ಆರೋಗ್ಯ : Tulu Times l ನಮ್ಮ ದೇಹಕ್ಕೆ ಅಗತ್ಯವಾದ ಖನಿಜಗಳಲ್ಲಿ ಮೆಗ್ನೀಷಿಯಂ ಒಂದು ಅತ್ಯಂತ ಪ್ರಮುಖ ಅಂಶ. ಇದು ಸ್ನಾಯುಗಳ ಚಲನೆ, ನರಗಳ ಕಾರ್ಯ, ಹೃದಯದ ಸ್ಪಂದನ, ಶಕ್ತಿ ಉತ್ಪಾದನೆ ಮತ್ತು ಎಲುಬಿನ ಬಲಕ್ಕೆ ಸಹಾಯಕವಾಗಿದೆ. ಆದರೆ ಅನೇಕರು ತಮ್ಮ ಮೆಗ್ನೀಷಿಯಂ ಮಟ್ಟವನ್ನು ಪರೀಕ್ಷಿಸಿಕೊಳ್ಳುವುದೇ ಇಲ್ಲ. ಇದೇ ಕಾರಣಕ್ಕೆ ಇದರ ಕೊರತೆ ಮೌನವಾಗಿ ಬೆಳೆಯುತ್ತಾ ದೇಹದಲ್ಲಿ ಹಲವು ಸಮಸ್ಯೆಗಳನ್ನು ಉಂಟುಮಾಡಬಹುದು.
ವೈದ್ಯರ ಪ್ರಕಾರ, ಮೆಗ್ನೀಷಿಯಂ ಕೊರತೆ ಒಂದು ದಿನದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅದು ತಿಂಗಳುಗಳ ಕಾಲ ನಿಧಾನವಾಗಿ ಬೆಳೆಯುತ್ತದೆ. ಆರಂಭದಲ್ಲಿ ಸಾಮಾನ್ಯ ದಣಿವು, ನಿದ್ರೆ ಕೊರತೆ ಅಥವಾ ಒತ್ತಡ ಎಂದು ಭಾಸವಾಗುವ ಲಕ್ಷಣಗಳೇ ಮುಂದೆ ದೊಡ್ಡ ತೊಂದರೆಯಾಗಿ ಪರಿಣಮಿಸಬಹುದು.
ವೈದ್ಯರು ಮೊದಲು ಗಮನಿಸುವ ಲಕ್ಷಣಗಳು;
1. ಕಾರಣವಿಲ್ಲದ ದಣಿವು
ಸಾಕಷ್ಟು ನಿದ್ರೆ ಪಡೆದರೂ ದೇಹದಲ್ಲಿ ಶಕ್ತಿ ಇಲ್ಲದಂತೆ ಕಾಣುವುದು ಮೆಗ್ನೀಸಿಯಂ ಕೊರತೆಯ ಮೊದಲ ಸೂಚನೆಗಳಲ್ಲಿ ಒಂದು.
2. ಕಾಲು ಸೆಳೆತ ಮತ್ತು ಸ್ನಾಯು ನೋವು
ರಾತ್ರಿ ವೇಳೆ ಕಾಲುಗಳಲ್ಲಿ ಸೆಳೆತ, ಸ್ನಾಯು ಬಿಗಿತ ಅಥವಾ ಕುದಿಯುವಂತೆ ಅನುಭವವಾಗಬಹುದು.
3. ಹೃದಯದ ಅಸಹಜ ಬಡಿತ
ಎದೆ ಭಾಗದಲ್ಲಿ ತುಸು ಚಡಪಡಿಸುವ ಅನುಭವ, ಹೃದಯ ಸ್ಪಂದನದಲ್ಲಿ ವ್ಯತ್ಯಾಸ ಕಂಡುಬಂದರೆ ಗಮನಿಸಬೇಕು.
4. ಆತಂಕ ಮತ್ತು ಚಡಪಡಿಕೆ
ನರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದ ಕಾರಣ ಮನಸ್ಸಿನಲ್ಲಿ ಅಶಾಂತಿ, ಕಳವಳ ಹೆಚ್ಚಾಗಬಹುದು.
