ಸುಳ್ಯ : Tulu Times | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುವ ಸುಳ್ಯ ಸೀಮೆಯ ತೊಡಿಕಾನ ದೇವಸ್ಥಾನವು ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿದೆ. ಸ್ವಚ್ಛಂದ ಪರಿಸರದಲ್ಲಿ ಕಂಡುಬರುವ ಈ ದೇವಸ್ಥಾನವು ಶಿವನ ಸಾನಿಧ್ಯವಾಗಿದ್ದು, ಇಲ್ಲಿನ ಮತ್ಸ್ಯತೀರ್ಥವು ಚರ್ಮರೋಗ ನಿವಾರಣೆಗೆ ಪ್ರಸಿದ್ಧವಾಗಿದೆ. ಹಾಗಾಗಿ, ಅನೇಕ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುವುದಿದೆ.
ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಡಿಶಂಬರ್ 16 ರಿಂದ ಧನು ಪೂಜೆ ಆರಂಭಗೊಳ್ಳಲಿದೆ. ಒಂದು ತಿಂಗಳ ಕಾಲ ಪ್ರತಿದಿನ ಬೆಳಿಗ್ಗೆ ಕ್ಷೇತ್ರದಲ್ಲಿ ಧನು ಪೂಜೆ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ. ಈ ಸಲುವಾಗಿ ಆಮಂತ್ರಣ ಬಿಡುಗಡೆಯನ್ನೂ ಮಾಡಲಾಗಿದೆ.
ಈ ದೇವಸ್ಥಾನದಲ್ಲಿ ಇನ್ನೊಂದು ವಿಶೇಷತೆ ಏನೆಂದರೆ, ಸುಮಾರು ಎರಡು ಕಿ.ಮೀ. ದೂರದಲ್ಲಿ ಆಕರ್ಷಕ ಜಲಪಾತವಿದೆ. ಮತ್ಸ್ಯತೀರ್ಥಕ್ಕೂ ದೇವರಗುಂಡಿಗೂ ಅವಿನಾಭಾವ ಸಂಬಂಧವನ್ನು ಹೇಳುವ ಈ ಪ್ರದೇಶವು, ಪ್ರವಾಸಿಗರನ್ನು ಮತ್ತಷ್ಟು ತನ್ನೆಡೆಗೆ ಸೆಳೆಯುವಂತೆ ಮಾಡುವುದು ಈ ದೇವರಗುಂಡಿ ಜಲಪಾತ. ಪಟ್ಟಿಮಲೆ ಎಂಬಲ್ಲಿಂದ ಹರಿದು ಬರುವ ಮತ್ಸ್ಯತೀರ್ಥ ಎಂಬ ನದಿಯು ದೇವರಗುಂಡಿ ಎಂಬಲ್ಲಿ ಸುಮಾರು ಮೂವತ್ತು ಅಡಿಯಷ್ಟು ಎತ್ತರದಿಂದ ಧುಮುಕಿ ಜಲಪಾತವನ್ನು ಸೃಷ್ಟಿಸಿದೆ. ಜಲಧಾರೆಯು ಧುಮುಕಿ ಬೀಳುವಲ್ಲಿ ಬೃಹತ್ ಗುಂಡಿಯಿದ್ದು ಇಲ್ಲಿಂದ ಶಿವನು ವಿಷ್ಣುವನ್ನು ಮತ್ಸ್ಯ ವಾಹನವನ್ನಾಗಿ ಮಾಡಿಕೊಂಡು ಅಂತರ್ ಮಾರ್ಗದಿಂದ ತೊಡಿಕಾನದವರೆಗೆ ಬಂದಿದ್ದನು ಎಂದು ಹೇಳಲಾಗುತ್ತಿದೆ. ಆದುದರಿಂದ ಇಲ್ಲಿನ ಜಲವನ್ನು ತೀರ್ಥವೆಂದು ಸ್ವೀಕರಿಸುವುದನ್ನು ಇಂದಿಗೂ ನಾವು ಕಾಣಬಹುದು. ಪರಿಸರವನ್ನು ಇಷ್ಟಪಡುವವರಿಗೆ, ಹಕ್ಕಿಗಳ ಇಂಪಾದ ದನಿ ಕೇಳಲು ಬಯಸುವವರಿಗೆ ಇಲ್ಲಿ ಮನಸ್ಸಿಗೆ ಮುದ ನೀಡುತ್ತದೆ. Dhanu Puja at Sullia Seeme Thodikana Temple from December 16 – ತುಳು ಟೈಮ್ಸ್
ಇದನ್ನೂ ಓದಿ :ಇಂದು ನಿರ್ದೇಶಕ ರಾಜ್ ನಿಡಿಮೋರು ಜೊತೆ ವಿವಾಹವಾದ ನಟಿ ಸಮಂತಾ..!
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=uR-Fro929bU1qXNb











