ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬಾಸುಮ ಕೊಡಗು ನಿರ್ದೇಶನದ ಹೊಸ ಚಿತ್ರಕ್ಕೆ ಮುಹೂರ್ತ ಕಾರ್ಯಕ್ರಮ : ಆರ್ಯವರ್ಧನ್ ಗುರೂಜಿ

ಮಡಿಕೇರಿ : Tulu Times l ಮಡಿಕೇರಿ ನಗರದ ರಾಜಾಸೀಟ್ ನಲ್ಲಿ ಕೋವಿ ಮತ್ತು ಕೊಳಲು ಹೆಸರಿನ ನೂತನ ಚಲನಚಿತ್ರಕ್ಕೆ ಖ್ಯಾತ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಮುಹೂರ್ತ ಕಾರ್ಯಕ್ರಮ ನೆರವೇರಿಸಿದರು.

ಹಿರಿಯ ಕಲಾವಿದ ಕಾಂತಾರ ಖ್ಯಾತಿಯ ಬಾಸುಮ ಕೊಡಗು ನಿರ್ದೇಶನದಲ್ಲಿ ಇಂಪೀರಿಯಲ್ ಪ್ರೊಡಕ್ಷನ್ಸ್ ಸಂಸ್ಥೆಯ ನಿರ್ಮಾಣದಲ್ಲಿ ತಯಾರಾಗುವ ಕೋವಿ ಮತ್ತು ಕೊಳಲು ಚಿತ್ರಕ್ಕೆ ಮುಹೂರ್ತ ಪೂಜೆಯನ್ನು ನೆರವೇರಿಸಿ ಮಾತನಾಡಿದ ಇವರು ಉತ್ತಮ ಕನ್ನಡ ಚಿತ್ರಗಳು ತೆರೆಗೆ ಬರಬೇಕಾಗಿರುವುದು ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಬಾಸುಮ ಅವರ ಕೋವಿ ಮತ್ತು ಕೊಳಲು ಹೊಸ ಭರವಸೆ ಮೂಡಿಸಿದೆ ಎಂದು ಹೇಳಿದರು.

ಚಿತ್ರದ ನಿರ್ಮಾಣ ಸಂಸ್ಥೆ ಇಂಪೀರಿಯಲ್ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೇಮಂತ್ ಕುಲಾಲ್ ಮಾತನಾಡಿ, ಕೋವಿ ಮತ್ತು ಕೊಳಲು ಉತ್ತಮ ಕಥೆ ಹೊಂದಿರುವ ಹಿನ್ನಲೆಯಲ್ಲಿ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಹೇಳಿದರು.

ಕೋವಿ ಮತ್ತು ಕೊಳಲು ಸಿನಿಮಾ ನಿರ್ದೇಶಕ ಬಾಸುಮ ಕೊಡಗು ಮಾತನಾಡಿ, ಗುರುರಾಜ ಮಾರ್ಪಳ್ಳಿಯವರ ‘ಗರ್ಭ’ ಕಾದಂಬರಿ ಆಧಾರಿತ ಕೋವಿ ಮತ್ತು ಕೊಳಲು ಸಿನೆಮಾವು ಕಲಾತ್ಮಕ ಹಾಗೂ ಕಮರ್ಷಿಯಲ್ ಚಲನಚಿತ್ರವಾಗಿದೆ.  ಮಡಿಕೇರಿ, ಸಂಪಾಜೆ ಮತ್ತು ಸುಳ್ಯ ವಿಭಾಗಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಕಲೆ ಮತ್ತು ಹಣದ ನಡುವಿನ ಸಂಘರ್ಷಗಳ ಕುರಿತ ಕಥೆಯನ್ನು ಇಲ್ಲಿ ಚಲನಚಿತ್ರವಾಗಿ ನಿರ್ಮಿಸಲಾಗುತ್ತಿದೆ.  ಈ ವರ್ಷದ ಸೆಪ್ಪಂಬರ್ ನಲ್ಲಿ ಈ ಚಿತ್ರ ತೆರೆಕಾಣಲಿದೆ ಎಂದರು.

