ಬ್ರೇಕಿಂಗ್ ನ್ಯೂಸ್
ಕರ್ನಾಟಕಕ್ರೀಡೆ

Bengaluru: ಕೊಡವರು ಅಂದ್ರೆ ಹಾಕಿ: ಹಾಕಿ ಅಂದ್ರೆ ಕೊಡವರು: ಸಿ.ಎಂ ವರ್ಣನೆ

Bengaluru: ಕೊಡವರು ಅಂದ್ರೆ ಹಾಕಿ. ಹಾಕಿ ಅಂದ್ರೆ ಕೊಡವರು..ಚೆನ್ನಡ ಹಾಕಿ ಪಂದ್ಯಾವಳಿಗೆ ಸರ್ಕಾರದಿಂದ ಒಂದು ಕೋಟಿ ಅನುದಾನ ಒದಗಿಸಲಾಗುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಕುಡ್ಲದ ಕ್ರಿಕೆಟರ್ ಜೆಮಿಮಾ ರೋಡ್ರಿಗಸ್ ಅವರಿಗಾಗಿತ್ತು ಭಾರೀ ಅವಮಾನ..!

ಚೆನ್ನಡ ಹಾಕಿ ಪಂದ್ಯಾವಳಿಗೆ ಒಂದು ಕೋಟಿ ಅನುದಾನ..!

ಗೃಹ ಕಚೇರಿ ಕೃಷ್ಣದಲ್ಲಿ “ಚೆನ್ನಡ ಹಾಕಿ ಪಂದ್ಯಾವಳಿ”ಯ ಲೋಗೋ ಬಿಡುಗಡೆ ಮಾಡಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಹಾಕಿ ಪಟುಗಳು ಮಿಂಚಿದ್ದಾರೆ. ದೇಶಕ್ಕೆ ಕೀರ್ತಿ ತಂದಿದ್ದಾರೆ. ಏಷ್ಯಾ ಗೇಮ್ಸ್ ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ಮತ್ತು ಘನತೆ ತಂದುಕೊಟ್ಟಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  ಕೊಡವ ಸಂಸ್ಕೃತಿ ತನ್ನದೇ ಆದ ಭಿನ್ನತೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದೆ. ಇದು ನಮ್ಮ ಸಂಸ್ಕೃತಿಯ ಹೆಮ್ಮೆ ಎಂದರು.

ಹಾಕಿ ಪಂದ್ಯಾವಳಿ ನೋಡಲು ನಾನೂ ಬರುವೆ..! ಸಿಎಂ

2026ರ ಮೇ ತಿಂಗಳಲ್ಲಿ ನಡೆಯುವ ಪಂದ್ಯಾವಳಿಗೆ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಅನುದಾನ ಕೊಡುತ್ತೇವೆ. ಪಂದ್ಯಾವಳಿ ನೋಡಲು ನಾನೂ ಬರುತ್ತೇನೆ ಎಂದು ಭರವಸೆ ನೀಡಿದರು. ಶಾಸಕರೂ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಮತ್ತು ಸಚಿವರಾದ ಬೋಸರಾಜು, ಬೈರತಿ ಸುರೇಶ್ ಮತ್ತು ಶಿವರಾಜ್ ತಂಗಡಗಿ ಸೇರಿ ಕೊಡವ ಸಮುದಾಯದ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸರಕಾರಿ ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಉದ್ಯೋಗವಕಾಶ…!

ಕೊಡವರು ಹಾಗೂ ಹಾಕಿ ಏನು ಸಂಬಂಧ..?

ಕೊಡವರು ಮತ್ತು ಹಾಕಿ ನಡುವೆ ದೀರ್ಘಕಾಲದ ಮತ್ತು ಆಳವಾದ ಸಂಬಂಧವಿದೆ, ಕೊಡಗು ಜಿಲ್ಲೆಯನ್ನು ಭಾರತೀಯ ಹಾಕಿಯ ತವರು ಎಂದು ಪರಿಗಣಿಸಲಾಗುತ್ತದೆ. ಕೊಡವರು ಹಾಕಿಯನ್ನು ಒಂದು ಕ್ರೀಡೆಯಾಗಿ ಮಾತ್ರವಲ್ಲದೆ, ಕುಟುಂಬಗಳನ್ನು ಒಟ್ಟುಗೂಡಿಸುವ ಹಬ್ಬವಾಗಿಯೂ ಆಚರಿಸುತ್ತಾರೆ. ಕೊಡವ ಹಾಕಿ ಉತ್ಸವ ವಿಶ್ವದ ಅತಿ ದೊಡ್ಡ ಫೀಲ್ಡ್ ಹಾಕಿ ಪಂದ್ಯಾವಳಿಗಳಲ್ಲಿ ಒಂದಾಗಿದೆ. ಈ ಉತ್ಸವವು ವಿಶ್ವ ದಾಖಲೆ ಮಾಡಿದೆ. 50 ಕ್ಕೂ ಹೆಚ್ಚು ಕೊಡವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ, ಅವರಲ್ಲಿ ಕೆಲವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ. ಉದಾಹರಣೆಗೆ, ಬಿ. ಪಿ. ಗೋವಿಂದ, ಎಂ. ಪಿ. ಗಣೇಶ್, ಎಂ. ಎಂ. ಸೋಮಯ್ಯ, ಸಿ. ಎಸ್. ಪೂಣಚ್ಚ ಮುಂತಾದವರು ಸಾಧನೆ ಮಾಡಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 159

You cannot copy content of this page