5. ನಿದ್ರಾಹೀನತೆ
ಸರಿಯಾಗಿ ನಿದ್ರೆ ಬಾರದಿರುವುದು ಅಥವಾ ಮಧ್ಯರಾತ್ರಿ ಎಚ್ಚರವಾಗುವುದು ಕಂಡುಬರುತ್ತದೆ.
6. ತಲೆನೋವು
ಕೆಲವರಲ್ಲಿ ಮರುಮರು ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಗೂ ಇದು ಸಂಬಂಧಿಸಿರಬಹುದು.
ದೇಹವು ರಕ್ತದಲ್ಲಿನ ಮ್ಯಾಗ್ನೀಷಿಯಂ ಮಟ್ಟವನ್ನು ಸಾಮಾನ್ಯವಾಗಿಯೇ ತೋರಿಸಲು ಎಲುಬುಗಳು ಮತ್ತು ಕಣಜಗಳಿಂದ ಮೆಗ್ನೀಸಿಯಂ ತೆಗೆದುಕೊಳ್ಳುತ್ತದೆ. ಹೀಗಾಗಿ ಸಾಮಾನ್ಯ ರಕ್ತ ಪರೀಕ್ಷೆಯಲ್ಲಿ ಮಟ್ಟ ಸರಿಯಾಗಿದ್ದರೂ ದೇಹದ ಸಂಗ್ರಹ ಕಡಿಮೆಯಾಗಿರಬಹುದು.
ಇದಕ್ಕೆ ಮುಖ್ಯ ಕೊರತೆಗಳು ಯಾವುವೆಂದರೆ ; ಸರಿಯಾದ ಆಹಾರ ಸೇವಿಸದಿರುವುದು, ಹೆಚ್ಚು ಜಂಕ್ ಫುಡ್ ಸೇವನೆ, ಮಧುಮೇಹ, ಮದ್ಯಪಾನ, ಹೊಟ್ಟೆ ಸಂಬಂಧಿ ಸಮಸ್ಯೆಗಳು, ಕೆಲವು ಔಷಧಿಗಳ ದೀರ್ಘಕಾಲ ಬಳಕೆ, ಹೆಚ್ಚು ಒತ್ತಡ ಮೆಗ್ನೀಸಿಯಂ ಹೆಚ್ಚಿಸುವ ಆಹಾರಗಳು, ಬಾದಾಮಿ, ಗೋಡಂಬಿ ಕುಂಬಳಕಾಯಿ ಬೀಜ, ಹಸಿರು ಸೊಪ್ಪುಗಳು, ಬಾಳೆಹಣ್ಣು, ಸಂಪೂರ್ಣ ಧಾನ್ಯಗಳು, ಕಾಳುಗಳು ಮತ್ತು ಬೇಳೆ ಸೇವನೆ ಮುಖ್ಯ.
ಮೆಗ್ನೀಸಿಯಂ ಕೊರತೆ ಸಣ್ಣ ಸಮಸ್ಯೆಯಂತೆ ಕಂಡರೂ ದೇಹದ ಅನೇಕ ಕಾರ್ಯಗಳಿಗೆ ಪರಿಣಾಮ ಬೀರುತ್ತದೆ. ಸರಿಯಾದ ಆಹಾರ, ಸಮತೋಲನ ಜೀವನಶೈಲಿ ಮತ್ತು ಸಮಯೋಚಿತ ತಪಾಸಣೆಯಿಂದ ಇದನ್ನು ತಡೆಯಬಹುದು.
Symptoms of magnesium deficiency: What are the first signs a doctor notices? – ತುಳುಟೈಮ್ಸ್
ಇದನ್ನೂ ಓದಿ :ಸಿಇಟಿ ವೇಳೆ ಜನಿವಾರ ತೆಗೆಸಿದ ಘಟನೆಯನ್ನು ಖಂಡಿಸಿದ ಸಚಿವ ದಿನೇಶ್ ಗುಂಡೂರಾವ್
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/EYKaZkoL8Qk?si=mhh3M2vjNkKCpbev











