ಕ್ರಿಕೆಟ್ : Tulu Times | ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆಯಾಗಿರುತ್ತಾರೆ.ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ 2001ರಲ್ಲಿ ದೂರವಾದ ನಂತರ, ವೆಂಕಟೇಶ್ ಪ್ರಸಾದ್ ರವರು ಕ್ರಿಕೆಟ್‌ನಿಂದ ದೂರವಾಗದೆ ಕೋಚಿಂಗ್ ವೃತ್ತಿಯ ಹಾದಿ ಹಿಡಿದರು.
ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವ ಗುರು ;
ಇವರು ಭಾರತ ತಂಡದ ಬೌಲಿಂಗ್ ಕೋಚ್ ಆಗಿಯೂ ಕರ್ತವ್ಯ ನಿರ್ವಹಿಸಿರುವುದಲ್ಲದೇ, IPL ತಂಡಗಳಿಗೂ ಸಲಹೆಗಾರ ಮತ್ತು ಕೋಚ್ ಆಗಿದ್ದವರು. ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವ ಗುರು ಸದಾ ಯುವ ಪ್ರತಿಭೆಯನ್ನು ಉತ್ತೇಜಿಸುವುದು ಅವರ ಆಸಕ್ತಿಯಾಗಿದೆ. ಇವರು ತಮ್ಮ ನೇರ ಮತ್ತು ಧೈರ್ಯಶಾಲಿ ಅಭಿಪ್ರಾಯಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿರುತ್ತಾರೆ. ಮುಖ್ಯವಾಗಿ, ತಾಯ್ನಾಡು ಕರ್ನಾಟಕ ಮತ್ತು ಕನ್ನಡ ಭಾಷೆಯ ಬಗ್ಗೆ ವಿಶೇಷ ಬದ್ಧತೆಯನ್ನು ಹೊಂದಿರುವುದು ನಮ್ಮ ನಾಡಿಗೆ ಹೆಮ್ಮೆಯ ವಿಷಯ.
12 ವರ್ಷಗಳ ಬಳಿಕ ಮತ್ತೆ ಕೆಎಸ್‌ಸಿಎಗೆ ;
ಇದೀಗ, ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್ಸಿಎ) ಅಧ್ಯಕ್ಷರಾಗಿ ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಎಸ್ಸಿಎ ಅಧ್ಯಕ್ಷ ಸ್ಥಾನಕ್ಕೆ ವಿರೋಧಿ ಬಣದ ಅಭ್ಯರ್ಥಿ ಶಾಂತಕುಮಾರ್ ಅವರ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಚುನಾವಣೆಗೂ ಮುನ್ನವೇ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು. ಇದೀಗ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ 12 ವರ್ಷಗಳ ಬಳಿಕ ಮತ್ತೆ ಕೆಎಸ್‌ಸಿಎಗೆ ವಾಪಸ್ಸಾಗಿದ್ದಾರೆ.
Venkatesh Prasad is the president of the Karnataka Cricket Association – ತುಳು ಟೈಮ್ಸ್
ಇದನ್ನೂ ಓದಿ :ಸಫಾರಿ ಸ್ಥಗಿತದಿಂದ ಸ್ಥಳೀಯ ಜನ ಜೀವನ ಸಂಕಷ್ಟದಲ್ಲಿ…!
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=ObNSLQyYyGZeCQlp











