ಬೆಂಗಳೂರು : Tulu Times | ಎರಡು ಲಕ್ಷ ರೂ. ಬೆಲೆ ಬಾಳುವ ಗಿಳಿಯ ರಕ್ಷಣೆಗೆಂದು ಹೊರಟ ವ್ಯಕ್ತಿಯು ಶವವಾಗಿದ್ದಾನೆ. ಗಿಳಿಯಂದ್ರೆ ಆತನಿಗೆ ಅಚ್ಚುಮೆಚ್ಚು. ಅದೇ ಪಕ್ಷಿ ಮನೆಯಿಂದ ಹಾರಿ ಪಕ್ಕದಲ್ಲಿದ್ದ ವಿದ್ಯುತ್ ಕಂಬದ ಮೇಲೆ ಕುಳಿತಿತ್ತು. ಆ ಗಿಳಿಯನ್ನು ರಕ್ಷಿಸಲು ಹೋಗಿ ಯುವಕ ಪ್ರಾಣವನ್ನೇ ಬಿಟ್ಟಿದ್ದಾನೆ.
ಗಿಳಿಗೆ ಎಲ್ಲಿ ಅಪಾಯ ಆಗ್ತದೋ ಅನ್ನೋ ಹೆದರಿಕೆ ;
ಮಂಡ್ಯದ ನಾಗಂಮಗಲ ಮೂಲದ ಅರುಣ್ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಬೆಂಗಳೂರಿನ ಗಿರಿಧರ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದ. ಆದರೆ ಈತ ತನ್ನ ನೆಚ್ಚಿನ ಗಿಳಿಯನ್ನು ರಕ್ಷಿಸಲು ಹೋಗಿ ಉಸಿರು ಚೆಲ್ಲಿದ್ದಾನೆ. ಆ ಗಿಳಿಯನ್ನು ಆಟ ಆಡಿಸಲೆಂದು ಹೊರಗೆ ಕರೆದುಕೊಂಡು ಹೋದಾಗ ಗಿಳಿಯು ಕರೆಂಟ್ ವಯರ್ ಮೇಲೆ ಹೋಗಿ ಕುಳಿತುಕೊಂಡಿತ್ತು. ಅದನ್ನು ಕೆಳಗೆ ಹಿಡಿದು ತರಬೇಕೆಂಬ ಆಸೆಯಲ್ಲಿ ಅರುಣ್ ಮೇಲೆ ಹೋಗಿದ್ದು ಆ ಸಂದರ್ಭ ಕರೆಂಟ್ ಶಾಕ್ ಹೊಡೆದಿದ್ದೆನ್ನಲಾಗಿದೆ. ಜೊತೆಗಿದ್ದ ವಾಚ್ ಮೆನ್ ಗಳೂ ಸೇರಿ ಮೇಲೆ ಹತ್ತೋದು ಬೇಡ ಅಂತ ಎಷ್ಟೇ ಹೇಳಿದ್ರು ಅರುಣ್ ಕೇಳಿರಲಿಲ್ಲ. ಗಿಳಿಗೆ ಎಲ್ಲಿ ಅಪಾಯ ಆಗ್ತದೋ ಅನ್ನೋ ಹೆದರಿಕೆಯಲ್ಲಿ ಕಾಂಪೌಂಡ್ ಮೇಲೆ ಹತ್ತಿದ್ದ.
ಗಿಳಿಕೆ ವಿದ್ಯುತ್ ಶಾಕು ಹೊಡೆಯುತ್ತೆ ಅಂತ ಅರುಣ್ ಸ್ಟೀಲ್ ಪೈಪಿಗೆ ಕಡ್ಡಿಯನ್ನು ಹಾಕಿ ಗಿಳಿ ಓಡಿಸಲು ಕಾಂಪೌಂಡ್ ಮೇಲೆ ನಿಂತಿದ್ದು ಆ ಗಿಳಿಯನ್ನು ಓಡಿಸಲು ಪ್ರಯತ್ನ ಪಟ್ಟಿರುವಾಗ ಆ ಅಪಾರ್ಟ್ಮೆಂಟ್ ಒಳಗೆ ಹೋಗಿದ್ದ 66 ಕೆವಿ ವಿದ್ಯುತ್ ವಯರ್ ತಗುಲಿ ಕೆಳಗೆ ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯೋವಷ್ಟರಲ್ಲಿ ಮೃತಪಟ್ಟಿದ್ದಾನೆ. ಸಾವಿನ ಸುದ್ದಿ ಕುಟುಂಬದವರಿಗೆ ಆಘಾತವನ್ನು ತಂದಿದ್ದು, ಅಪಾರ್ಟ್ಮೆಂಟ್ನಲ್ಲಿ ಕುಟುಂಬದವರ ರೋಧನೆ ಹೇಳತ್ತೀರದಾಗಿತ್ತು. ಇತ್ತ ನೆಚ್ಚಿನ ತನ್ನ ಮಾಲೀಕ ತನಗೋಸ್ಕರ ಪ್ರಾಣವನ್ನ ಬಿಟ್ರು ಗಿಳಿಯು ಆ ವಯರ್ ಮೇಲೆ ಅದೆಷ್ಟೋ ಹೊತ್ತು ಕುಳಿತಿತ್ತು.
ಇನ್ನೊಂದೆಡೆ ಕೆಇಬಿ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಇಷ್ಟೊಂದು ಸಾಮರ್ಥ್ಯದ ವಿದ್ಯುತ್ ವಯರ್ ಅಪಾರ್ಟ್ಮೆಂಟ್ ಒಳಗೆ ಹೋಗಿರುವುದು ಹಾಗೂ ಅದು ಹೇಗೆ ಹೋಯಿತು ಎಂಬ ಬಗ್ಗೆ ಪ್ರಶ್ನೆಯನ್ನು ಮಾಡಲಾಗುತ್ತಿದ್ದು, ಯಾವುದಕ್ಕೂ ಸಹ ಈಗ ಉತ್ತರ ಇಲ್ಲ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದ್ದು ತನಿಖೆ ಮುಂದುವರಿದೆ. ಇತ್ತ ಕೆಇಬಿ ಅವರು ವಿದ್ಯುತ್ ನ್ನು ಆಫ್ ಮಾಡಿ ಗಿಳಿಯನ್ನ ಕೆಳಗಡೆ ತಂದು ತನ್ನ ಮಾಲೀಕರಿಗೆ ಒಪ್ಪಿಸಿದ್ದಾರೆ.
A young man who went to rescue a parrot worth Rs 2 lakh dies – ತುಳು ಟೈಮ್ಸ್
ಇದನ್ನೂ ಓದಿ :ಟಿ – 20, 2026 ರ ಕ್ರಿಕೆಟ್ ವೀಕ್ಷಣೆಗೆ ಇಂದೇ ಟಿಕೆಟ್ ಬುಕ್ ಮಾಡಿ !
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/TxoTNdzv6vY?si=GPpULgXOoCe0XwYa











