ಬ್ರೇಕಿಂಗ್ ನ್ಯೂಸ್
ಕರ್ನಾಟಕ

ತಮಿಳುನಾಡಿನಲ್ಲಿ ದಳಪತಿ ದಿಗ್ವಿಜಯ : 2009ರಿಂದಲೇ ನಡೆದಿತ್ತು ಸಿದ್ಧತೆ

ರಾಜಕೀಯ : Tulu Times l ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಸಂಚಲನ ಸೃಷ್ಟಿಸಿದ್ದು, ಅವರು ಸ್ಪರ್ಧಿಸಿದ ಎರಡು ಕ್ಷೇತ್ರಗಳಾದ ಪೆರಂಬೂರು ಮತ್ತು ತಿರುಚಿ ಈಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಪೆರಂಬೂರಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಅಭ್ಯರ್ಥಿ ಆರ್.ಡಿ ಶೇಖರ್ ವಿರುದ್ಧ 40 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ತಿರುಚಿ ಈಸ್ಟ್‌ನಲ್ಲಿ 20 ಸಾವಿರ ಮತಗಳ ಬಹುಮತದಿಂದ ಜಯ ಸಾಧಿಸಿದ್ದಾರೆ. ಇನ್ನೊಂದೆಡೆ ತಮಿಳಗ ವೆಟ್ರಿ ಕಳಗಂ 109 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ಕಾರ್ತಿ ಪಿ ಚಿದಂಬರಂ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿ, ಮೊದಲ ಚುನಾವಣೆಯಲ್ಲೇ ಅದ್ಭುತ ಸಾಧನೆ. ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಈ ನಡುವೆ ಭಾರತೀಯ ಕಾಂಗ್ರೆಸ್ ನಾಯಕತ್ವವೂ ಟಿವಿಕೆಯೊಂದಿಗೆ ಮೈತ್ರಿ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ. ಇನ್ನು ಆಡಳಿತದಲ್ಲಿದ್ದ ಡಿಎಂಕೆ ಸುಮಾರು 60 ಸ್ಥಾನಗಳಲ್ಲಿ ಮಾತ್ರ ಮುನ್ನಡೆಯಲ್ಲಿದ್ದು, ಅದರ ಮೈತ್ರಿ ಪಕ್ಷ ಕಾಂಗ್ರೆಸ್ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ದೀರ್ಘಕಾಲದ ದ್ರಾವಿಡ ರಾಜಕೀಯಕ್ಕೆ ದೊಡ್ಡ ಹೊಡೆತ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಶ್ಲೇಷಕರ ಪ್ರಕಾರ, ಯುವಕರು ಮತ್ತು ಮಹಿಳಾ ಮತದಾರರು ದೊಡ್ಡ ಪ್ರಮಾಣದಲ್ಲಿ ಟಿವಿಕೆ ಕಡೆಗೆ ತಿರುಗಿದ್ದಾರೆ. ಇದರಿಂದಲೇ ಈ ಭಾರೀ ಮುನ್ನಡೆ ಸಾಧ್ಯವಾಗಿದೆ ಎನ್ನಲಾಗುತ್ತಿದೆ. ವಿಜಯ್  ಸಿನೆಮಾ ಜೀವನದಲ್ಲೂ ಟೀಕೆಗಳನ್ನು ಎದುರಿಸಿ, ಹಂತ ಹಂತವಾಗಿ ಬೆಳೆದು ಈಗ ರಾಜಕೀಯದಲ್ಲೂ ಅದೇ ಹಾದಿಯನ್ನು ಮುಂದುವರಿಸಿದ್ದಾರೆ.

ಪ್ರಸ್ತುತ ಟ್ರೆಂಡ್‌ಗಳ ಪ್ರಕಾರ, ವಿಜಯ್ ತಮಿಳುನಾಡಿನಲ್ಲಿ ಹೊಸ ಇತಿಹಾಸ ನಿರ್ಮಿಸುವ ದಾರಿಯಲ್ಲಿ ಸಾಗುತ್ತಿದ್ದಾರೆ. 1977ರಲ್ಲಿ ಎಂ ಜಿ ರಾಮಚಂದ್ರನ್ ಮಾಡಿದ ರಾಜಕೀಯ ಕ್ರಾಂತಿಯಂತೆ, ಇದೀಗ ಮತ್ತೊಮ್ಮೆ ದೊಡ್ಡ ಬದಲಾವಣೆಯ ಸೂಚನೆ ಕಾಣುತ್ತಿದೆ. ತಮಿಳುನಾಡಿನಲ್ಲಿ ದಶಕಗಳಿಂದ ಮುಂದುವರಿದಿದ್ದ ದ್ರಾವಿಡ ರಾಜಕೀಯದ ದ್ವಂದ್ವಕ್ಕೆ ಈ ಚುನಾವಣೆ ಸವಾಲು ಹಾಕಿದೆ. ವಿಜಯ್ ಮತ್ತು ಟಿವಿಕೆ ಮುನ್ನಡೆ, ಹೊಸ ರಾಜಕೀಯ ಅಧ್ಯಾಯದ ಆರಂಭವಾಗುವ ಸೂಚನೆ ನೀಡುತ್ತಿದೆ. ಅಂತಿಮ ಫಲಿತಾಂಶಗಳು ಇನ್ನಷ್ಟು ಸ್ಪಷ್ಟತೆ ನೀಡಲಿದ್ದು, ರಾಜ್ಯದ ಭವಿಷ್ಯವನ್ನು ನಿರ್ಧರಿಸಲಿವೆ.

Digvijaya as leader in Tamil Nadu: Preparations had been going on since 2009 – ತುಳುಟೈಮ್ಸ್

ಇದನ್ನೂ ಓದಿ :ಚುನಾವಣೆ ಫಲಿತಾಂಶಗಳ ನಂತರ ಬಿಜೆಪಿ ಕಚೇರಿಗೆ ಭೇಟಿ ನೀಡಲಿರುವ ಪ್ರಧಾನಿ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/p4-vd_M93Z8?si=bRGkY3Qbf-FXb94J

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 166

You cannot copy content of this page