ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕದೇಶರಾಜಕೀಯ

CM Siddaramaiah: ಬಾಂಬ್‌ ಬ್ಲಾಸ್ಟ್‌ ಬಗ್ಗೆ ಮಾಹಿತಿ ಕಲೆಹಾಕ್ತಿದ್ದೀನಿ..!

CM Siddaramaiah: ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಭೀಕರ ಬಾಂಬ್‌ ಸ್ಟೋಟದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಪ್ರತಿಕ್ರೀಯೆ ನೀಡಿದ್ದಾರೆ.

ಬಾಂಬ್‌ ಬ್ಲಾಸ್ಟ್‌ ಆಗಲೇಬಾರದಿತ್ತು..! ಸಿಎಂ!

ದೆಹಲಿಯಲ್ಲಿ ನಡೆದ ಬಾಂಬ್‌ ಸ್ಟೋಟದ ಕುರಿತು ಮೈಸೂರಿನಲ್ಲಿ ಸಿಎಂ ಸಿದ್ರಾಮಯ್ಯ ಮಾತನಾಡಿ, ಬಾಂಬ್ ಬ್ಲಾಸ್ಟ್ ಆಗಲೇಬಾರದು, ಈಗ ಅಮಾಯಕ ಜನರು ಬಲಿಯಾಗಿದ್ದಾರೆ. ಒಂದು ಪತ್ರಿಕೆಯಲ್ಲಿ ಮೂರು ಜನ, ಒಂದರಲ್ಲಿ‌ ಎಂಟು ಜನ ಬರೆದಿದ್ದಾರೆ. ಸಾವು ಸಾವುಗಳೇ, ಆ ಘಟನೆ ನಡೆಯಬಾರದು, ಈ ಘಟನೆ ದೆಹಲಿಯ ಕೆಂಪುಕೋಟೆ ಬಳಿಯೇ ನಡೆದಿದೆ,  ಈ ದಾಳಿ ಕುರಿತಂತೆ ನಾನು ಮಾಹಿತಿ ಕಲೆ ಹಾಕ್ತೀದ್ದೀನಿ. ಮೃತರ ಕುಟುಂಬದ ಜೊತೆ ನಾನು ಇರ್ತೀನಿ.ಚುನಾವಣೆ ವೇಳೆಯೇ ಘಟನೆ ನಡೆಯುವುದು ನನಗೆ ಗೊತ್ತಿಲ್ಲ. ಬಿಹಾರ ಚುನಾವಣೆ ವೇಳೆಯೇ ಇಂತಹ ಘಟನೆ ನಡೆದಿರುವುದು, ಬಾಂಬ್ ದಾಳಿ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಬಿಜೆಪಿ ವಿರುದ್ಧವಾಗಿ ಪರಿಣಾಮ ಬೀರಬಹುದು, ಕಾಂಗ್ರೆಸ್ ಪರವಾಗಿ ಅದು ವರ್ಕ್ ಆಗಬಹುದು.

ಭಾರತ ಹಿಂದೂರಾಷ್ಟ್ರ ಆಗೋಕೆ ಸಾಧ್ಯವೇ ಇಲ್ಲ…!

ಭಾರತ ಹಿಂದೂರಾಷ್ಟ್ರ ಮಾಡಬೇಕು ಅಂತಾರೆ, ಇದು ಸಾಧ್ಯವೇ ಇಲ್ಲ. ನಮ್ಮದು ಬಹುತ್ವ ದೇಶ. ನಮ್ಮಲ್ಲಿ ಎಲ್ಲ‌ ಜಾತಿ, ಜನಾಂಗ, ಭಾಷೆ,‌ಧರ್ಮ ಎಲ್ಲವೂ ಇದೆ. ಎಲ್ಲರನ್ನೂ ಒಳಗೊಳ್ಳುವ ದೇಶ ನಮ್ಮದು‌ ಭಾರತ ದೇಶ ಎಂದರು.  ಈ ವೇಳೆ   ಮೈಸೂರಲ್ಲಿ ಶಾಲೆಯೊಂದರಲ್ಲಿ ರ್ಯಾಗಿಂಗ್ ವಿಚಾರದ ಬಗ್ಗೆ ಮಾತನಾಡಿದ ಸಿದ್ರಾಮಯ್ಯ, ರೌಡಿ ಪರೇಡ್ ಮಾಡಲು ಸೂಚಿಸಿದ್ದೇವೆ ಎಂದರು, ಇನ್ನು  ವಿಧಾನಸೌಧದಲ್ಲಿ ಭಯೋತ್ಪಾದಕರಿದ್ದಾರೆ ಎಂಬ ಹೇಳಿಕೆಯ ಕುರಿತಾಸಿ ಸಿಎಂ ಮಾತನಾಡಿದ್ದಾರೆ.  ಇದೆಲ್ಲ ಹಿಟ್ & ರನ್ ವಿಚಾರ, ವಿಧಾನಸೌಧದಲ್ಲಿ ಕಾಂಗ್ರೆಸ್ ಇದ್ದಾರೆ , ಜೆಡಿಎಸ್ ನವರು ಇದ್ದಾರಾ? ಎಂದು ಹೇಳಿದ್ದಾರೆ.

ಬೆಚ್ಚಿ ಬೀಳಿಸಿದೆ ಬಾಂಬ್‌ ಸ್ಟೋಟ..!

9 ವಾಹನಗಳು ಸುಟ್ಟು ಕರಕಲಾಗಿತ್ತು, ಒಟ್ಟು 13 ಜನ ಸಾವನ್ನಪ್ಪಿರುವ ಮಾಹಿತಿಯಿದ್ದು, 30 ಮಂದಿಗೆ ಗಾಯಗಳಾಗಿರುತ್ತವೆ.
9 ವಾಹನಗಳು ಸುಟ್ಟು ಕರಕಲಾಗಿತ್ತು, ಒಟ್ಟು 13 ಜನ ಸಾವನ್ನಪ್ಪಿರುವ ಮಾಹಿತಿಯಿದ್ದು, 30 ಮಂದಿಗೆ ಗಾಯಗಳಾಗಿರುತ್ತವೆ.  ಇದೀಗ ಸ್ಪೋಟ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಪ್ರತಿಯೊಂದರ ಬಗ್ಗೆಯೂ‌ ವಿಚಾರಣೆ ನಡೆಸಲಾಗುತ್ತಿದೆ. ಮಾಧ್ಯಮಗಳಲ್ಲಿ ಲೈವ್ ಕವರೇಜ್ ಕೂಡ ನೀಡಲಾಗುತ್ತಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 187

You cannot copy content of this page