ಚಿತ್ರದ ನಾಯಕಿ,  ರಾಷ್ಟ್ರ ಪ್ರಶಸ್ತಿ ವಿಜೇತರಾದ ಅಕ್ಷತಾ ಪಾಂಡವಪುರ ಮಾತನಾಡಿ, ಇದೊಂದು ಉತ್ತಮ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ರಂಗಭೂಮಿಯಲ್ಲಿ ಹೆಸರು ಮಾಡಿರುವ ಅನೇಕರು ನಟಿಸುತ್ತಿದ್ದಾರೆ. ತಾನು ರಾಜ್ಯವ್ಯಾಪಿ ರಂಗಪ್ರದರ್ಶನ ನೀಡಿದ್ದರೂ ಕೊಡಗು ಜಿಲ್ಲೆಯಲ್ಲಿ ಅವಕಾಶ ದೊರಕಿರಲಿಲ್ಲ. ಈ ಚಿತ್ರದ ಮೂಲಕ ಮಡಿಕೇರಿಗೆ ಬರುವ ಅವಕಾಶ ಲಭಿಸಿತು ಎಂದರು.

ಈ ಸಂದರ್ಭದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ, ಕನಾ೯ಟಕ ಅರೆಭಾಷಾ ಸಾಹಿತ್ಯ ಸಾಂಸ್ಕೖತಿಕ ಅಕಾಡೆಮಿ ಸದಸ್ಯ ಪಿ.ಎಂ.ಸಂದೀಪ್ , ಪಿಎಸ್ ಫಿಲಂಸ್ ನಿರ್ದೇಶಕರಾದ ಕುಮಾರ್ ಬಿ.ಟಿ., ಪ್ರೊಡಕ್ಷನ್ ಮ್ಯಾನೇಜರ್ ಜಯ ಕುಮಾರ್,  ತೋಟಗಾರಿಕಾ ಇಲಾಖಾ ಹಿರಿಯ ನಿರ್ದೇಶಕರಾದ ಫಣೀಂದ್ರ, ಪುರಾತತ್ವ ಇಲಾಖೆಯ  ಅಧಿಕಾರಿ ರೇಖಾ, ಪತ್ರಕರ್ತ ರಘು ಕೋಟಿ ಹಾಗೂ ಪ್ರಮುಖರು  ಶುಭಹಾರೈಸಿದರು.

ಕೋವಿ ಮತ್ತು ಕೊಳಲು ಚಿತ್ರದಲ್ಲಿ, ಶೌರ್ಯತೇಜ  ಚಿತ್ರಕಥೆ, ಸಂಭಾಷಣೆ ಬರೆದಿರುವ ಚಿತ್ರಕ್ಕೆ ಛಾಯಾಗ್ರಾಹಕರಾಗಿ ದೃಶಾ ಕೊಡಗು, ಕಲಾ ನಿರ್ದೇಶಕರಾಗಿ ಲೋಕೇಶ್ ಊರುಬೈಲು   ಕಾರ್ಯನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷತಾ ಪಾಂಡವಪುರ, ನವೀನ್ ಡಿ.ಪಡೀಲ್, ಮೋಹನ್ ಶೇಣಿ, ಮುರಳಿ ಶೃಂಗೇರಿ, ಆನಂದ ತುಮಕೂರು, ಶೈಲಶ್ರೀ, ಡಿಂಗ್ರಿ ನರೇಶ್, ಪಲ್ಲವಿ ಕೊಡಗು, ಕುಶಾಲನಗರದ ಮಾನ್ಯ ಕುಮಾರ್ ಅಭಿನಯಿಸುತ್ತಿದ್ದಾರೆ.

Muhurta program for the new movie directed by Basuma Kodagu : Aryavardhan Guruji – ತುಳುಟೈಮ್ಸ್

ಇದನ್ನೂ ಓದಿ :ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ಜೂನ್ 21ರಂದು ನೀಟ್ ಯುಜಿ ಮರುಪರೀಕ್ಷೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=diT341960WV70uww

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page