ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

Karkala : ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಶಿಕ್ಷಕ : ಶಾಲಾ ಕರ್ತವ್ಯದಿಂದ ವಜಾ..!

Karkala : ಮಿಯ್ಯಾರಿನ ಮೊರಾರ್ಜಿ ದೇಸಾಯಿ ಶಾಲೆ ಉತ್ತಮ ಫಲಿತಾಂಶವನ್ನು ಹೊಂದಿದ್ದು, ಇಲ್ಲಿಗೆ ಹಲವಾರು ಕಡೆಯಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕೋಸ್ಕರ ಬರುತ್ತಾರೆ. ಕಲಿಸುವ ಗುರುಗಳನ್ನು‌ ಶ್ರದ್ಧಾ, ಭಕ್ತಿಯಿಂದ ನೋಡುವ ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷಕರೆಂದರೆ ಅಚ್ಚುಮೆಚ್ಚು. ಹೀಗಿರುವಾಗ,‌ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಮಕಾಂದರ್‌ , ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಸುವುದು, ಜನಿವಾರ ಮತ್ತು ಕೈಗೆ ಕಟ್ಟಿರುವ ದಾರ ತೆಗೆಯುವಂತೆ ಹೇಳಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಧರ್ಮಗಳ ನಡುವೆ ಒಡಕು ಉಂಟು ಮಾಡಲಿದೆ ;

ಜನಿವಾರ ತೆಗೆದಿಸುವುದು ಒಂದು ಧರ್ಮಕ್ಕೆ ನೋವುಂಟು ಮಾಡುವ ವಿಚಾರ. ಆದರೆ ಈ ಬಗ್ಗೆ ಮಕಾಂದರ್ ಅವರಲ್ಲಿ ಪ್ರಶ್ನಿಸಿದಾಗ ಜನಿವಾರ ಎಂದರೆ ಏನು ಎಂದು ಗೊತ್ತಿಲ್ಲ ಅನ್ನುವ ಉಡಾಫೆ ಮಾತನ್ನು ಆಡುತ್ತಾರೆ. ಮಿಯ್ಯಾರಿನಲ್ಲಿ ನಾವು ಸರ್ವಧರ್ಮಿಯರು ಅನ್ನೋನ್ಯತೆಯಿಂದ ಇದ್ದೇವೆ. ಆದರೆ, ಮಕಾಂದರ್‌ ಅವರ ಈ ರೀತಿಯ ವರ್ತನೆ ಧರ್ಮಗಳ ನಡುವೆ ಒಡಕು ಉಂಟು ಮಾಡಲಿದೆ. ಇನ್ನು ಮುಂದೆ ಈ ರೀತಿಯ ಘಟನೆ ಎಲ್ಲಿಯೂ ನಡೆಯಬಾರದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಹಾಗಾಗಿ,‌‌ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪದ ಮೇರೆಗೆ ಶಿಕ್ಷಕನನ್ನು ಕರ್ತವ್ಯದಿಂದ ವಜಾಗೊಳಿಸಿದ ಘಟನೆ ನ. 17ರಂದು ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಿತು. ಮೂಲತಃ ಕಲಬುರಗಿ ನಿವಾಸಿ, ದೈಹಿಕ ಶಿಕ್ಷಣ ಶಿಕ್ಷಕ ಮದರಶಾ ಎಸ್. ಮಕಾಂದರ್‌ ವಜಾಗೊಂಡ ಶಿಕ್ಷಕ. ಈ ಶಿಕ್ಷಕ 2025ರ ಜೂನ್ ತಿಂಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ವೃತ್ತಿಗೆ ಅತಿಥಿ ಶಿಕ್ಷಕರಾಗಿ ಇಲ್ಲಿಗೆ ಸೇರ್ಪಡೆಗೊಂಡಿದ್ದರ ಬಗ್ಗೆ ತಿಳಿದುಬಂದಿದೆ. ವಿದ್ಯಾರ್ಥಿಗಳಿಗೆ ಶಿಕ್ಷಿಸುವುದು, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಇವರ ಕಾನೂನುಗಳು ತುಂಬಾ ನೋವುಂಟು ಮಾಡಿರುವುದು ವರದಿಯಾಗಿರುತ್ತದೆ. ಮಕ್ಕಳ ದೂರಿನ ಮೇರೆಗೆ ಪೋಷಕರು, ಊರವರು ಶಾಲೆಗೆ ಆಗಮಿಸಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು. ಮಕಾಂದಾರ್‌ಗೆ ಈ ಬಗ್ಗೆ ಈ ಮೊದಲು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಇದೇ ಪ್ರವೃತ್ತಿ ಮುಂದುವರಿಸಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಮಕಾಂದರ್‌ನನ್ನು ಪ್ರಾಂಶುಪಾಲರು ಶಾಲಾ ಕರ್ತವ್ಯದಿಂದ ವಜಾಗೊಳಿಸಿದ್ದಾರೆ.

ಇದನ್ನೂ ಓದಿ :Tiger Attack : ವ್ಯಾಘ್ರನ ಅಟ್ಟಹಾಸಕ್ಕೆ ಹೊಸ ಫ್ಲಾನ್ : 10 ಸಾವಿರ ಮಾಸ್ಕ್ ವಿತರಣೆ

………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vXhwD33EPDk?si=KRIGAzO0rhTFKOng

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page