ದಿತ್ವಾ ಚಂಡಮಾರುತ : Tulu Times | ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತ ಹಾಗೂ ಅದರಿಂದ ಉಂಟಾದ ಮಳೆ-ಪ್ರವಾಹ ಹಾಗೂ ಭೂಕಸಿತಗಳಿಂದ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಲಕ್ಷಾಂತರ ಜನಜೀವನ ಕುಟುಂಬಗಳು ಹಾನಿಗೊಳಗಾಗಿತ್ತು. ಸಾವಿರಾರು ಮನೆಗಳು ನಷ್ಟಕ್ಕೆ ಒಳಗಾದವು; ಲಕ್ಷಾಂತರ ಜನರು ತನ್ನೆಲ್ಲಾ ಬದುಕು ಸಂಪತ್ತು ಕಳೆದುಕೊಂಡಿದ್ದರು.
ಈ ಸಂದರ್ಭ ಭಾರತೀಯ ವಾಯುಯಾನಗಳನ್ನು ಬಳಸಿಕೊಂಡು, ಸುಮಾರು 21 ಟನ್ ತುರ್ತು ವಸ್ತುಗಳನ್ನು, ಆಹಾರ, ಟೆಂಟ್, ಟಾರ್ಪಾಲಿನ್, ಕಂಬಳಿ, ಸ್ವಚ್ಛತಾ ಕಿಟ್ ಇತ್ಯಾದಿಗಳನ್ನು ಶೀಘ್ರವಾಗಿ ಶ್ರೀಲಂಕಾಕ್ಕೆ ಕಳುಹಿಸಲಾಗಿತ್ತು. ಆದರೆ, ಈ ಸಂದರ್ಭದಲ್ಲೇ ಸಹಾಯ ಮಾಡುವ ನೆಪ ತೋರಿರುವ ಪಾಕಿಸ್ತಾನವು, ಶ್ರೀಲಂಕಾಕ್ಕೆ ಕಳುಹಿಸಲಾಗಿದ್ದ ವೈದ್ಯಕೀಯ ಕಿಟ್, ಆಹಾರ ಸರಬರಾಜು ಮತ್ತು ಅಗತ್ಯ ವಸ್ತುಗಳು ಅವಧಿ ಮೀರಿದ ವಸ್ತುಗಳು ಎಂದು ತಿಳಿದು ಬಂದಿದೆ. ಇದು ಪಾಕಿಸ್ತಾನಕ್ಕೆ ಮತ್ತೊಂದು ರಾಜತಾಂತ್ರಿಕ ನಿಲುವನ್ನು ಎದುರಿಸುವ ಸಂಕಷ್ಟಕ್ಕೆ ಸಿಲುಕಿಸಿದೆ.
ದಿತ್ವಾ ಚಂಡಮಾರುತದ ಪರಿಣಾಮವಾಗಿ ಉಂಟಾದ ಭೂಕುಸಿತ ಮತ್ತು ಪ್ರವಾಹದಿಂದ ಹಾನಿಗೊಳಗಾಗಿರುವ ಶ್ರೀಲಂಕಾಗೆ ಕಳುಹಿಸಲಾಗಿರುವ ಈ ಸರಕಿನ ಅವಧಿ ಮೀರಿದ್ದು, ಅದು ಉಪಯೋಗಿಸಲು ಯೋಗ್ಯವಾಗಿಲ್ಲ ಎನ್ನಲಾಗಿದೆ. ಇದು ಪಾಕಿಸ್ತಾನವನ್ನು ಮುಜುಗರಕ್ಕೀಡು ಮಾಡಿದ್ದು, ಶ್ರೀಲಂಕಾ ಮತ್ತು ವಿದೇಶಾಂಗ ಇಲಾಖೆಗಳಲ್ಲಿ ಕಳವಳ ಹುಟ್ಟುಹಾಕಿದೆ. ಕೊಲಂಬೊ ರಾಜತಾಂತ್ರಿಕ ಮಾರ್ಗಗಳ ಮೂಲಕ ಇಸ್ಲಾಮಾಬಾದ್‌ಗೆ ತನ್ನ ಅಸಮಧಾನ ತಿಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಪಾಕ್ ಯತ್ನಿಸುತ್ತಿದೆ. ಆದರೆ ಇದೇ ವೇಳೆ ಈ ಘಟನೆ ನಡೆದಿರುವುದು ಪಾಕಿಸ್ತಾನದ ಮೇಲಿನ ನಂಬಿಕೆ ಮತ್ತು ವಿಶ್ವಾಸದ ಮೇಲೆ ಸಂಶಯ ಹುಟ್ಟುಹಾಕಿವೆ. ಈ ಕುರಿತು ಶ್ರೀಲಂಕಾ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, ವಿಶೇಷವಾಗಿ ನಮ್ಮ ರಾಷ್ಟ್ರವು ಸಂಕಷ್ಟದಲ್ಲಿ ಸಿಲುಕಿಕೊಂಡಿರುವಾಗ ಪಾಕಿಸ್ತಾನದಿಂದ ಬಂದಿರುವ ಈ ನೆರವಿನ ಸರಕು ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ವರದಿಯಾಗಿದೆ.
Pakistan faces trouble for providing expired goods – ತುಳು ಟೈಮ್ಸ್
ಇದನ್ನೂ ಓದಿ :ಬಿ.ಎಸ್ ಯಡಿಯೂರಪ್ಪರಿಗೆ ತಾತ್ಕಾಲಿಕ ರಿಲೀಫ್ : ಪೋಕ್ಸೋ ಪ್ರಕರಣದಲ್ಲಿ ಮಧ್ಯಂತರ ತಡೆ
=========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/yek8Z0SdHr4?si=NcsSSQN6v83BB_Eh











