ಬ್ರೇಕಿಂಗ್ ನ್ಯೂಸ್
ಕಡಬಕರ್ನಾಟಕ

ಕಡಬ: ಅಮ್ಮನ ಮನೆಗೆ ಹೋಗಿ ಬರುವೆ ಎಂದು ಹೋದ ವಿವಾಹಿತ ಮಹಿಳೆ ನಾಪತ್ತೆ

ಕಡಬ: Tulu Times | ಕಡಬದ ವಿವಾಹಿತ ಮಹಿಳೆ ಕವಿತಾ (27) ಎಂಬವರು ನಾಪತ್ತೆಯಾಗಿರುವ ಘಟನೆ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಡಬ ತಾಲೂಕಿನ ಬಂಟ್ರ ಗ್ರಾಮದ ನಿವಾಸಿ ಸುಪ್ರೀತ್ ಕುಮಾರ್ ಜಿ ಅವರ ಪತ್ನಿ ಕವಿತಾ ಕಾಣೆಯಾಗಿದ್ದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಮೃತ್ಯು

ಇತ್ತೀಚೆಗೆ ಕವಿತಾ ಬೆಳ್ತಂಗಡಿ ತಾಲೂಕು ನ್ಯಾಯತರ್ಪು ಗ್ರಾಮದ ಗೋವಿಂದೂರಿಗೆ ತನ್ನ ತಾಯಿ ಮನೆಗೆ ಹೋಗಿ ಶುಕ್ರವಾರ ಬರುವುದಾಗಿ ಪತಿಗೆ ತಿಳಿಸಿ  ಹೋಗಿದ್ದರು. ಆದರೆ ದಿನಾಂಕ 03-12-2025ರಂದು ಬೆಳಗ್ಗೆ 7.15ಕ್ಕೆ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಮನೆಯಿಂದ ಹೊರ ಹೋಗಿದ್ದಾರೆ.  ಪತಿ ಕೆಲಸಕ್ಕೆ ತೆರಳಿದ ಬಳಿಕ ಕವಿತಾ ಮನೆಯಿಂದ ಆಚೆ ಹೋಗಿದ್ದಾರೆ. ಸಂಜೆವರೆಗೂ ಮರಳಿ  ವಾಪಾಸು ಬರಲಿಲ್ಲ.

ಇನ್ನು ತನ್ನ ಪತ್ನಿ ಸಂಬಂಧಿಕರ ಮನೆಗೆ ಹೋಗಿರಬಹುದು ಎಂದು  ಪತಿ ಸಂಬಂಧಿಕರಿಗೆ ವಿಚಾರಿಸಿದರೂ, ಅಲ್ಲಿಯೂ ಕವಿತಾ ಹೋಗಿಲ್ಲವೆಂದು ತಿಳಿದುಬಂದಿದೆ.  ನೆರೆಹೊರೆಯವರು,  ಬಂಧುಮಿತ್ರರಲ್ಲಿ ಹುಡುಕಾಟ ನಡೆಸಿದರೂ ಸಿಗದ ಕಾರಣ  ಸುಪ್ರೀತ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: 40 ಲಕ್ಷ ರೂ. ಬಗ್ಗೆ ಆರೋಪಿ ದರ್ಶನ್ ನೀಡಿದ ಹೇಳಿಕೆ ನಿಜಾನಾ ?

ಕಟೀಲು ದೇವರ ದರ್ಶನ ಪಡೆದುಕೊಂಡು ಹಿಂತಿರುಗುವಾಗ ಅಪಘಾತ!

ಪ್ರತ್ಯೇಕ ಪ್ರಕರಣಗಳಲ್ಲಿ, ಕಟೀಲು ದೇವರ ದರ್ಶನ ಪಡೆದುಕೊಂಡು ಹಿಂತಿರುಗಿ ಬರುವಾಗ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ಡಿಕ್ಕಿಯಾಗಿರುವ ಘಟನೆ ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ನಡೆದಿದೆ. ರಸ್ತೆ ಬದಿಯಲ್ಲಿರುವ ಚಂದ್ರ ನಾಯ್ಕ ಅವರ ಮನೆಗೆ ಡಿಕ್ಕಿ ಹೊಡೆದಿದ್ದು, ಕಟೀಲು ದೇವಸ್ಥಾನದಿಂದ ಬರುವಾಗ ಅಪಘಾತ ಸಂಭವಿಸಿದೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಮನೆಯೊಂದಕ್ಕೆ ಗುದ್ದಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮಹಿಳೆಗೆ ಗಾಯಗಳಾಗಿವೆ. ಅವರ ಮುಖ ಮತ್ತು ಹಲ್ಲಿನ ಭಾಗಕ್ಕೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಇನ್ನು ಅಪಘಾತಕ್ಕೆ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಕಾರು ಜಖಂಗೊಂಡಿದೆ.

Kadaba: Married woman who went to her mother’s house to return goes missing- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page