ಮನ್ರೇಗಾ ಯೋಜನೆ : Tulu Times | ಭಾರತ ಸರ್ಕಾರ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಉದ್ಯೋಗ ಭದ್ರತೆ ಒದಗಿಸುವ ಉದ್ದೇಶದಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆ 2005ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟು, 2006ರಿಂದ ದೇಶದಾದ್ಯಂತ ಕಾರ್ಯರೂಪಕ್ಕೆ ಬಂದಿತ್ತು. ಈ ಯೋಜನೆಯ ಉದ್ದೇಶ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಕೂಲಿ ಉದ್ಯೋಗ ಒದಗಿಸುವುದು. ಇದರಿಂದ ಗ್ರಾಮೀಣ ಬಡತನ ಕಡಿಮೆಯಾಗುವುದು, ವಲಸೆ ತಡೆಗಟ್ಟುವುದು ಮತ್ತು ಗ್ರಾಮೀಣ ಆರ್ಥಿಕತೆ ಬಲಪಡಿಸುವುದು ಈ ಯೋಜನೆಯ ಗುರಿಯಾಗಿತ್ತು.
ಆದರೆ ಇದೀಗ, ಮನ್ರೇಗಾ ಯೋಜನೆಯ ಹೆಸರನ್ನು ವಿಕ್ಷಿತ್ ಭಾರತ್ ಜಿ ರಾಮ್ ಜಿ ಯೋಜನೆ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಸೂದೆ ಮಂಡಿಸಿದೆ. ಇದು ಈಗ ತೀವ್ರ ವಿವಾದಕ್ಕೆ ಗುರಿಯಾಗಿದ್ದು, ಯೋಜನೆಯ ಹೆಸರಿನಲ್ಲಿದ್ದ ಮಹಾತ್ಮ ಗಾಂಧಿ ಹೆಸರನ್ನು ಕೈ ಬಿಟ್ಚಿದ್ದೇಕೆ ಎಂದು ವಿಪಕ್ಷಗಳು ಪ್ರಶ್ನಿಸುತ್ತಿವೆ. ಇದು ಆರ್ಥಿಕ ಹೊರೆಯನ್ನ ರಾಜ್ಯಗಳಿಗೆ ವರ್ಗಾಯಿಸುವ ಪ್ರಯತ್ನ ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯೆ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ಕೇಂದ್ರ ಸರ್ಕಾರವೇ ಕಾರ್ಮಿಕರ ವೇತನದ ಶೇಕಡ 100 ರಷ್ಟು ಭರಿಸುತ್ತಿದೆ ;
ಇನ್ನೂ ಯೋಜನೆಯ ಹೆಸರನ್ನು ಮಹಾತ್ಮಗಾಂಧಿ ಗ್ರಾಮೀಣಾ ಉದ್ಯೋಗ ಖಾತರಿ ಯೋಜನೆ ಎಂದು ಇದ್ದಿದ್ದನ್ನು ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕಾ ಮಿಷನ್ ಗ್ರಾಮೀಣ್ ಎಂದು ಬದಲಾಯಿಸಿದೆ( ವಿಬಿ-ರಾಮ್ ಜಿ ). ಸರ್ಕಾರಕ್ಕೆ ಮಹಾತ್ಮ ಗಾಂಧಿ ಬೇಡವಾದರೇ, ಮಹಾತ್ಮ ಗಾಂಧಿ ಹೆಸರು ಇನ್ನು ಏಕೆ ತೆಗೆಯಬೇಕಾಗಿತ್ತು ಎಂಬ ಪ್ರಶ್ನೆ ಎದ್ದಿದೆ. ಮನ್ರೇಗಾದಲ್ಲಿ ಗ್ರಾಮೀಣ ಪ್ರದೇಶದಲ್ಲಿ ವರ್ಷಕ್ಕೆ 100 ದಿನಗಳ ಕಾಲ ಉದ್ಯೋಗ ಖಾತ್ರಿಯನ್ನು ಒದಗಿಸುತ್ತಿತ್ತು. ಹೊಸ ಮಸೂದೆಯಡಿ ಜಿ ರಾಮ್ ಜಿ ಯಲ್ಲಿ 125 ರ ವರೆಗೆ ವಿಸ್ತರಿಸುವ ಯೋಜನೆಯಿದೆ. ಕೇಂದ್ರ ಸರ್ಕಾರವೇ ಈ ಹಿಂದೆ ಕಾರ್ಮಿಕರ ವೇತನದ ಶೇಕಡ 100 ರಷ್ಟು ಭರಿಸುತ್ತಿದೆ. ಆದರೆ ಪ್ರಸ್ತುತ ಮಸೂದೆಯಡಿ ಶೇಕಡ 60 ಕೇಂದ್ರ ಹಾಗೂ ಶೇಕಡ 40 ರಾಜ್ಯಗಳು ನಡೆಸಬೇಕಿದೆ. ಇದರ ಜೊತೆಗೆ ಕೂಲಿಯನ್ನು ಕೆಲಸ ಮುಗಿದ ನಂತರ ಒಂದು ದಿನದ ನಿಗದಿತ ಸಮಯಕ್ಕೆ ಕೊಡಲಾಗುತಿತ್ತು. ಆದರೆ ಇನ್ನು ಮುಂದೆ ಕೆಲಸ ಪೂರ್ಣಗೊಂಡ ನಂತರ ಒಂದು ಅಥವಾ ಎರಡು ವಾರದೊಳಗೆ ವೇತನ ಪಾವತಿ ಮಾಡಬೇಕು ಎಂದಿದೆ. ಆದರೆ ಇದರಲ್ಲಿ ಮಹಾತ್ಮ ಗಾಂಧೀಜಿಯವರ ಹೆಸರನ್ನು ತೆಗೆಯುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸುತ್ತಿದ್ದಾರೆ.
ಬಡವ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ ;
ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಇದು ಕೇವಲ ಮಹಾತ್ಮ ಗಾಂಧೀಜಿಯವರ ನರೇಗಾವನ್ನು ಮರುನಾಮಕರಣ ಮಾಡುವ ವಿಷಯವಲ್ಲ ಇದು ಮನ್ರೇಗಾವನ್ನು ನಿರ್ಮೂಲನೆ ಮಾಡಲು ಬಿಜೆಪಿ, ಆರ್.ಎಸ್.ಎಸ್ ನಡೆಸಿದ ಪಿತೂರಿ ಆಗಿದೆ. ಬಡವರ ಹಕ್ಕುಗಳನ್ನು ತೆಗೆದುಹಾಕಲು ಮನ್ರೇಗಾ ಮೇಲೆ ದಾಳಿ ಮಾಡಲಾಗುತ್ತಿದೆ. ಬಡವರ ಕಾರ್ಮಿಕರ ವಿರೋಧಿಯಾದ ದುರಹಂಕಾರಿ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸುತ್ತದೆ. ಬಡವ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ ಎಂದಿದ್ದಾರೆ.
Opposition parties oppose introduction of new bill to replace MNREGA scheme – ತುಳು ಟೈಮ್ಸ್
ಇದನ್ನೂ ಓದಿ :ಸುರತ್ಕಲ್: ವೃದ್ಧೆಯ ಮನೆಗೆ ನುಗ್ಗಿ ದರೋಡೆ – ಮೂವರ ಬಂಧನ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/HG13boYv7-Y?si=6WlEGEQ6wn09f1FW











