನ ಮಗಳಾದ ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಸೋದರನೇ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಆರೋಪಿಯು ದೊಡ್ಡಪ್ಪನ ಮಗಳನ್ನು ಬೆದರಿಸಿ ಮನೆಯಲ್ಲಿ ಯಾರೂ ಇಲ್ಲದಾಗ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ್ದಾನೆ. ಕುಳಾಯಿ ನಿವಾಸಿ ವಿಠಲ ಕುಂಬಾರ ಎಂಬುವವರು ಆರೋಪಿಯಾಗಿದ್ದಾರೆ.
ಇದನ್ನೂ ಓದಿ: ಉಳ್ಳಾಲ: ಕಾಮಗಾರಿ ವೇಳೆ ಗುಡ್ಡ ಕುಸಿತ – ಮಣ್ಣಿನಡಿ ಸಿಲುಕಿ ಕಾರ್ಮಿಕ ಮೃತ್ಯು
ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪೋಕೋ ಮತ್ತು ಭಾರತೀಯ ನ್ಯಾಯ ಸಂಹಿತೆ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ಇನ್ನು ಈ ಸಂಗತಿಯನ್ನು ಮನೆಯಲ್ಲಿ ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಅಗರಬತ್ತಿ ಬದಲಾಗಿ ಈ ವಸ್ತುವನ್ನು ಬಳಸಿದ್ರೆ ಮನೆಯ ವಾತಾವರಣ ಪರಿಶುದ್ಧವಾಗುತ್ತೆ
Udupi: Child dies after slipping from mother’s hand and falling into well!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











