ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಹುಟ್ಟು ಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಮೋಹಕತಾರೆ ಗುಡ್‌ ನ್ಯೂಸ್..!

ಸಿನಿಮಾ: Tulu Times | ಇಂದು ಸ್ಯಾಂಡಲ್‌ ವುಡ್‌ ಮೋಹಕ ತಾರೆ ರಮ್ಯಾ ಹುಟ್ಟುಹಬ್ಬದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟಿ ರಮ್ಯಾ ಈಗಲೂ ಹದಿಹರೆಯದ ಬ್ಯೂಟಿ ಅಂದ್ರೆ ಖಂಡಿತವಾಗಿಯೂ ತಪ್ಪಾಗಲಾರರು.

ಇದನ್ನೂ ಓದಿ: ಪುತ್ತೂರು : ಕೆಟ್ಟು ಕೈಕೊಟ್ಟ ವಾಹನ – ಗೋವುಗಳನ್ನು ಬಿಟ್ಟು ಪರಾರಿ.!

ರಮ್ಯಾ  ಅಭಿ ಸಿನಿಮಾ ಮೂಲಕ ಪುನೀತ್ ಜೊತೆ ತೆರೆ‌ ಹಂಚಿಕೊಂಡು ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು.   ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ದಕ್ಷಿಣದ ಭಾರತದಲ್ಲಿ ಖ್ಯಾತಿ ಪಡೆದಿರುವ ಈ ನಟಿ ಸಂಸದೆಯಾಗಿಯೂ ರಾಜಕೀಯ ರಂಗದಲ್ಲೂ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ರಾಜಕೀಯಕ್ಕೆ ಕಾಲಿಟ್ಟ ರಮ್ಯಾ, ಅದೇ ವರ್ಷ ಮಂಡ್ಯ ಸಂಸದೆಯಾಗಿ ರಾಜಕಾರಣಕ್ಕೆ ಕಾಲಿಟ್ಟಿದ್ರು. ಆದರೆ ಅದರ ಮರುವರ್ಷ ನಡೆದ ಚುನಾವಣೆಯಲ್ಲಿ ಸೋತ ರಮ್ಯಾ, ಒಂದಿಷ್ಟು ಕಾಲ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರು.

ಇದನ್ನೂ ಓದಿ: ಸಿಎಂ- ಡಿಸಿಎಂ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ – ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದ ನಾಯಕರು!

2021ರಲ್ಲಿ ತೆರೆಕಂಡ ನಾಗರಹಾವು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದ ರಮ್ಯಾ 2023ರಲ್ಲಿ ಬಿಡುಗಡೆಯಾದ ಹಾಸ್ಟೆಲ್ ಹುಡುಗರು ಸಿನಿಮಾ ಮೂಲಕ ಗೆಸ್ಟ್ ಅಪಿಯರೆನ್ಸ್ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ನಟಿ ರಮ್ಯಾ ಸಿನಿಮಾ ನಿರ್ಮಾಪಕಿಯೂ ಹೌದು.

ಇದನ್ನೂ ಓದಿ: ಜೈಲಿಗೆ ತೆರಳಿ ದರ್ಶನ್ ಭೇಟಿಯಾದ ನಟ ಶಿವಣ್ಣ, ಯಶ್, ಕಿಚ್ಚ ಸುದೀಪ್…ಫೋಟೋ ವೈರಲ್‌ !

ಇತ್ತೀಚೆಗೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಟಿ ರಮ್ಯಾ ಅವರಿಗೆ ಕಥೆ ರೆಡಿ ಮಾಡಿದ್ದೇನೆ ಎಂದಿದ್ದರು.  ಸದ್ಯದಲ್ಲಿಯೇ ರಮ್ಯಾ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ರಮ್ಯಾ ಇತ್ತೀಚಿಗೆ  40 ಕಥೆ ಕೇಳಿದ್ದಾರಂತೆ. ಅದ್ರಲ್ಲಿ ಒಂದು ರಮ್ಯಾಗೆ ಇಷ್ಟವಾಗಿದ್ದು ಸದ್ಯದಲ್ಲೇ ಬಣ್ಣ ಹಚ್ತಿನಿ ಅಂತ ಹೇಳಿದ್ದಾರೆ. ರಮ್ಯಾ ಸೆಕೆಂಡ್ ಇನ್ನಿಂಗ್ಸ್ ಯಾವಾಗ ಅನ್ನೋ ಪ್ರಶ್ನೆ ಆಗಾಗ ಕೇಳಿಬರ್ತಾನೇ ಇರುತ್ತೆ. ಇನ್ನು ರಮ್ಯಾ ಮದುವೆ ಯಾವಾಗ ಅಂತ ಅಭಿಮಾನಿಗಳು ಪ್ರಶ್ನೆ ಮಾಡ್ತಾನೆ ಇರುತ್ತಾರೆ.  ಇದನ್ನೂ ಕೂಡ ರಮ್ಯಾ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.

Good news for fans of the charming star on her birthday..! – ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page