ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕರ್ನಾಟಕದಲ್ಲಿ ಹೋರಿ ಹಬ್ಬಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟ ಹೈಕೋರ್ಟ್

ಕರ್ನಾಟಕ: Tulu Times | ಕರ್ನಾಟಕದಲ್ಲಿ ಹೋರಿ ಹಬ್ಬಕ್ಕೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದ್ದು, ಜಲ್ಲಿಕಟ್ಟು ವಿಷಯದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿರುವ ಷರತ್ತುಗಳನ್ನು ಪಾಲಿಸುವಂತೆ ಆದೇಶ ನೀಡಿದೆ.

ಹೋರಿ ಹಬ್ಬ ಅಂದ್ರೆ ಏನು..?

ಹೋರಿ ಹಬ್ಬ  ಅಥವಾ ಹಟ್ಟಿ ಹಬ್ಬ ಅಂತಾನೂ ಕರೆಯಲಾಗುತ್ತದೆ.  ಕರ್ನಾಟಕದ ಒಂದು ಜನಪ್ರಿಯ ಗ್ರಾಮೀಣ ಕ್ರೀಡೆ ಇದಾಗಿದೆ.  ಈ ಹಬ್ಬವನ್ನು  ದೀಪಾವಳಿಯ ಬಳಿಕ ಆಚರಿಸಲಾಗುತ್ತದೆ. ಇದರಲ್ಲಿ ಅಲಂಕರಿಸಿದ ಹೋರಿಗಳನ್ನು ಓಡಿಸಿ, ಅವುಗಳ ಕೊರಳಿಗೆ ಕಟ್ಟಲಾದ ಕೊಬ್ಬರಿ, ನಗದು, ಉಡುಗೊರೆಗಳನ್ನು ಯುವಕರು ಹಿಡಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇದು ತಮಿಳುನಾಡಿನ ಜಲ್ಲಿಕಟ್ಟುವಿಗೆ ಹೋಲುತ್ತದೆ. ಇದು ನಮ್ಮ ರೈತರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ: ಕೋಳಿ ಮೊಟ್ಟೆ ದರ ಏರಿಕೆ.. ಕ್ರಿಸ್‌ಮಸ್‌ & ಹೊಸ ವರ್ಷಕ್ಕೆ ಮೊಟ್ಟೆಗೆ ಭರ್ಜರಿ ಬೇಡಿಕೆ

ಹಾವೇರಿ, ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು, ಬ್ಯಾಡಗಿ, ರಟ್ಟಿಹಳ್ಳಿ, ಶಿಕಾರಿಪುರ, ಆನವಟ್ಟಿ, ಶಿಗ್ಗಾವಿ, ಶಿರಸಿ, ಮುಂಡಗೋಡ, ಸವಣೂರು, ದಾವಣಗೆರೆ, ಹರಿಹರ, ಹೊನ್ನಾಳಿ, ಶಿವಮೊಗ್ಗ ಈ ಭಾಗಗಳಲ್ಲಿ ನಡೆದುಕೊಂಡು ಬಂದಂತಹ ಒಂದು ಸಂಪ್ರದಾಯವಾಗಿದೆ. ತಮಿಳುನಾಡಿನಲ್ಲಿ  ನಡೆಯುವ ಜಲ್ಲಿಕಟ್ಟು ಎಂಬ ಹಬ್ಬದ ರೀತಿಯೇ ಇದು ಇರುತ್ತದೆ. ಇದೀಗ ಹೈಕೋರ್ಟ್ ಹೋರಿ ಹಬ್ಬಕ್ಕೆ ಅನುಮತಿ ನೀಡಿದೆ.

ಹೋರಿ ಹಬ್ಬಕ್ಕೆ ಸುರಕ್ಷತಾ ಕ್ರಮಗಳು ಏನು..?

ಇದು ಯಾವುದೇ ಸಂದರ್ಭದಲ್ಲಿ ಕಾಯ್ದೆಯ (ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960) ನಿಬಂಧನೆಗಳಿಗೆ ವಿರುದ್ಧವಾಗಿರಬಾರದು ಎಂದು ನ್ಯಾಯಾಲಯ ಹೇಳಿದೆ.  ಹೋರಿ ಹಬ್ಬಕ್ಕೆ  ಸುರಕ್ಷತಾ ಕ್ರಮಗಳು ಮತ್ತು ಪ್ರಾಣಿಗಳ ಭಾಗವಹಿಸುವಿಕೆ ಅಥವಾ ಬಳಕೆಯ ಬಗ್ಗೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಷರತ್ತುಗಳಿಗೆ ಅನುಗುಣವಾಗಿರಬೇಕು. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.  ಇನ್ನು ಈ ಆಚರಣೆಯಲ್ಲಿ ತರಬೇತಿ ಪಡೆದ ಹೋರಿಗಳನ್ನು ಜನಸಂದಣಿಯ ನಡುವೆ ಬಿಡಲಾಗುತ್ತದೆ, ಜನರು ಅವುಗಳನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ರೈತರನ್ನು ಒಟ್ಟುಗೂಡಿಸುವುದು ಮತ್ತು ಕೃಷಿ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ದೀಪಾವಳಿಯ ನಂತರ, ಸುಗ್ಗಿ ಕಾಲದಲ್ಲಿ ರೈತರು ತಮ್ಮ ಜಾನುವಾರುಗಳ ಶ್ರಮವನ್ನು ಗೌರವಿಸಲು ಈ ಹಬ್ಬವನ್ನು ಆಚರಿಸುತ್ತಾರೆ.

High Court gives green signal for Hori festival in Karnataka- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page