ಬ್ರೇಕಿಂಗ್ ನ್ಯೂಸ್
ಕರ್ನಾಟಕ

Actor darshan: ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್‌ ಫ್ಯಾನ್ಸ್‌ 7 ಕೋಟಿ ರೂ. ಪರಿಹಾರ..?

Actor darshan: ಡೆವಿಲ್ ಸಿನಿಮಾ ಇನ್ನೇನು ರಿಲೀಸ್ ಆಗಲಿದೆ, ಈ ಸಮಯದಲ್ಲಿ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಹತ್ವದ ಚಿಂತನೆ ಆರಂಭಿಸಿದ್ದು, 7 ಕೋಟಿ ರೂಪಾಯಿ ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರ ಸಂಗ್ರಹ ಮಾಡಿ ಅದನ್ನು ತಲುಪಿಸಬೇಕು ಎಂಬ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಅವರ ಗ್ಯಾಂಗ್‌ ಜೈಲುವಾಸ ಅನುಭವಿಸುತ್ತಿದ್ದಾರೆ, ಈ ಸಂದರ್ಭದಲ್ಲಿ ಇದೀಗ ದರ್ಶನ್‌ ಅವರ ಬಹುನಿರೀಕ್ಷಿತ ಚಿತ್ರ ಡೆವಿಲ್‌ ರಿಲೀಸ್‌ ಹಂತಕ್ಕೆ ತಲುಪಿದೆ. ಹೀಗಿರುವಾಗ ರೇಣುಕಾಸ್ವಾಮಿ ಕುಟುಂಬಕ್ಕೆ 7 ಕೋಟಿ ರೂ.  ಹಣ ಸಂಗ್ರಹ ಮಾಡಿ ರೇಣುಕಾಸ್ವಾಮಿ ಕುಟುಂಬಕ್ಕೆ ಡೆವಿಲ್‌ ರಿಲೀಸ್‌ ಸಮಯದಲ್ಲಿ ಪರಿಹಾರ ನೀಡುತ್ತಾರೆ ಅನ್ನೋ ಮಾಹಿತಿ ಹರಿದಾಡುತ್ತಿದೆ.

ಇದನ್ನೂ ಓದಿ: ಧರ್ಮಸ್ಥಳ ಮಂಜುನಾಥನ ಅಚ್ಚರಿಯ ಚಮತ್ಕಾರ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ದರ್ಶನ್‌ ಕೇಸ್‌ ದಿನಕ್ಕೊಂದು ಟ್ವಿಸ್ಟ್..!

ಕನ್ನಡ ಚಿತ್ರ ರಂಗದಲ್ಲಿ ದರ್ಶನ್ ತೂಗುದೀಪ್ ಅವರು ಇಲ್ಲದೇ ಇಂಡಸ್ಟ್ರಿ ನಡೆಯೋದಿಲ್ಲ ಬಿಡಿ… ಡಿ-ಬಾಸ್ ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ಇಂಡಸ್ಟ್ರಿ ಉಳಿಸುತ್ತಿದ್ದಾರೆ,  ಹೀಗೆ ನಟ ದರ್ಶನ್ ತೂಗುದೀಪ್ ಅಭಿಮಾನಿಗಳು ಸಾರಿ ಸಾರಿ ಹೇಳುತ್ತಾ ಬಂದಿದ್ದರು. ಆದರೂ ನಟ ದರ್ಶನ್‌  ಕುಟುಂಬದಲ್ಲಿ ಒಂದು ಕಹಿ ಘಟನೆ ನಡೆದೇ ಹೋಗಿದೆ. ಈಗಲೂ ಕೂಡ ದರ್ಶನ್‌ ಫ್ಯಾನ್ಸ್‌ ಮೊದಲಿನ ರೀತಿಯೇ ಕೊಂಡಾಡುತ್ತಿದ್ದಾರೆ. ದರ್ಶನ್ ಜೀವನದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿರುವ ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್, ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಶ್ಲೀಲವಾಗಿ ಮೆಸೇಜ್ ಕಳುಹಿಸಿ,  ದರ್ಶನ್ ತೂಗುದೀಪ್ ಅವರ  ಗೆಳತಿ ಪವಿತ್ರಾ ಗೌಡಗೆ ತೊಂದರೆ ಕೊಟ್ಟಿದ್ದರು ಎಂಬ ಕಾರಣಕ್ಕೆ ಅಪಹರಣ ಮಾಡಿ ಕೊಲೆ ಮಾಡಿದ ಆರೋಪ ಕೇಳಿ ಬಂದಿತ್ತು.

ಇದೀಗ, ದರ್ಶನ್ ಅಭಿಮಾನಿಗಳೇ ಸೇರಿ, ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರವನ್ನ ಸಂಗ್ರಹ ಮಾಡಿ ಅದನ್ನ ತಲುಪಿಸಬೇಕು ಎಂಬ ಚರ್ಚೆ ನಡೆಸಿದ್ದಾರೆ. ಇದರಂತೆ, ದರ್ಶನ್‌ ಅವರ 7 ಕೋಟಿ ಫ್ಯಾನ್ಸ್ , ಅವರೆಲ್ಲಾ ಸೇರಿ 1 ರೂಪಾಯಿ ದೇಣಿಗೆ ನೀಡಿದರೂ  ಅದು 7 ಕೋಟಿ ರೂಪಾಯಿ ಆಗಲಿದೆ. ಈ ಹಣವನ್ನ ರೇಣುಕಾಸ್ವಾಮಿ ಕುಟುಂಬಕ್ಕೆ ನೀಡುವ ಯೋಚನೆ ಮಾಡಿದ್ದಾರೆ.  ಈ ಬಗ್ಗೆ ಈಗಾಗಲೇ  ಪರ & ವಿರೋಧದ ಚರ್ಚೆ ನಡೆಯುತ್ತಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page